Advertisement
ಅನುಮತಿ ಪಡೆದು ಕಾರ್ಯಾಚರಣೆ: ಕಾಡಾನೆಗಳಿಗೆ ರೆಡಿಯೋ ಕಾಲರ್ ಅಳವಡಿಕೆಗೆ ಅಭಿಮನ್ಯು ಸೇರಿದಂತೆ ಮೂರು ಕಾಡಾನೆ ಮತ್ತು 30 ಮಂದಿ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಒಂಟಿ ಸಲಗವನ್ನು ಸೆರೆಡಿದು ರೆಡಿಯೋ ಕಾಲರ್ ಅಳವಡಿಸಿ ಅದನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು. ಇನ್ನುಳಿದ ಮೂರು ಮೂರು ಹೆಣ್ಣಾನೆಗೆ ರೆಡಿಯೋ ಕಾಲರ್‌ಗಳನ್ನು ಮರು ಅಳವಡಿಸಿ ನಂತರ ಸೆರೆಡಿದ ಸ್ಥಳದಲ್ಲಿಯೇ ಬಿಡಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಮತಿ ಪಡೆದು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
Related Articles
Advertisement
ಮಲೆನಾಡು ಪ್ರದೇಶದಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದ್ದು, ಗ್ರಾಮಗಳೊಳಗೆ ಕಾಡಾನೆಗಳು ಹಾಡ ಹಗಲೇ ಸಂಚರಿಸುತ್ತಿವೆ. ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಮಲೆನಾಡ ಜನರು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಸರ್ಕಾರ ಆನೆ ಕಾರಿಡಾರ್ ನಿರ್ಮಾಣ ಸೇರಿದಂತೆ ಶಾಶ್ವತ ಕ್ರಮಗಳನ್ನು ಕೈಗೊಳ್ಳದೆ ಪ್ರತಿಭಟನೆಗಳು ಹೆಚ್ಚಿದಾಗ ಒಂದೆರೆಡು ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಿ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಈಗ ಕಾಡಾನೆಗಳಿಗೆ ರೆಡಿಯೋ ಕಾಲರ್ ಅಳವಡಿಕೆ ಮಾಡುವುದರಿಂದ ಕಾಡಾನೆಗಳ ಹಾವಳಿ ತಡೆಯಲು ಸಾಧ್ಯವಿಲ್ಲ. ಶಾಶ್ವತ ಕ್ರಮಗಳ ಬಗ್ಗೆ ಸರ್ಕಾರ ಚಿಂತಿಸಬೇಕು ಎಂದು ಮಲೆನಾಡು ಪ್ರದೇಶದ ಜನರ ಆಗ್ರಹವಾಗಿದೆ.
ನಾಲ್ಕು ಆನೆಗಳಿಗೆ ರೆಡಿಯೋ ಕಾಲರ್, ಒಂದು ಆನೆ ಹಿಡಿದು ಸ್ಥಳಾಂತರಿಸಲು ಅನುಮತಿ ನೀಡಲಾಗಿದೆ. ಸರ್ಕಾರದ ಆದೇಶದಂತೆ ಗುರುವಾರದಿಂದ ಕಾರ್ಯಾಚರಣೆ ನಡೆಯಲಿದೆ. ದಸರಾ ಆನೆ ಅಭಿಮನ್ಯು, ಗಣೇಶ, ಗೋಪಾಲ ಕೃಷ್ಣ ಎನ್ನುವ ಆನೆ ಬಂದಿದೆ. ಉಳಿದ ಎರಡು ಬೆಳಗ್ಗೆ ಭಾಗಿಯಾಗಲಿವೆ. ಪೂಜೆ ಸಲ್ಲಿಸಿದ ಬಳಿಕ ಡಿಎಫ್ಒ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತದೆ.
ವಿನಯ್‌ಚಂದ್ರ, ವಲಯ ಅರಣ್ಯಾಧಿಕಾರಿ, ಆಲೂರು ತಾಲೂಕು