ಆಲೂರು: ತಾಲೂಕಿನಲ್ಲಿ ಗುರುವಾರದಿಂದ ಪ್ರಾರಂಭವಾದ ಕಾಡಾನೆ ಹಿಡಿಯುವ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಿತು. ಎರಡು ದಿನಗಳ ಸತತ ಕಾರ್ಯಾಚರಣೆ ಬಳಿಕ ಹೆಣ್ಣಾನೆಯೊಂದು ಪ್ರತ್ಯಕ್ಷವಾಗಿದ್ದು, ಅರವಳಿಕೆ ಮದ್ದು ನೀಡಿ ರೆಡಿಯೋ ಕಾಲರ್ ಅನ್ನು ಮರ ಅಳವಡಿಕೆ ಮಾಡಲಾಯಿತು.
ಕಾರ್ಯಾಚರಣೆಯಿಂದ ಘಾಸಿಗೊಂಡ ಕಾಡಾನೆಗಳ ಗುಂಪು, ತಾಲೂಕಿನ ದೊಡ್ಡಬೆಟ್ಟದಿಂದ ಬೋಸ್ಮಾನಹಳ್ಳಿ ಹಾಗೂ ಪಾರ್ವತಮ್ಮ ಬೆಟ್ಟದ ಸುತ್ತಮುತ್ತಲಿನ ದಟ್ಟವಾದ ಕಾಡುಗಳಲ್ಲಿ ಸೇರಿಕೊಂಡಿವೆ. ಇದರಿಂದ ಕಾರ್ಯಾಚರಣೆಗೆ ಸ್ವಲ್ಪಮಟ್ಟಿಗೆ ಅಡಚಣೆ ಆಗಿದೆ. ನಂತರ ಮೂರು ಸಾಕಾನೆಗಳ ಮೂಲಕ ಸತತ 3 ಗಂಟೆಗಳ ಪ್ರಯತ್ನದ ಫಲವಾಗಿ ಹೆಣ್ಣಾನೆಯೊಂದನ್ನು ಗುರುತಿಸಿ, ಶಾರ್ಪ್ ಶೂಟರ್ ವೆಂಕಟೇಶ್ ರೈಫಲ್ ಮೂಲಕ ಅರವಳಿಕೆ ಮದ್ದು ಇಂಜೆಕ್ಟ್ ಮಾಡಿದರು.
ಅರವಳಿಕೆ ಮದ್ದು ನೀಡಿದ ನಂತರ ಆ ಆನೆಯು ಕಾಡಿನಲ್ಲಿ ಮರೆಯಾಗಿತ್ತು. ನಂತರ ಮರದ ಬುಡದಲ್ಲಿ ನಿಂತಿದ್ದ ಆನೆ ಯನ್ನು ಸಾಕಾನೆಗಳ ಸಹಕಾರದಿಂದ ಪತ್ತೆ ಹಚ್ಚಿ, ರೆಡಿಯೋಕಾಲರ್ ಅಳವಡಿಸಲಾಯಿತು. ಈ ಆನೆಗೆ ಹಿಂದೆ ನಡೆದಿದ್ದ ಕಾರ್ಯಾಚರಣೆ ವೇಳೆ ರೆಡಿಯೋ ಕಾಲರ್ ಅಳವಡಿಕೆ ಮಾಡಲಾಗಿತ್ತು.
ಆದರೆ, ಅದು ಎಲ್ಲೋ ಉದುರಿ ಹೋಗಿದ್ದರಿಂ ಅರಣ್ಯ ಅಧಿಕಾರಿಗಳು ಹೊಸದಾಗಿ ಅಳವಡಿಸಿದ್ದಾರೆ. ಉಳಿದೆರಡು ಹೆಣ್ಣಾನೆಗಳನ್ನು ಪತ್ತೆ ಹಚ್ಚಲು ಶನಿವಾರವೂ ಕಾರ್ಯಾಚರಣೆ ಮುಂದುವರಿಯಲಿದೆ. ಶುಕ್ರವಾರ ಮಧ್ಯಾಹ್ನ 3 ಗಂಟೆಯಲ್ಲಿ ಕುಶಾಲನಗರ ದುಭಾರೆ ಆನೆ ಶಿಬಿರದಿಂದ ಸುಗ್ರೀವ ಹಾಗೂ ಧನಂಜಯ ಹೆಸರಿನ ಎರಡು ಆನೆಗಳನ್ನು ಕರೆ ತರಲಾಗಿದ್ದು, ಶನಿವಾರ ಬೆಳಗ್ಗೆ 6.30ರಿಂದ ಇನ್ನೆರಡು ಹೆಣ್ಣಾನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲು ಪ್ರಯತ್ನ ಮುಂದುವರಿಸಲಾಗುವುದು, ಜನಸಾಮಾನ್ಯರ ಪ್ರಾಣಕ್ಕೆ ಕುತ್ತು ತಂದ ಪುಂಡಾನೆ ಸೆರೆ ಹಿಡಿದು, ಸ್ಥಳಾಂತರ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿ ಮೂಲಗಳು ತಿಳಿಸಿವೆ. ಆನೆ ಹಿಡಿಯುವ ಕಾರ್ಯಾಚರಣೆ ಪ್ರಾರಂಭವಾಗಿರು ವುದರಿಂದ ಕಾಡಾನೆಗಳು ಘಾಸಿಯಾಗಿವೆ. ಮಾವುತರು ಡಾಕ್ಟರ್ ಗಳ ಸಹಕಾರದೊಂದಿಗೆ ಶಾರ್ಪ್ ಶೂಟರ್‌ಗಳು ಸಾಕಾನೆ ಗಳೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ:ಶಾಲಾ ಮಕ್ಕಳಿಗೆ ನೇತ್ರ ತಪಾಸಣಾ ಶಿಬಿರ
ಮಲೆನಾಡು ಪ್ರದೇಶದಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳ ಹಾವಳಿ ತಡೆಗೆ ಕಾರ್ಯಾಚರಣೆ ಮುಂದುವರಿಸಲಾಗಿದೆ. ಕಳೆದ ಎರಡು ದಿನಗಳಿಂದ ರೆಡಿಯೋ ಕಾಲರ್ ಅವಳಡಿಸಲು ಕಾರ್ಯಾಚರಣೆ ನಡೆಸುತ್ತಿದ್ದರೂ ಕಾಡಾನೆಗಳ ಹಿಂಡು ಕಾಣಿಸಿಕೊಂಡಿರಲಿಲ್ಲ. ಆದರೆ, ಶುಕ್ರವಾರ ಕಾಡಾನೆಗಳು ಕಾಣಿಸಿಕೊಂಡಿವೆ. ಅದರಲ್ಲಿ ಒಂದು ಆನೆಗೆ ಯಶಸ್ವಿಯಾಗಿ ರೆಡಿಯೋ ಕಾಲರ್ ಅಳವಡಿಸಿ ಮತ್ತೆ ಕಾಡಿಗೆ ಬಿಡಲಾಗಿದೆ.
ಡಾ.ಬಸವರಾಜು, ಡಿಎಫ್ಒ