Advertisement

ಆಮ್ಲಜನಕ ಅಗತ್ಯ ತಗ್ಗಿಸುವ ವಿಕಿರಣ ಚಿಕಿತ್ಸೆ

12:35 AM May 28, 2021 | Team Udayavani |

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆದರೆ ರಾಜ್ಯದಲ್ಲಿ ಕೊರೊನಾ ಸೋಂಕುಪೀಡಿತರ ಚಿಕಿತ್ಸೆಗೆ ಆಮ್ಲಜನಕದ ಬೇಡಿಕೆ ಅರ್ಧಕ್ಕರ್ಧ ತಗ್ಗಲಿದೆ.

Advertisement

ಆಮ್ಲಜನಕ ಅವಲಂಬನೆಯನ್ನು ಕಡಿಮೆ ಮಾಡಿ, ಶೀಘ್ರ ಗುಣಮುಖರಾಗಿಸುವ ಪರಿಣಾಮಕಾರಿ ಚಿಕಿತ್ಸಾ ವಿಧಾನವಾದ ಲಘು ವಿಕಿರಣ ಚಿಕಿತ್ಸೆಯನ್ನು ರಾಜ್ಯದಲ್ಲಿ ಪ್ರಯೋಗಿಸಲು ಎಚ್‌ಸಿಜಿ ಆಸ್ಪತ್ರೆ ಮುಂದಾಗಿದೆ.

ಸದ್ಯ ಆಮ್ಲಜನಕ ಅವಲಂಬಿತ ಸೋಂಕುಪೀಡಿತರಿಗೆ ಕನಿಷ್ಠ 8-10 ದಿನ ಆಮ್ಲಜನಕ ನೀಡಲಾಗುತ್ತದೆ. ಅಂಥವರ ಶ್ವಾಸಕೋಶಕ್ಕೆ ಈ ಚಿಕಿತ್ಸೆ ನೀಡುವುದರಿಂದ ಅಲ್ಲಿ ವೈರಸ್‌ ನಾಶವಾಗಿ ಹಾನಿ ತಪ್ಪಲಿದೆ. ಇದರಿಂದ ಅವರ ಆಮ್ಲನಕ ಬೇಡಿಕೆ ಶೇ. 50ರಷ್ಟು ತಗ್ಗಲಿದೆ. ಮಾತ್ರವಲ್ಲ, 2-3 ದಿನಗಳಲ್ಲಿ ಆಮ್ಲಜನಕ ಅವಲಂಬನೆಯಿಂದ ಹೊರಬರುತ್ತಾರೆ. ಜತೆಗೆ ಸೋಂಕು ಉಲ್ಬಣಗೊಂಡು ರೋಗಿಗಳು ವೆಂಟಿಲೇಶನ್‌ ಅವಲಂಬನೆಯ ಹಂತ ತಲುಪುವುದು ಕಡಿಮೆಯಾಗಲಿದೆ.

ಏನೀ ಚಿಕಿತ್ಸೆ ? :

ಏಮ್ಸ್‌ ದಿಲ್ಲಿ, ಪಾಟ್ನಾ, ಚೆನ್ನೈಗಳಲ್ಲಿ ಈ ಥೆರಪಿ ಪ್ರಯೋಗ ನಡೆದು ಶೇ. 90ರಷ್ಟು ಉತ್ತಮ ಫ‌ಲಿತಾಂಶ ದೊರೆತಿದೆ. ಹುಬ್ಬಳ್ಳಿ , ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯಲ್ಲಿ ಇದರ ಪ್ರಯೋಗಕ್ಕೆ ಎಥಿಕಲ್‌ ಕಮಿಟಿಯ ಅನುಮತಿ ದೊರತಿದ್ದು, ಈ ವಾರದಲ್ಲಿಯೇ 20ಕ್ಕೂ ಹೆಚ್ಚು ಮಂದಿಯ ಮೇಲೆ ಪ್ರಯೋಗ ನಡೆಯಲಿದೆ.

Advertisement

ಹತ್ತೇ ನಿಮಿಷ ರೇಡಿಯೇಶನ್‌ :

ಈ ರೇಡಿಯೇಶನ್‌ ಥೆರಪಿಗೆ 10ರಿಂದ 15 ನಿಮಿಷ ಸಾಕು. ಈ ಚಿಕಿತ್ಸೆ ಪಡೆದ ರೋಗಿಗಳ ಪೈಕಿ ಶೇ. 90 ಮಂದಿಗೆ ಶ್ವಾಸಕೋಶ ಹಾನಿ ತಪ್ಪಿದೆ. ಇನ್ನೆರಡು ವಾರಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಎಚ್‌ಸಿಜಿ ವೈದ್ಯ ಡಾ| ಲೋಹಿತ್‌ ಜಿ. ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಿಕಿತ್ಸೆಯ ವೆಚ್ಚ ಉಳಿತಾಯ :

ಈ ಚಿಕಿತ್ಸೆಯಿಂದ ಚಿಕಿತ್ಸಾ ವೆಚ್ಚವೂ ಉಳಿತಾಯವಾಗಲಿದೆ. ಸದ್ಯ ಒಂದು ಆಮ್ಲಜನಕ ಹಾಸಿಗೆಗೆ ದಿನಕ್ಕೆ 8,500 ರೂ. ಶುಲ್ಕವಿದೆ. ಆದರೆ ಒಂದು ದಿನದ ಆಮ್ಲಜನಕ ಚಿಕಿತ್ಸಾ ವೆಚ್ಚದಲ್ಲೇ ಲಘು ವಿಕಿರಣ ಥೆರಪಿ ಲಭ್ಯವಾಗಲಿದ್ದು, 2-3 ದಿನಗಳಲ್ಲಿ ರೋಗಿ ಸಾಮಾನ್ಯ ಹಾಸಿಗೆಗೆ ವರ್ಗಾವಣೆಯಾಗುತ್ತಾನೆ. ಇದರಿಂದ ಶೇ. 70ರಷ್ಟು ಚಿಕಿತ್ಸಾ ವೆಚ್ಚ ಉಳಿತಾಯವಾಗಲಿದೆ. ರಾಜ್ಯದ ಎಲ್ಲ ಕ್ಯಾನ್ಸರ್‌ ಆಸ್ಪತ್ರೆಗಳಲ್ಲಿ ಈ ಥೆರಪಿ ಕೈಗೊಳ್ಳಬಹುದು ಎಂದು ಹುಬ್ಬಳ್ಳಿಯ ವಿಕಿರಣ ತಜ್ಞ ಡಾ| ವಿನಯ್‌ ತಿಳಿಸಿದ್ದಾರೆ.

 

ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next