Advertisement

ಯಶ್ ದಿರಿಸನ್ನು ಮಿಸ್ ಮಾಡಿಕೊಂಡ ರಾಧಿಕಾ

01:33 PM Dec 18, 2018 | |

ಸ್ಯಾಂಡಲ್‍ವುಡ್‍ನ ಸಿಂಡ್ರೆಲಾ ರಾಧಿಕಾ ಪಂಡಿತ್, ತಾವು ಗರ್ಭಿಣಿಯಾಗಿದ್ದಾಗ ಧರಿಸುತ್ತಿದ್ದ ಬಟ್ಟೆಯನ್ನು ಈಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹೌದು, ರಾಧಿಕಾ ಗರ್ಭಿಣಿಯಾಗಿದ್ದಾಗ ಪತಿ ಯಶ್​​ ಟೀ-ಶರ್ಟ್​ಗಳನ್ನು ಧರಿಸುತಿದ್ದರಂತೆ.

Advertisement

ಆದರೆ ಈಗ ಧರಿಸುವುದಕ್ಕೆ ಆಗಲ್ಲ, ನಾನು ಅದನ್ನು ಮಿಸ್​​ ಮಾಡಿಕೊಳ್ಳುತ್ತಿದ್ದೇನೆ ಎಂದು ಫೀಲ್​​ ಮಾಡಿಕೊಂಡಿದ್ದು, ತಮ್ಮ ಇನ್‍ಸ್ಟಾಗ್ರಾಮ್​​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಯಶ್ ಟಿ-ಶರ್ಟ್ ಧರಿಸಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್​​ ಖಾತೆಗೆ ಪೋಸ್ಟ್ ಮಾಡಿದ ತಕ್ಷಣ ಅಭಿಮಾನಿಗಳು, ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.

ನಟಿ ರಾಧಿಕಾ ಪಂಡಿತ್ ಅವರು ಡಿಸೆಂಬರ್ 2ರ ಭಾನುವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next