Advertisement

ಎರಡನೇ ಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್‌

11:15 PM Oct 30, 2019 | Lakshmi GovindaRaju |

ಬೆಂಗಳೂರು: ನಟಿ ರಾಧಿಕಾ ಪಂಡಿತ್‌ ಬುಧವಾರ ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದು, ಇನ್ನು 2-3 ದಿನಗಳಲ್ಲಿ ಇಬ್ಬರೂ ಆಸ್ಪತ್ರೆಯಿಂದ ಡಿಸಾcರ್ಜ್‌ ಆಗಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಯಶ್‌-ರಾಧಿಕಾ ಅವರ ಮನೆ ಮತ್ತು ಅಭಿಮಾನಿಗಳಲ್ಲಿ ಎರಡನೇ ಮಗುವಿನ ಸಂಭ್ರಮ ಜೋರಾಗಿದೆ.

Advertisement

ಯಶ್‌ ಅವರ ಕುಟುಂಬ ಕೂಡ ಸಂಭ್ರಮವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ಯಶ್‌ ತಾಯಿ ಪುಷ್ಪಾ, ಇಂದು ಬೆಳಗ್ಗೆ ರಾಧಿಕಾಳನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. 9 ಗಂಟೆಗೆ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. ಕರ್ನಾಟಕದ ಜನತೆಯ ಆಶೀರ್ವಾದ ಇಬ್ಬರ ಮೇಲೆ ಹೇಗಿತ್ತೋ, ಹಾಗೆಯೇ ನಮ್ಮ ಮೊಮ್ಮಕ್ಕಳ ಮೇಲೆಯೂ ಇರಲಿ. ಮೊಮ್ಮಗನನ್ನು ನೋಡಿದೆ. ಆತ ಯಶ್‌ ನಂತೆಯೇ ಇದ್ದಾನೆ. ಅಮ್ಮ-ಮಗು ಇಬ್ಬರೂ ಚೆನ್ನಾಗಿದ್ದಾರೆ.

ದೇವರ ಆಶೀರ್ವಾದದಿಂದ ಇಂದು ನಾವು ಖುಷಿಯಾಗಿದ್ದೇವೆ. ನನ್ನ ಸೊಸೆ ಕೂಡ ಆರೋಗ್ಯವಾಗಿದ್ದಾಳೆ. ಐರಾ ಕೂಡ ತಮ್ಮನನ್ನು ನೋಡಿ ಖುಷಿಪಡುತ್ತಿದ್ದಾಳೆ ಎಂದರು. ಡಿಸೆಂಬರ್‌ 9, 2016ರಂದು ಯಶ್‌ ಹಾಗೂ ರಾಧಿಕಾ ಪಂಡಿತ್‌ ಹಸೆಮಣೆ ಏರಿದ್ದರು. 2018ರ ಡಿಸೆಂಬರ್‌ 2 ರಂದು ರಾಧಿಕಾ ಮೊದಲ ಮಗು ಐರಾಳಿಗೆ ಜನ್ಮ ನೀಡಿದ್ದರು. ಅದಾದ ಒಂಭತ್ತು ತಿಂಗಳೊಳಗಾಗಿ, ರಾಧಿಕಾ ಇನ್ನೊಂದು ಮಗುವಿಗೆ ಜನ್ಮ ನೀಡಿದ್ದು, ಅಭಿಮಾನಿಗಳು ಯಶ್‌-ರಾಧಿಕಾ ಜೋಡಿಗೆ ಶುಭ ಕೋರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next