Advertisement

ಮತ್ತೆ ಥ್ರಿಲ್ಲರ್‌ನಲ್ಲಿ ರಾಧಿಕಾ

11:58 AM May 22, 2017 | |

ಥ್ರಿಲ್ಲರ್‌, ಮರ್ಡರ್‌ ಮಿಸ್ಟ್ರಿ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಚಿತ್ರರಂಗಕ್ಕೆ ಬರುವ ಹೊಸಬರಿಗೆ ಆ ಜಾನರ್‌ ಅಂದರೆ ತುಂಬಾ ಇಷ್ಟದಂತೆ ಕಾಣುತ್ತಿದೆ. ಈಗ ಹೊಸಬರ ತಂಡ ಕೂಡಾ ಥ್ರಿಲ್ಲರ್‌ ಸಿನಿಮಾದೊಂದಿಗೆ ಬಂದಿದ್ದು, ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಬಿಬಿ5′. ಈ ಚಿತ್ರ ಆರಂಭವಾಗಿರುವ ಬಗ್ಗೆ ನಿಮಗೆ ಗೊತ್ತಿರಬಹುದು.

Advertisement

ಈಗ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬಿಡುಗಡೆಯ ತಯಾರಿಯಲ್ಲಿದೆ. ರಾಧಿಕಾ ಚೇತನ್‌, ರಾಜೇಶ್‌ ನಟರಂಗ ಚಿತ್ರದ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಜನಾರ್ಧನ್‌ ಎನ್‌ ಎನ್ನುವವರು ಈ ಸಿನಿಮಾದ ನಿರ್ದೇಶಕರು. ಈಗಾಗಲೇ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಟ್ರೇಲರ್‌ ಅನ್ನು ಜನ ಇಷ್ಟಪಟ್ಟ ಖುಷಿ ಚಿತ್ರತಂಡದ್ದು. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಜನಾರ್ಧನ್‌, “ಇದೊಂದು ಥ್ರಿಲ್ಲರ್‌ ಸಿನಿಮಾ.

ಒಂದು ಕೊಲೆಯ ಜಾಡು ಹಿಡಿದು ಇಡೀ ಕಥೆ ಸಾಗುತ್ತದೆ. ಒಬ್ಬ ಉದಯೋನ್ಮುಖ ಬರಹಗಾರ ಹಾಗೂ ಪ್ರಸಿದ್ಧ ಸಿನಿಮಾ ನಿರ್ದೇಶಕ ಭೇಟಿಯಾದ ಮೇಲೆ ದಿಢೀರನೇ ಕಿಡ್ನಾಪ್‌, ಮರ್ಡರ್‌ ನಡೆಯುತ್ತದೆ. ಅಷ್ಟಕ್ಕೂ ಈ ಘಟನೆಗಳಿಗೆ ಕಾರಣವೇನು, ಅದರ ಹಿಂದಿರುವ ಕಾರಣಗಳೇನು, ಅಸಲಿಗೆ ಏನು ನಡೆದಿದೆ ಎಂಬುದನ್ನು ತನಿಖೆ ಮಾಡುವುದು ಕಥೆಯ ಲೈನ್‌’ ಎಂದು ಚಿತ್ರದ ಬಗ್ಗೆ ವಿವರ ಕೊಡುತ್ತಾರೆ.

ಇನ್ನು ಚಿತ್ರದಲ್ಲಿ ನಟಿಸಿರುವ ರಾಧಿಕಾ ಚೇತನ್‌ ಅವರಿಗೆ “ಬಿಬಿ5′ ಕಥೆ ತುಂಬಾ ಇಂಟರೆಸ್ಟಿಂಗ್‌ ಅನಿಸಿತಂತೆ. ಹಾಗಾಗಿ ಅವರು ಸಿನಿಮಾ ಒಪ್ಪಿಕೊಂಡರಂತೆ.ಈಗ ಸಿನಿಮಾ ಸಿದ್ಧವಾಗಿದ್ದು, ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿರುವ ಖುಷಿ ರಾಧಿಕಾಗಿದೆ.  ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ರಾಜೇಶ್‌ ನಟರಂಗ  ಅವರಿಗೆ ಹೊಸಬರ ಜೋಶ್‌, ಫ್ರೆಶ್‌ನೆಸ್‌ ಖುಷಿಯಾಯಿತಂತೆ.

ಹೊಸಬರ ತಂಡಕ್ಕೆ ಯಶಸ್ಸು ಸಿಗಲಿ ಎಂಬುದು ರಾಜೇಶ್‌ ನಟರಂಗ ಮಾತು. ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರು ರಶ್ಮಿ ಪ್ರಭಾಕರ್‌ ಪ್ರಮುಖ ಪಾತ್ರ ಮಾಡಿದ್ದಾರೆ. “ಜಟ್ಟ’ ಗಿರಿರಾಜ್‌ ಇಲ್ಲಿ ನಟನಾಗಿ ಕಾಣಿಸಿಕೊಂಡಿದ್ದು, ಅವರದ್ದು ಒಂದು ಆಸಕ್ತಿಕರ ಪಾತ್ರವಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next