Advertisement

Body shaming: ನಿನ್ನ ಸ್ತನಗಳು ಯಾಕೆ…ಬಾಡಿ ಶೇಮಿಂಗ್‌ ಬಗ್ಗೆ ಮಾತನಾಡಿದ ʼಕಬಾಲಿʼ ನಟಿ

12:31 PM Apr 13, 2023 | Team Udayavani |

ಮುಂಬಯಿ: ಬಾಲಿವುಡ್‌ ನ ಪ್ರತಿಭಾವಂತ ನಟಿ ರಾಧಿಕಾ ಆಪ್ಟೆ ಬೋಲ್ಡ್‌ & ಗ್ಲಾಮ್‌ ಪಾತ್ರಗಳಿಂದಲೇ ಹೆಚ್ಚು ಗಮನ ಸೆಳೆದವರು. ಬಾಲಿವುಡ್‌ ಮಾತ್ರವಲ್ಲದೆ ತನ್ನ ಪ್ರತಿಭೆಯಿಂದ ದಕ್ಷಿಣ ಭಾರತದ ಸಿನಿಮಾದಲ್ಲೂ ಅವರು ನಟಿಸಿದ್ದಾರೆ.

Advertisement

ಇದೀಗ ʼಕಬಾಲಿʼ ನಟಿ ರಾಧಿಕಾ ಆಪ್ಟೆ ಚಿತ್ರರಂಗಕ್ಕೆ ಬಂದ ಆರಂಭಿಕ ದಿನಗಳಲ್ಲಿ ಎದುರಿಸಿದ ಸವಾಲುಗಳು ಬಗ್ಗೆ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು,ʼಬದ್ಲಾಪುರ್‌ʼ ರಿಲೀಸ್‌ ಆಗುವವರೆಗೆ ನನ್ನನ್ನು ಗ್ರಾಮದ ಹುಡುಗಿಯಾಗಿಯೇ ಈಕೆ ದೀರ್ಘಕಾಲದವರಗೆ ಇರುತ್ತಾಳೆ ಎನ್ನುವುದನ್ನು ಅನೇಕರು ಅಂದುಕೊಂಡಿದ್ದರು. ನಾನು ಸೆಕ್ಸ್‌ ಕಾಮಿಡಿಗಳನ್ನು ಮಾತ್ರ ಮಾಡಬಲ್ಲೆ ಎಂದು ಅವರು ಅಂದುಕೊಂಡಿದ್ದರು. ನಾನು ಅಂಥದ್ದನ್ನು ನಿಲ್ಲಿಸಿದೆ ಹಾಗೂ ಅವರಿಗೆ ನಾನೆಂದೂ ಹೌದೆಂದು ಹೇಳಿಲ್ಲ ಎಂದರು.

ಇದನ್ನೂ ಓದಿ: Sanjay Dutt: ‘ಕೆಡಿʼ ವಿಲನ್‌ ಗೆ ಗಾಯ; ಸುಳ್ಳು ಸುದ್ದಿಗೆ ಸ್ಪಷ್ಟನೆ ಕೊಟ್ಟ ಸಂಜು ಬಾಬಾ

ಒಮ್ಮೆ ತೂಕವನ್ನು ಇಳಿಸಿಕೊಳ್ಳುವ ವಿಚಾರದಲ್ಲಿ ನಾನು ಆ ಪಾತ್ರವನ್ನು ಕಳೆದುಕೊಂಡೆ. ನಾನು ಹೆಚ್ಚು ದಪ್ಪಯಿದ್ದ ಕಾರಣಕ್ಕೆ ಸಿನಿಮಾಗಳನ್ನು ಕಳೆದುಕೊಂಡೆ. ಹೌದು ಆರಂಭದಲ್ಲಿದ್ದಾಗ ನನಗೂ ಇಂಥ ಅನುಭವಾಗಿದೆ. ನಿನ್ನ ಮೂಗು ಯಾಕೆ ಸರಿಯಿಲ್ಲ, ನಿನ್ನ ಸ್ತನಗಳು ಯಾಕೆ ದೊಡ್ಡದಿಲ್ಲ ಎಂದಿದ್ದರು. ಆರಂಭಿಕ ದಿನಗಳ ಬಳಿಕ ಮಧ್ಯದಲ್ಲಿ ದೇಹದ ಬಗ್ಗೆ ಕಮೆಂಟ್‌ ಮಾಡುತ್ತಾರೆ. ಇದರ ಬಗ್ಗೆ ಜಾಗೃತಿ ಇರುವ ಕಾರಣದಿಂದ ಇವೆಲ್ಲದರ ಬಗ್ಗೆ ಈಗ ನೀವು ಮುಕ್ತವಾಗಿ ಮಾತನಾಡಬಹುದು. ಒಂದು ವೇಳೆ ಈಗ ನನಗೆ ಆ ರೀತಿ ಯಾರಾದರೂ ಹೇಳಿದರೆ ನಾನು ಅವರ ಪ್ರಾಜೆಕ್ಟ್‌ ನಿಂದ ಹೊರ ಬರುತ್ತೇನೆ. ಅವರ ವಿರುದ್ಧ ಆಕ್ರೋಶ ಹೊರ ಹಾಕುತ್ತೇನೆ ಎಂದು ನಟಿ ಹೇಳಿದ್ದಾರೆ.

Advertisement

ʼಮಿಸೆಸ್.‌ ಅಂಡರ್‌ ಕವರ್‌ʼ ಚಿತ್ರದಲ್ಲಿ ರಾಧಿಕಾ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಏ.14 ರಂದು ರಿಲೀಸ್‌ ಆಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next