Advertisement

Rachika Suresh; ನವಪ್ರತಿಭೆಯ ಕಲರ್ ಫುಲ್ ಕನಸು

02:34 PM Sep 11, 2023 | Team Udayavani |

ರೈತನ ಮಗಳೊಬ್ಬಳು ಸಿನಿಮಾ ಹಾಗೂ ಮಾಡೆಲಿಂಗ್‌ ಕ್ಷೇತ್ರಗಳಲ್ಲಿ ಗುರುತಿಸಿ ಕೊಂಡಿದ್ದಾರೆ. ಶ್ರವಣಬೆಳಗೊಳದ ರೈತ ಕುಟುಂಬದಲ್ಲಿ ಜನಿಸಿದ ರಚಿಕಾ ಸುರೇಶ್‌ ಈಗ ಮಾಡೆಲಿಂಗ್‌ ಹಾಗೂ ಸಿನಿಮಾದಲ್ಲಿ ಬಿಝಿಯಾಗುತ್ತಿದ್ದಾರೆ.

Advertisement

ಈಗಾಗಲೇ ಅವರು 14 ಫ್ಯಾಷನ್‌ ಷೋಗಳಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದಿದ್ದಾರೆ. ಜೊತೆಗೆ ಕನ್ನಡ, ತಮಿಳು ಚಿತ್ರರಂಗದಲ್ಲೂ ನಾಯಕಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕನ್ನಡ ಚಿತ್ರವೊಂದರಲ್ಲಿ ಹಾಗೂ ತಮಿಳು ಭಾಷೆಯ ಎಂಜಾಯ್‌ ಎನ್ನುವ ಸಿನಿಮಾದಲ್ಲಿ ರಚಿಕಾ ಸುರೇಶ್‌ ನಾಯಕಿಯಾಗಿ ಲೀಡ್‌ ರೋಲ್‌ ಮಾಡಿದ್ದಾರೆ.

ಈಗಾಗಲೇ ಹಲವು ಬ್ರಾಂಡ್‌ಗಳಿಗೆ ಮಾಡೆಲ್‌ ಆಗಿಯೂ ರಚಿಕಾ ತಮ್ಮ ಛಾಪು ಮೂಡಿಸಿದ್ದಾರೆ.ಜೊತೆಗೆ ಶ್ರೀಲಂಕಾ ಸೇರಿದಂತೆ ಹಲವಾರು ಇಂಟರ್‌ ನ್ಯಾಷನಲ್‌ ಫ್ಯಾಷನ್‌ ಷೋಗಳಲ್ಲಿ ಭಾಗವಹಿಸಿದ್ದಾರೆ. ರಚಿಕಾ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ವಿಶೇಷವಾಗಿ ರಾಧಾ ಕಾನೆಪ್ಟ್ ನಲ್ಲಿ ಫೋಟೋಶೂಟ್‌ ಮಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಭಿನ್ನ ಚಿತ್ರಗಳಲ್ಲಿ ಮಿಂಚುವ ಆಸೆ ರಚಿಕಾ ಅವರದು.

Advertisement

Udayavani is now on Telegram. Click here to join our channel and stay updated with the latest news.

Next