Advertisement

Fire Fly ಚಿತ್ರಕ್ಕೆ ನಾಯಕಿ; ರಚನಾ ತೆಕ್ಕೆಗೆ ಮತ್ತೊಂದು ಸಿನಿಮಾ

03:14 PM Jul 22, 2024 | Team Udayavani |

ಯುವ ಪ್ರತಿಭೆ ವಂಶಿ ನಟಿಸಿ, ನಿರ್ದೇಶಿಸುತ್ತಿರುವ “ಫೈರ್‌ ಫ್ಲೈ’ ಸಿನಿಮಾಕ್ಕೆ ನಾಯಕಿಯ ಆಯ್ಕೆಯಾಗಿದೆ. ರಚನಾ ಇಂದರ್‌ ಈ ತಂಡ ಸೇರಿಕೊಂಡಿದ್ದಾರೆ.

Advertisement

“ಲವ್‌ ಮಾಕ್ಟೇಲ್’, “ಹರಿಕಥೆ ಅಲ್ಲ ಗಿರಿಕಥೆ’, “ತ್ರಿಬಲ್‌ ರೈಡಿಂಗ್‌ ‘,”ನಾಟೌಟ್‌’ ಸಿನಿಮಾಗಳಲ್ಲಿ ಬಬ್ಲಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಚನಾ ಇಂದರ್‌ ಹೊಸ ಚಿತ್ರದಲ್ಲಿ ವಂಶಿಗೆ ಜೋಡಿಯಾಗಿ ಅಭಿನಯಿಸಿದ್ದಾರೆ.

ನೇಹಾ ಎಂಬ ಪಾತ್ರದಲ್ಲಿ ರಚನಾ ಬಣ್ಣ ಹಚ್ಚಿದ್ದು, ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. “ಈ ಸಿನಿಮಾದಲ್ಲಿ ನೇಹಾ ಎಂಬ ಪಾತ್ರ ಮಾಡಿದ್ದೇನೆ. ನೇಹಾ ಬದುಕನ್ನು ತುಂಬಾ ಇಷ್ಟಪಡುತ್ತಾಳೆ. ಎಂಜಾಯ್‌ ಮಾಡುತ್ತಾಳೆ. ಭವಿಷ್ಯದ ಬಗ್ಗೆ ಯೋಚನೆ ಮಾಡೋದಿಲ್ಲ. ಸಿನಿಮಾವನ್ನು ನಾನು ನೋಡಲು ಕಾತರಳಾಗಿದ್ದಾನೆ. ಚಿತ್ರದ ಒಂದಷ್ಟು ತುಣುಕು ನೋಡಿದಾಗ ಮನರಂಜನೆ ನೀಡುವ ಸಿನಿಮಾ ಎನಿಸಿತು. ವಂಶಿ ತುಂಬಾ ಹಾರ್ಡ್‌ವರ್ಕ್‌ ಮಾಡಿದ್ದಾರೆ’ ಎನ್ನುತ್ತಾರೆ.

ಶಿವರಾಜ್‌ ಕುಮಾರ್‌ ಪುತ್ರಿ ನಿವೇದಿತಾ ಶಿವರಾಜ್‌ ಕುಮಾರ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸುಧಾರಾಣಿ, ಅಚ್ಯುತ್‌ ಕುಮಾರ್‌ ಸೇರಿದಂತೆ ಹಲವರು ನಟಿಸಿದ್ದಾರೆ.

Advertisement

ಈ ಸಿನಿಮಾವನ್ನು ಯುವ ನಟ ವಂಶಿ ನಿರ್ದೇಶನ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ನಾಯಕರಾಗಿಯೂ ಈ ಮೂಲಕ ವಂಶಿ ಕನ್ನಡಕ್ಕೆ ಪರಿಚಯ ಆಗುತ್ತಿದ್ದಾರೆ. ಚಿತ್ರಕ್ಕೆ ಅಭಿಲಾಷ್‌ ಕಳತ್ತಿ ಛಾಯಾಗ್ರಹಣ, ಚರಣ್‌ ರಾಜ್‌ ಸಂಗೀತ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next