Advertisement

ಕಾಫಿ ನಾಡಿಗೆ ಬಂದಿಳಿದ ರೇಸ್‌ ಕಾರುಗಳು

10:46 AM Nov 23, 2017 | |

ಚಿಕ್ಕಮಗಳೂರು: ಪ್ರತಿಷ್ಠಿತ ಏಷ್ಯಾ ಪೆಸಿಫಿಕ್‌ ಮತ್ತು ಇಂಡಿಯನ್‌ ನ್ಯಾಷನಲ್‌ ರ್ಯಾಲಿ ಶುಕ್ರವಾರದಿಂದ 3 ದಿನ ಚಿಕ್ಕಮಗಳೂರಿನಲ್ಲಿ ನಡೆಯಲಿದೆ. ರ್ಯಾಲಿಯಲ್ಲಿ ಧೂಳೆಬ್ಬಿಸಲು ಕಾರುಗಳು ಈಗಾಗಲೆ ನಗರಕ್ಕೆ ಆಗಮಿಸಿದ್ದು ಅಭಿಮಾನಿಗಳು ರ್ಯಾಲಿ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ.

Advertisement

ಏಷ್ಯಾ ಫೆಸಿಫಿಕ್‌ ರ್ಯಾಲಿಯ ಕಳೆದ ಬಾರಿಯ ಚಾಂಪಿಯನ್‌ ಗೌರವ್‌ ಗಿಲ್‌ ಈ ಬಾರಿಯೂ ಮತ್ತೂಮ್ಮೆ ಚಾಂಪಿಯನ್‌ಶಿಪ್‌
ತಮ್ಮದಾಗಿಸಿ ಕೊಳ್ಳಲು ಹೋರಾಟ ನಡೆಸಲಿದ್ದಾರೆ. ಗೌರವ್‌ ಗಿಲ್‌ ಓಡಿಸಲಿರುವ ಕಾರು ಸಹ ಈಗಾಗಲೆ ನಗರಕ್ಕೆ ಆಗಮಿಸಿದ್ದು, ಟೀಮ್‌ ಎಂ.ಆರ್‌.ಎಫ್‌. ತಂಡದ ಮೆಕ್ಯಾನಿಕ್‌ಗಳು ಕಾರನ್ನು ಸಿದ್ಧಪಡಿಸುತ್ತಿದ್ದಾರೆ. ಎಪಿಆರ್‌ಸಿ ಸ್ಪರ್ಧಾಳುಗಳು ಒಟ್ಟು 502 ಕಿ.ಮೀ. ದೂರವನ್ನು ಕ್ರಮಿಸಬೇಕಾಗಿದ್ದು, ಅದರಲ್ಲಿ 207.54 ಕಿ.ಮೀ. ವಿಶೇಷ ಹಂತಗಳನ್ನು ಒಳಗೊಂಡಿದೆ. ಐಎನ್‌ಆರ್‌ಸಿ ಸ್ಪರ್ಧಿಗಳು 260 ಕಿ.ಮೀ., ಆಂಬರ್‌ ವ್ಯಾಲಿಯಲ್ಲಿ ನಡೆಯುವ ಪ್ರೇಕ್ಷಕರ ವಿಶೇಷ ಹಂತದ ರ್ಯಾಲಿ ಸುಮಾರು 2.2 ಕಿ.ಮೀ. ದೂರ ಕ್ರಮಿಸಬೇಕು. ಈ ವಿಶೇಷ ಹಂತದ ರ್ಯಾಲಿ ಆಂಬರ್‌ ವ್ಯಾಲಿ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಆರಂಭವಾಗುತ್ತದೆ. ಉಳಿದಂತೆ ಎಪಿಆರ್‌ಸಿ ಮತ್ತು ಐಎನ್‌ಆರ್‌ಸಿ ರ್ಯಾಲಿಗಳು ಎಬಿಸಿ ಆವರಣದಲ್ಲಿ ಶನಿವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಗುತ್ತದೆ.

ಈ ಎಲ್ಲಾ ಕಾರುಗಳು ಮೂಡಿಗೆರೆ ಸಮೀಪದ ಚಟ್ನಹಳ್ಳಿ ಕಾಫಿ ತೋಟದಲ್ಲಿ ಸಂಚರಿಸಿ ಮೊದಲ ಹಂತ ಮುಗಿಸಲಿವೆ.
ಜಾಗರ ಮನೆ ಮುಖಾಂತರ ಕುಂಬರಗೋಡು, ಚಂದ್ರಾಪುರದಲ್ಲಿ 3ನೇ ಹಂತ ಮುಕ್ತಾಯಗೊಳ್ಳಲಿದೆ. ಭಾನುವಾರ ಮತ್ತೆ ಬೆಳಿಗ್ಗೆ ಮೂಡಸಸಿ, ಜಾಗರಮನೆ, ಮತ್ತೆ ಮೂಡಸಸಿ, ಜಾಗರಮನೆಯನ್ನು ಸುತ್ತಿ  ಕೊಂಡು ಎಬಿಸಿ ಆವರಣಕ್ಕೆ ಬಂದು ಸ್ಪರ್ಧೆ ಮುಕ್ತಾಯಗೊಳ್ಳಲಿದೆ. ಭಾನುವಾರ ಮಧ್ಯಾಹ್ನ ಎಬಿಸಿ ಆವರಣದಲ್ಲಿ ಪೋಡಿಯಂ ಅಂತ್ಯದ ನಂತರ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next