Advertisement
ಇದು ದಿನನಿತ್ಯದ ಸಮಸ್ಯೆಯಾಗಿದೆ. ಬನಹಟ್ಟಿ ಬಸ್ ನಿಲ್ದಾಣದ ಹತ್ತಿರದ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯ ಮೇಲೆ, ತಮ್ಮಣ್ಣಪ್ಪ ಚಿಕ್ಕೋಡಿ ರಸ್ತೆ ಮೇಲೆ ಮತ್ತು ರಬಕವಿಯ ಈಶ್ವರ ಸಣಕಲ್ ರಸ್ತೆ ಮಾರ್ಗದಲ್ಲಿ ಬೆಳೆಗ್ಗೆಯಿಂದ ಮಧ್ಯಾಹ್ನದವರೆಗೆ ಬೀದಿ ಜಾನುವಾರುಗಳು ಮಲಗಿಕೊಂಡು ರಸ್ತೆ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿವೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದೆ. ಇನ್ನೂ ಬಸ್ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗಿದೆ.
Related Articles
Advertisement
ಇನ್ನೂ ಬೀದಿ ನಾಯಿಗಳಿಗೆ ಜನರು ಬೇಸತ್ತು ಹೋಗಿದ್ದಾರೆ. ಕತ್ತೆ ಮತ್ತ ಬೀದಿ ನಾಯಿಗಳಿಂದಾಗಿ ದಿನನಿತ್ಯ ಅಪಘಾತಗಳು ನಡೆಯುತ್ತಿವೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರಂತೂ ಬಿದ್ದ ಪ್ರಕರಣಗಳು ಸಾಕಷ್ಟಾಗಿವೆ. ಸ್ಥಳೀಯ ಜೇಡರ ದಾಸಿಮಯ್ಯ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಅಂಗಡಿಕಾರರು ಸಂಜೆ ಕಸವನ್ನು ಹಾಕಿ ಹೋಗುತ್ತಿದ್ದಾರೆ. ಈ ಕಸವನ್ನ ತಿನ್ನಲು ಐವತ್ತಕ್ಕಿಂತ ಹೆಚ್ಚು ನಾಯಿಗಳು ಇಲ್ಲಿ ಸೇರಿರುತ್ತವೆ. ಇವು ಜಗಳವಾಡುತ್ತ ರಸ್ತೆಗೆ ಬರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.-ಗೌರಿ ಮಿಳ್ಳಿ ನಗರಸಭಾ ಸದಸ್ಯೆ ಈಗಾಗಲೇ ಕತ್ತೆ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಎರಡು ಸಭೆಯನ್ನು ಕೂಡಾ ಮಾಡಲಾಗಿದೆ. ಕೆಲವು ಬಾರಿ ದಂಡವನ್ನು ಕೂಡಾ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೊಂದು ಸಭೆಯನ್ನು ಮಾಡಿ ಕತ್ತೆಯ ಮಾಲೀಕರಿಗೆ ಕಟ್ಟು ನಿಟ್ಟಾಗಿ ತಿಳಿಸುವುದರ ಜೊತೆಗೆ ಇನ್ನಷ್ಟು ದಂಡವನ್ನು ವಿಧಿಸಲಾಗುವುದು ಎಂದು ತಿಳಿಸಲಾಗುವುದು.
-ಜಗದೀಶ ಈಟಿ ಪೌರಾಯುಕ್ತರು ರಬಕವಿ ಬನಹಟ್ಟಿ -ಕಿರಣ ಶ್ರೀಶೈಲ ಆಳಗಿ