ರಬಕವಿ-ಬನಹಟ್ಟಿ : ನಗರದ ಆರಾಧ್ಯ ದೇವರಾದ ಕಾಡಸಿದ್ಧೇಶ್ವರ ದೇವಸ್ಥಾನದ ಮೇಲೆ ಇದೇ 19 ರಂದು ಪ್ರತಿಷ್ಠಾಪಿಸಲಾಗುವ ಬಂಗಾರ ಲೇಪಿತ ಕಳಸದ ಭವ್ಯ ಮೆರವಣಿಗೆ ಸೋಮವಾರ ನಗರದ ಪ್ರಮುಖ ಬೀದಿಗಳಲ್ಲಿ ಸಂಭ್ರಮ ಸಡಗರದಿಂದ ನೆರವೇರಿತು.
ಸ್ಥಳೀಯ ಹಿರೇಮಠದ ಶರಣಬಸವ ಶಿವಾಚಾರ್ಯರು ಮತ್ತು ನಗರದ ಮುಖಂಡರೂ ಸಾಮೂಹಿಕ ಮಂಗಳಾರುತಿಯನ್ನು ನೆರವೇರಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕಳಸವನ್ನು ಪ್ರತಿಷ್ಠಾಪಿಸಲಾಗಿದ್ದ ರಥವನ್ನು ಹೂ ಮಾಲೆ ಹಾಗೂ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ನೂರಾರು ಮಹಿಳೆಯರು ಆರತಿ ಮತ್ತ ಕುಂಭವನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಳಸದ ಮೆರವಣಿಗೆ ನಡೆಯುವ ಮಾರ್ಗವನ್ನು ರಂಗೋಲಿಯಿಂದ ಶೃಂಗರಿಸಲಾಗಿತ್ತು.
ನಗರದ ವೈಭವ ಚಿತ್ರಮಂದಿರದಿಂದ ಪ್ರಾರಂಭವಾದ ಕಳಸದ ಮೆರವಣಿಗೆ ನಗರದ ಸೋಮವಾರ ಪೇಟೆ, ಶಂಕರಲಿಂಗ ದೇವಸ್ಥಾನ, ವಿಠ್ಠಲ ಮಂದಿರ, ಹಳೇ ಲೈಬ್ರರಿ, ವೀರಭಧ್ರೇಶ್ವರ ದೇವಸ್ಥಾನ, ಗಾಂಧಿ ಸರ್ಕಲ್, ಮಂಗಳವಾರ ಪೇಟೆ, ನಡು ಚೌಕಿ, ಅರುಣ ಚಿತ್ರ ಮಂದಿರ ಮೂಲಕ ಪ್ರಮುಖ ಬೀದಿಗಳಲ್ಲಿ ಹಾಯ್ದು ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ವರೆಗೆ ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ವಿಜ್ರಂಭಣೆಯಿಂದ ನಡೆಯಿತು.
ಮೆರವಣಿಗೆಯಲ್ಲಿ ಹಲಗೆ ಮೇಳ, ಸಂಭಾಳ, ವೀರಗಾಸೆ ಪುರವಂತರ ಕಲಾ ತಂಡ ಹಾಗೂ ಕರಡಿವಾದನ ಸೇರಿದಂತೆ ವಿವಿಧ ಮೇಳಗಳು ಮೆರವಣಿಗೆಗೆ ಕಳೆ ತಂದವು. ಆರತಿ ಹಾಗೂ ಕುಂಬ ಹೊತ್ತ ಸಾವಿರಾರೂ ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶ್ರೀಪಾದ ಬಾಣಕಾರ, ರಾಜಶೇಖರ ಸೋರಗಾಂವಿ, ಭೀಮಶಿ ಮಗದುಮ್, ಗಂಗಪ್ಪ ಮುಗತಿ, ಸಿದ್ದನಗೌಡ ಪಾಟೀಲ, ರಾಜಶೇಖರ ಮಾಲಾಪುರ, ಪಂಡಿತ ಪಟ್ಟಣ, ಶಂಕರ ಜುಂಜಪ್ಪನವರ, ಈಶ್ವರ ಬಿದರಿ, ಮಲ್ಲಿಕಾರ್ಜುನ ತುಂಗಳ, ಮಲ್ಲಿನಾಥ ಕಕಮರಿ, ಮಹಾಶಾಂತ ಶೆಟ್ಟಿ, ಪ್ರಶಾಂತ ಕೊಳಕಿ, ಮಲಪ್ಪ ಜನವಾಡ, ದಾನಪ್ಪ ಹುಲಜತ್ತಿ, ಪಂಡಿತ ಪಟ್ಟಣ, ಶಂಕರ ಬಾಣಕಾರ, ಸಿದ್ದು ಮುನ್ನೋಳ್ಳಿ, ಅಶೋಕ ಭದ್ರನ್ನವರ, ಅಣ್ಣಪ್ಪ ಬಾಣಕಾರ, ಅಶೋಕ ರಾವಳ, ಶೇಖರ ಜವಳಗಿ, ಬ್ರಿಹ್ಮೋಹನ ಡಾಗಾ, ಶಾಂತಾ ಮಂಡಿ, ಶಾಂತಾ ಸೋರಗಾವಿ, ಪವಿತ್ರಾ ತುಕ್ಕನ್ನವರ, ಮಾಲಾ ಬಾವಲತ್ತಿ, ಶೈಲಜಾ ನುಚ್ಚಿ, ಮಹಾನಂದಾ ಕುಳ್ಳಿ, ಸಾವಿತ್ರಿ ಕಾಡದೇವರ, ಪಾರ್ವತಿ ಪೂಜಾರಿ, ಮಹಾದೇವಿ ಕಾಡದೇವರ, ಅರ್ಚಕರಾದ ಗಿರಮಲ್ಲಯ್ಯ ಕಾಡದೇವರ, ಪರಮೇಶ್ವರ ಕಾಡದೇವರ, ರುದ್ರಯ್ಯ ಕಾಡದೇವರ, ಅಶೋಕ ಕಾಡದೇವರ, ನಿಜಗುಣಿ ಕಾಡದೇವರ, ಮಲ್ಲಪ್ಪ ಹೂಲಿ, ಶಿವಕುಮಾರ ಜುಂಜಪ್ಪನವರ, ಪ್ರಭಾಕರ ಮೊಳೇದ, ರಾಜು ಬಾಣಕಾರ, ಸಿದ್ರಾಮ ಸವದತ್ತಿ, ಸುರೇಶ ಚಿಂಡಕ, ಓಂಪ್ರಕಾಶ ಕಾಬರಾ, ವಿರೂಪಾಕ್ಷಪ್ಪ ಕೊಕಟನೂರ, ಅಣ್ಣಪ್ಪ ಬಾಣಕಾರ, ಮಹಾಂತೇಶ ಯಾದವಾಡ, ಪ್ರಕಾಶ ಬೀಳಗಿ, ಶ್ರೀಶೈಲ ಬೀಳಗಿ, ಈರಣ್ಣ ಹೊನವಾಡ, ಕಿರಣ ಭದ್ರನ್ನವರ, ಶ್ರೀಶೈಲ ಗೊಂಬಿ, ಸಂಜಯ ಶಿವಪೂಜಿ, ಸಂಜಯ ಜವಳಗಿ, ಬಸವರಾಜ ಜಾಡಗೌಡ, ಶ್ರೀಶೈಲ ಯಾದವಾಡ, ಪ್ರವೀಣ ಧಬಾಡಿ, ಕಾಡಪ್ಪ ಧಬಾಡಿ, ಮಲ್ಲಿಕಾರ್ಜುನ ಬಾವಲತ್ತಿ, ಪ್ರಕಾಶ ಮಂಡಿ, ಕಲ್ಲಪ್ಪ ಹೊರಟ್ಟಿ, ಮೋಹನ ಪತ್ತಾರ. ಚಿದಾನಂದ ಪತ್ತಾರ, ಶಂಕರ ಹೂಗಾರ, ಶಿವಾನಂದ ಗಾಯಕವಾಡ, ಈರಣ್ಣ ಚಿಂಚಖಂಡಿ ಸೇರಿದಂತೆ ಸಾವಿರಾರೂ ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.