Advertisement
ಈ ಭಾಗಕ್ಕೆ ತಮಿಳುನಾಡಿನ ಸೇಲಂ ಹಾಗೂ ಕಡಪಾ ಪಟ್ಟಣಗಳಿಂದ ಅರಿಸಿನ ಬೀಜಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ ತಮಿಳುನಾಡಿನಲ್ಲಿ ಮಳೆ ಪ್ರಮಾಣ ತೀರ ಕಡಿಮೆಯಾದ ಕಾರಣ ಅಲ್ಲಿನ ಸೇಲಂ ಪಟ್ಟಣದಲ್ಲಿ ಅರಿಸಿನ ಬೀಜಗಳ ಇಳುವರಿ ಕಡಿಮೆಯಾಗಿದೆ. ಆದ್ದರಿಂದ ಸೇಲಂನಿಂದ ಬರುವ ಅರಿಸಿನ ಬೀಜಗಳ ಪೂರೈಕೆಯೂ ಕಡಿಮೆಯಾಗಿದ್ದರಿಂದ ಇಲ್ಲಿ ಬೇಡಿಕೆ ಹೆಚ್ಚಾಗಿ ಬೆಲೆ ಕೂಡಾ ಗಗನಕ್ಕೇರಲು ಕಾರಣವಾಗಿದೆ ಎನ್ನುತ್ತಾರೆ ಇಲ್ಲಿನ ಬೀಜಗಳ ವ್ಯಾಪಾರಸ್ಥರಾದ ಜಗದಾಳದ ದೇವರಾಜ ರಾಠಿ.
Related Articles
Advertisement
ಜಗದಾಳ ಗ್ರಾಮಕ್ಕೆ ಅರಿಸಿನ ಬೀಜಗಳನ್ನು ಖರೀದಿಸಲು ರಬಕವಿ ಬನಹಟ್ಟಿ, ಜಮಖಂಡಿ, ಗೋಕಾಕ, ರಾಯಬಾಗ ಮತ್ತು ಅಥಣಿ ತಾಲೂಕಿನ ವಿವಿಧ ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ ರೈತರು ಆಗಮಿಸುತ್ತಿದ್ದಾರೆ.
ಅರಿಸಿನ ಬೀಜಗಳಲ್ಲಿಯೂ ಕೂಡಾ ಸಾಕಷ್ಟು ಕಲಬೆರೆಕೆಯ ಬೀಜಗಳು ಬರುತ್ತಿರುವುದರಿಂದ ರೈತರಿಗೆ ತೊಂದರೆಯಾಗಿದೆ ಆದರೂ ಜಗದಾಳ ಭಾಗದಲ್ಲಿ ಮಾರಾಟವಾಗುವ ಬೀಜ ಉತ್ತಮ ಗುಣಮಟ್ಟದ್ದಾಗಿರುತ್ತದೆ . ಕಳೆದ 10 ವರ್ಷದಿಂದ ಈಲ್ಲಿಯೇ ನಾವು ಬೀಜ ಖರೀದಿ ಮಾಡುತ್ತಿದ್ದೇವೆ. ಈ ಬಾರಿ ಮಳೆ ಇಲ್ಲದಿದ್ದರೂ ಮಳೆ ಬರುತ್ತದೆ ಎಂಬ ಭರವಸೆಯಿಂದ ಬೀಜ ಸಂಗ್ರಹಿಸುತ್ತಿದ್ದೇವೆ ಎಂದು ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ರೈತ ಕೇಶವ ಬಾಬು ಹಾರೂಗೇರಿ ಪತ್ರಿಕೆಗೆ ತಿಳಿಸಿದರು.
ಒಟ್ಟಿನಲ್ಲಿ ಅರಿಸಿನ ಕೃಷಿ ರೈತರಿಗೆ ಪರಿಶ್ರಮದ ಬೆಳೆಯಾಗಿದ್ದರೂ, ಮಾರುಕಟ್ಟೆಯಲ್ಲಿ ಅರಿಸಿನಕ್ಕೆ ಸಾಂಗ್ಲಿ ಮಾರುಕಟ್ಟೆಯಲ್ಲಿ ಈ ಬಾರಿ 15000 ರೂ. ಪ್ರತಿ ಕ್ವಿಂಟಲ್‌ಗೆ ಮಾರಾಟವಾಗುತ್ತಿದೆ.
ಕಿರಣ ಶ್ರೀಶೈಲ ಆಳಗಿ