Advertisement

ಮೊಲದ ಉಪಾಯ

06:00 AM May 10, 2018 | |

ಒಂದು ನದಿಯಲ್ಲಿ ಒಂದು ಮೊಸಳೆಯಿತ್ತು. ಅದಕ್ಕೆ ತುಂಬಾ ವಯಸ್ಸಾಗಿತ್ತು. ಅದಕ್ಕೆ ಪ್ರಾಣಿಗಳನ್ನು ಬೇಟೆಯಾಡಿ ತಿನ್ನಲಾಗುತ್ತಿರಲಿಲ್ಲ. ಹೀಗಾಗಿ ನರಿಯನ್ನು ಸೇವಕನಾಗಿ ಇಟ್ಟುಕೊಂಡಿತ್ತು. ಅದು ಇತರೆ ಪ್ರಾಣಿಗಳನ್ನು ಪುಸಲಾಯಿಸಿ ಮೊಸಳೆಯ ಬಳಿಗೆ ಕರೆತರುತ್ತಿತ್ತು. ಮೊಸಳೆ ಸುಲಭವಾಗಿ ಅದನ್ನು ಬೇಟೆಯಾಡಿ ತಿನ್ನುತ್ತಿತ್ತು. ನರಿಯ ಸಹಾಯಕ್ಕೆ ಪ್ರತಿಯಾಗಿ ಮೊಸಳೆಯ ತನ್ನಲ್ಲಿದ್ದ ಚಿನ್ನಾಭರಣವನ್ನು ಅದಕ್ಕೆ ನೀಡುತ್ತಿತ್ತು. 

Advertisement

ಒಂದು ದಿನ ನರಿಗೆ ಯಾವ ಪ್ರಾಣಿಯೂ ಸಿಗಲಿಲ್ಲ. ನಿರಾಶನಾಗಿ ಹಿಂದಿರುಗುತ್ತಿದ್ದಾಗ ಮೊಲವೊಂದು ಕಂಡಿತು. ತಕ್ಷಣ ನರಿ, “ಮೊಲರಾಯ, ಮೊಸಳೆ ನಿನ್ನ ಹತ್ತಿರ ಮಾತಾಡಬೇಕಂತೆ. ಬಾ’ ಎಂದು ಕರೆಯಿತು. “ಮೊಸಳೇನ ಕಂಡ್ರೆ ನಂಗೆ ಹೆದರಿಕೆಯಪ್ಪ! ನಾನು ಬರೋಲ್ಲ’ ಎಂದು ಮೊಲ ಓಡಲು ಮುಂದಾಯಿತು. ನರಿ “ಈ ಮೊಸಳೆ ಸತ್ತುಹೋಗಿ ತುಂಬಾ ದಿನಗಳಾದವು. ಅದರ ಅಂತ್ಯ ಸಂಸ್ಕಾರವನ್ನು ಮೊಲ ಮಾಡಬೇಕು ಎಂಬುದು ಅದರ ಕೊನೆಯ ಆಸೆಯಾಗಿತ್ತು.’ ಎಂದಿತು. ಮರುಕದಿಂದ ಮೊಲ ನರಿಯ ಮಾತಿಗೆ ಕಿವಿಗೊಟ್ಟು ಅದರ ಜೊತೆ ಹೋಯಿತು. 

ನರಿ ಹೇಳಿಕೊಟ್ಟಿದ್ದ ಉಪಾಯದಂತೆ ಮೊಸಳೆ ಸತ್ತಂತೆ ಮಲಗಿತ್ತು. ಮೊಸಳೆಯನ್ನು ಕಂಡ ಕೂಡಲೆ ಮೊಲಕ್ಕೆ ಅನುಮಾನ ಬಂದಿತು. “ನರಿರಾಯಾ, ನೀನು ಹೇಳಿದ್ದೆಲ್ಲಾ ಸರಿ! ಆದ್ರೆ ಮೊಸಳೆ ಸತ್ತಾಗ ಅದರ ಬಾಲ ಮಾತ್ರ ಅಲುಗಾಡುತ್ತೆ ಅಂತ ನಮ್ಮ ಪೂರ್ವಿಕರು ಹೇಳುತ್ತಿದ್ದರು. ಈ ಮೊಸಳೆಯ ಬಾಲ ಅಲ್ಲಾಡುತ್ತಲೇ ಇಲ್ಲವಲ್ಲ’ ಎಂದಿತು. ಮೊಲದ ಮಾತನ್ನು ಕೇಳಿದ್ದೇ ತಡ ಮೊಸಲೆ ತನ್ನ ಬಾಲವನ್ನು ನಿಧಾನವಾಗಿ ಅಲುಗಾಡಿಸತೊಡಗಿತು. ಮೊಲದ ಉಪಾಯ ಫ‌ಲಿಸಿತ್ತು. ಮೊಸಳೆ ಜೀವಂತ ಇರೋದು ಗೊತ್ತಾದ ಕೂಡಲೆ ನರಿಯ ಷಡ್ಯಂತ್ರವೆಲ್ಲಾ ಬಯಲಾಯಿತು. ಮೊಲ ಕಾಡಿನೊಳಗೆ ಓಟಕಿತ್ತಿತು.

ಪುರುಷೋತ್ತಮ್‌ ವೆಂಕಿ 

Advertisement

Udayavani is now on Telegram. Click here to join our channel and stay updated with the latest news.

Next