ರಬಕವಿ-ಬನಹಟ್ಟಿ : ರಬಕವಿ-ಬನಹಟ್ಟಿ ನಗರಸಭೆ ವತಿಯಿಂದ 47 ಲಕ್ಷ ತೆರಿಗೆ ಬಾಕಿ ಹಿನ್ನಲೆಯಲ್ಲಿ ಬನಹಟ್ಟಿಯ ವೆಂಕಟೇಶ್ವರ ಸೈಜಿಂಗ್ ಹಾಗೂ ಸಾಯಿಬಾಬಾ (ಧಬಾಡಿ) ಸೈಜಿಂಗ್‌ನ್ನು ನಗರಸಭೆ ಪೌರಾಯುಕ್ತರ ನೇತೃತ್ವದಲ್ಲಿ ಶುಕ್ರವಾರ ದಾಳಿ ನಡೆಸಿ ಕಾರ್ಖಾನೆಗಳ ಜಪ್ತಿ ಮಾಡಿದ ಘಟನೆ ನಡೆದಿದೆ.
ಬನಹಟ್ಟಿಯ ಚಿಂಡಕ ಒಡೆತನದ ಮಾಲ್ಕಿ ಜಾಗೆಯಲ್ಲಿ ಇದ್ದಂತಹ ಅನುಭೋಗದಾರರಾದ ವೆಂಕಟೇಶ್ವರ ಸೈಜಿಂಗ ಮತ್ತು ಸಾಯಿಬಾಬಾ (ಧಬಾಡಿ) ಸೈಜಿಂಗ್ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ನಗರಸಭೆಗೆ ಇಲ್ಲಿಯವರೆಗೆ ಸುಮಾರು 47 ಲಕ್ಷದವರೆಗೆ ತೆರಿಗೆ ಬಾಕಿ ತುಂಬದೇ ಇರುವುದರಿಂದ ಇಂದು ಶುಕ್ರವಾರ ದಿಡೀರ ಆಗಿ ಬಂದು ನಗರಸಭೆಯ ಅಧಿಕಾರಿಗಳ ತಂಡ ಎರಡು ಕಾರ್ಖಾನೆಗಳನ್ನು ಜಪ್ತಿ ಮಾಡಿದರು.
ಈ ಸಂರ್ದದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅನುಭೋಗದಾರರ ಮಾಲೀಕರಾದ ಸಂಜಯ ಕರಲಟ್ಟಿ ಹಾಗೂ ರಾಜು ಬಾಣಕಾರ ನಾವು ಹಲವಾರು ವರ್ಷಗಳಿಂದ ಇಲ್ಲಿ ಕಾರ್ಖಾನೆ ನಡೆಸುತ್ತಿದ್ದು, ನಮಗೆ ಯಾವುದೇ ನೋಟೀಸ್ ನೀಡದೆ ಏಕಾ ಏಕಿ ಸೈಜಿಂಗನ್ನು ಸೀಜ್ ಮಾಡಿದ್ದು ಸರಿಯಲ್ಲ. ಯಾವುದೋ ಒಬ್ಬರ ಮಾತು ಕೇಳಿ ಹೈಕೋರ್ಟ ಮತ್ತು ಸಿವಿಲ್ ಕೋರ್ಟನಲ್ಲಿ ದಾವೆ ಇದ್ದು ಆದರೂ ಅನುಭೋಗದಾರರಾದಂತಹ ನಮಗೆ ಈ ರೀತಿ ಯಾವುದೇ ನೋಟೀಸ್ ಇಲ್ಲದೇ ಸೀಜ್ ಮಾಡಿದ್ದಾರೆ. ಇದೊಂದು ಸಮಯೋಚಿ ಸಂಚಾಗಿದ್ದು, ಈ ಕುರಿತು ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.
ಇದೇ ವೇಳೆ ರಬಕವಿ-ಬನಹಟ್ಟಿ ನಗರಸಭೆ ಪೌರಾಯುಕ್ತ ಅಶೋಕ ಗುಡಿಮನಿ ಮಾತನಾಡಿ, ಚಿಂಡಕ ಒಡೆತನದ ಜಾಗೆಯ ತೆರಿಗೆ ಒಟ್ಟು 47 ಲಕ್ಷ ತೆರಿಗೆ ಬಾಕಿ ಇದ್ದು, ನಾವು ಕಾನೂನು ಬದ್ಧವಾಗಿ ಜಾಗೆಯ ಮಾಲೀಕರಿಗೆ ನೋಟೀಸ್ ನೀಡಿದ್ದು ಅವರು ಅದಕ್ಕೆ ಸ್ಪಂದಿಸದ ಕಾರಣ ಕಾನೂನಿನ ಅಡಿಯಲ್ಲಿ ಜಾಗೆಯಲ್ಲಿದ್ದ ಕಾರ್ಖಾನೆಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಭಿಯಂತರರಾದ ರಾಘವೇಂದ್ರ ಕುಲಕರ್ಣಿ, ವ್ಯವಸ್ಥಾಪಕರಾದ ಸುಬಾಸ ಖುದಾನಪುರ, ಎಸ್. ಬಿ. ಮಠದ, ಮುತ್ತಪ್ಪ ಚೌಡಕಿ, ಮುಕೇಶ ಬನಹಟ್ಟಿ ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ : 2002ರಲ್ಲಿ ಸಮಾಜಘಾತುಕರಿಗೆ ತಕ್ಕ ಪಾಠ ಕಲಿಸಿ, ಗುಜರಾತ್ ನಲ್ಲಿ ಶಾಂತಿ ನೆಲೆಗೊಳಿಸಿದ್ದೇವೆ: ಶಾ