ಹೊಸೂರನ ಸರಕಾರಿ ಉರ್ದು ಶಾಲೆಯಲ್ಲಿ ಒಟ್ಟು 1 ರಿಂದ 7ನೇ ತರಗತಿಯವರೆಗೆ 92 ಮಕ್ಕಳು ಕಲಿಯುತ್ತಿದ್ದು, ಒಟ್ಟು ಮೂವರು ಶಿಕ್ಷಕರು ಇದ್ದು ಇನ್ನೂ ಇಬ್ಬರು ಅತಿಥಿಶಿಕ್ಷಕರು ತೆಗೆದುಕೊಳ್ಳುತ್ತಿದ್ದು, ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಮಕ್ಕಳನ್ನು ಮೂರು ಕೋಣೆಯಲ್ಲಿ ಕಂಬೈನ್ಡ್ ಆಗಿ ಕೂಡ್ರಿಸಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.
Advertisement
ಈ ಶಾಲೆಯ ಮೇಲಿನ ಭಾಗವು ಬೀಳುವ ಹಂತದಲ್ಲಿದೆ. ಈಗಾಗಲೆ ಕೆಲವು ಭಾಗಗಳು ಬಿದ್ದಿದೆ. ಇನ್ನೂ ಶಾಲೆಯ ಮುಖ್ಯ ಕಟ್ಟಡಕ್ಕೆ ಆಧಾರವಾಗಿರುವ ಕಂಬಗಳ ಕೆಳಭಾಗವೂ ಕೂಡಾ ಶಿಥಿಲಗೊಂಡಿದ್ದು, ಅದರಿಂದಲೂ ಕೂಡಾ ಮುಖ್ಯ ಕಟ್ಟಡಕ್ಕೆ ಬಹಳಷ್ಟು ತೊಂದರೆಯಿದೆ. ಕಟ್ಟಡದ ಶಿಥಿಲಾವಸ್ಥೆ ಕುರಿತು ಮೇಲಾಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದರೂ ಇದುವರೆಗೂ ಯಾವುದೆ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಶಾಲೆಯ ಎಸ್ಡಿಎಂಸಿ ಸದಸ್ಯ ಅಲ್ಲಾವುದ್ದೀನ ತಾಂಬೋಳಿ.
ಇನ್ನೂ ಶಾಲೆಯಲ್ಲಿ 92 ವಿದ್ಯಾರ್ಥಿಗಳು ಇದ್ದು, ಮೂರು ಜನ ಶಿಕ್ಷಕರು ಮಾತ್ರ ಇದ್ದಾರೆ. ಶಾಲೆಗೆ ಇಬ್ಬರು ಅತಿಥಿ ಉಪನ್ಯಾಸಕರನ್ನು ನೇಮಿಸಲಾಗಿದೆ. ಅವರು ಸೇವೆಗೆ ಹಾಜರಾಗಬೇಕಾಗಿದೆ. ಶಾಲೆಯ ಶಿಥಿಲಾವಸ್ಥೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರದ ಮೂಲಕ ಗಮನಕ್ಕೆ ತರಲಾಗಿದೆ ಹಾಗೂ ಶಾಲೆಗೆ ಬೇಕಾಗುವ ಮೂಲ ಸೌಕರ್ಯ ನೀಡಬೇಕು ಎಂದು ತಿಳಿಸಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಎಂ.ಎಸ್.ಕೊಯಮುತ್ತೂರ ತಿಳಿಸಿದರು. ಇದನ್ನೂ ಓದಿ : ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿಸಬೇಡಿ; ಸೋಲಿಗರ ಪ್ರತಿಭಟನೆ
Related Articles
Advertisement
ಸರಕಾರ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಯಾಕೋ ಹಿಂದೆ ಬಿದ್ದಂತಿದೆ. ಮಕ್ಕಳ ಭವಿಷ್ಯತ್ತಿನ ದೃಷ್ಠಿಕೋನದಿಂದ ಶಾಲಾ ಕಟ್ಟಡಗಳು ದುರಸ್ತಿಯ ಜೊತೆಗೆ ಹೊಸ ಕಟ್ಟಡಗಳನ್ನು ವ್ಯವಸ್ಥಿತವಾಗಿ ಹಾಗೂ ಸುಭದ್ರವಾಗಿ ನಿರ್ಮಿಸಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಯತ್ನಿಸಬೇಕು. ಶಿಥಿಲಗೊಂಡಿರುವ ಕಟ್ಟಡಗಳನ್ನು ತೆಗೆದು ಹಾಕಿ ಉತ್ತಮ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪ್ರಯತ್ನಿಸಬೇಕಿದೆಮಳೆಯ ಕಾರಣ ಎಲ್ಲಿ ಎಲ್ಲಿ ಶಾಲೆಯ ಕಟ್ಟಡಗಳು ಶಿಥಿಲಾವಸ್ಥೆಯಾಗಿವೆಯೋ ಅಲ್ಲಿ ಈ ಕುರಿತು ಪಿಡಬ್ಲೂö್ಯಡಿಯವರಿಂದ ಎಸ್ಟೀಮೇಟ್ ಮಾಡಿಸಿ ಅದನ್ನು ದುರಸ್ತಿ ಮಾಡಿಸುತ್ತೇವೆ. ಹಾಗೂ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸಲಾಗುವುದು.
– ಸಿ. ಎಂ. ನೇಮಗೌಡ ಕ್ಷೇತ್ರ ಶಿಕ್ಷಣಾಧಿಕಾರಿಗಳು, ರಬಕವಿ-ಬನಹಟ್ಟಿ /ಜಮಖಂಡಿ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳಗೆ ಕ್ರಿಯಾ ಯೋಜನೆ ತಯಾರಿಸ ಕಳುಹಿಸಲಾಗಿದ್ದು ಸಧ್ಯದಲ್ಲಿಯೇ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. – ಶ್ರೀಶೈಲ ಬುರ್ಲಿ ಶಿಕ್ಷಣ ಸಂಯೋಜಕರು, ಜಮಖಂಡಿ – ಕಿರಣ ಶ್ರೀಶೈಲ ಆಳಗಿ