Advertisement
ಹೆಣಿಕೆಗೆ ಸರಿಸಾಟಿ ಯಾರಿಲ್ಲ?: ಗೂಡು ಹೆಣೆಯುವುದರಲ್ಲಿ ಗೀಜುಗನಿಗೆ ಆಸಕ್ತಿ, ಶ್ರದ್ಧೆ ನಿಜಕ್ಕೂ ಆಶ್ಚರ್ಯ ಮೂಡಿಸುತ್ತದೆ. ಅಷ್ಟಕ್ಕೂ ಇದು ಗೂಡು ಕಟ್ಟುವುದು ತನ್ನ ಸಂಗಾತಿಯನ್ನು ಆಕರ್ಷಿಸಲು ಹಾಗೂ ತನ್ನ ಪುಟ್ಟ ಸಂಸಾರ ಹೂಡಲು. ಗೂಡು ಕಟ್ಟುತ್ತ ತನ್ನ ಮರಿಗಳಿಗೆ ಬದುಕು ಕಟ್ಟಿಕೊಡುವ ಅದಮ್ಯ ಆಸೆ. ಈ ಸುಂದರ ಹಕ್ಕಿಗೆ ಇಕ್ಕಳದಂತಹ ತನ್ನ ಚುಂಚಿನಲ್ಲಿ ಸಟಪಟನೆ ನೇಯುವ ಇದರ ಮುಂದೆ ಯಾವುದೇ ತಂತ್ರಜ್ಞಾನ ಸರಿಸಾಟಿಯಾಗದು.
ಮುಂಗಾರು ಬೆಳೆಯ ಮಧ್ಯೆ ಹಿಂಗಾರು ಮಳೆ ಆರಂಭದ ಹಂತದಲ್ಲಿ ಈ ಗೀಜುಗಗಳು ಗೂಡು ಕಟ್ಟಲು ಆರಂಭಿಸುತ್ತವೆ. ಗೀಜುಗದ ಗೂಡಿನ ಪ್ರವೇಶ ದ್ವಾರ ಕಿರಿದಾಗಿರುತ್ತದೆ. ಈ ಗೂಡು ಉದ್ದನೆಯ ಬಾಲದ ಮೂಲಕ ಕೆಳಮುಖವಾಗಿ ಜೋತು ಬಿದ್ದಿರುತ್ತದೆ. ಹಾಗಾಗಿ ಕೆಳಗಿನಿಂದ ಗೂಡನ್ನು ಪ್ರವೇಶಿಸಬೇಕು. ಗೀಜಗ ಗೂಡನ್ನು ಹಸಿರಾದ ಎಳೆಗಳಿಂದ ನಿರ್ಮಿಸುತ್ತದೆ. ಗೂಡು ಕೊಂಬೆಗಳಿಗೆ ಭದ್ರವಾಗಿ ಹೆಣೆದಿರುತ್ತದೆ. ಗೂಡಿಗೆ ಬೇಕಾದ ಸಾಮಗ್ರಿಗಳನ್ನು ಒಂದೊಂದೇ ತನ್ನ ಚೊಂಚಿನಲ್ಲಿ ಅಳತೆ ಪ್ರಕಾರ ಕತ್ತರಿಸಿ ತಂದು ಪರೀಕ್ಷಿಸಿದ ನಂತರವೇ ಗೂಡಿಗೆ ಸೇರಿಸುತ್ತದೆ. ಗಂಡು ಹಕ್ಕಿ ಗೂಡನ್ನು ಅರ್ಧ ನಿರ್ಮಿಸಿದ ನಂತರ ಗೂಡಿನ ಆಕೃತಿಯನ್ನು ತನ್ನ ಸಂಗಾತಿಗೆ ತೋರಿಸುತ್ತದೆ. ಒಂದು ವೇಳೆ ಗೂಡು ಸಂಗಾತಿಗೆ ಇಷ್ಟವಾದರೆ ಮುಂದುವರಿಸುತ್ತದೆ ಇಲ್ಲದಿದ್ದರೆ ಮರಳಿ ಕಟ್ಟುತ್ತದೆ.
Related Articles
Advertisement
ಉದರ ಪೋಷಣೆಗೆ ಹಿಂಗಾರಿ ಹಿತಕರ: ಹಿಂಗಾರು ಮಳೆ ಆರಂಭವಾಗುವಷ್ಟರಲ್ಲಿ ರೈತರ ಹೊಲದಲ್ಲಿನ ಸಜ್ಜಿ, ಮುಂಗಾರು ಜೋಳ ಹೀಗೆ ತೆನೆತೆನೆಗಳಲ್ಲಿ ಕಾಳು ಬೆಳೆಗಳು ಕಾಳಿನ ಹಂತದಲ್ಲಿರುವಾಗಲೇ ಈ ಗೀಜುಗ ತನ್ನ ಮರಿಗಳನ್ನು ಬೆಳೆಸುವುದರೊಂದಿಗೆ ಸಂಸಾರ ವೃದ್ಧಿಸಿಕೊಳ್ಳುತ್ತದೆ. ಇಕ್ಕೆಲಗಳಲ್ಲಿ ಗಡುಸಾದ ಗಿಡಗಂಟಿಗಳು ಇರುವುದನ್ನು ಗಮನಿಸಿ ಗೂಡು ನಿರ್ಮಿಸುತ್ತದೆ. ಮರಿಗಳು ಬೆಳೆದು ಬಲಿಷ್ಟವಾಗುವವರೆಗೂ ಆಹಾರ ತರುತ್ತದೆ. ಜಮೀನುಗಳಲ್ಲಿನ ಕೀಟಗಳನ್ನು ತಿನ್ನುವ ಪಕ್ಷಿ ಇದೀಗ ಆಧುನಿಕತೆಯಿಂದ ಮರೆಯಾಗುತ್ತಿವೆ. ಈ ಪಕ್ಷಿ ಸಂಕುಲ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಗೀಜುಗ ವಿಶೇಷವಾಗಿ ಗೂಡು ನಿರ್ಮಿಸುತ್ತವೆ. ಅವು ನೋಡಲು ತುಂಬಾ ವೈಶಿಷ್ಟ್ಯವಾಗಿವೆ. ಆಧುನಿಕತೆಯಿಂದಾಗಿ ಬಾವಿ, ಹಳ್ಳ, ಕೆರೆ ಸಮೀಪದ ಗಿಡಗಂಟಿಗಳಲ್ಲಿ ಕಾಣ ಸಿಗುತ್ತಿದ್ದ ಗೀಜುಗ ಈಗ ಕಣ್ಮರೆಯಾಗುತ್ತಿರುವುದು ನಿಜವಾಗಿಯೂ ದುಃಖದ ಸಂಗತಿ.∙ರಾಜಕುಮಾರ ಪಿಟಗಿ,
ಪಕ್ಷಿ ಪ್ರೇಮಿ ಹಾಗೂ ಪಕ್ಷಿಗಳ, ಛಾಯಾಗ್ರಾಹಕರು *ಕಿರಣ ಶ್ರೀಶೈಲ ಆಳಗಿ