Advertisement

Teradala ಕ್ಷೇತ್ರದಲ್ಲಿ ಸ್ಪರ್ಧಿಸಲು ಉಮಾಶ್ರೀಗೆ ಟಿಕೆಟ್ ನೀಡದಿದ್ದರೆ ಸಾಮೂಹಿಕ ರಾಜೀನಾಮೆ

07:02 PM Apr 17, 2023 | Team Udayavani |

ರಬಕವಿ-ಬನಹಟ್ಟಿ: ತೇರದಾಳ ವಿಧಾನ ಸಭಾ ಕ್ಷೇತ್ರದಲ್ಲಿ ಮಾಜಿ ಸಚಿವೆ ಉಮಾಶ್ರೀಯವರಿಗೆ ಕಾಂಗ್ರೆಸ್ ಪಕ್ಷದ ವರಿಷ್ಠರು ಸಿ ಫಾರ್ಮ್ ನೀಡಿ ಅವರಿಗೆ ತೇರದಾಳ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಅವಕಾಶ ನೀಡಬೇಕು. ತೇರದಾಳ ಮತಕ್ಷೇತ್ರದಲ್ಲಿ ಮಾಜಿ ಸಚಿವೆ ಉಮಾಶ್ರೀಗೆ ಟಿಕೆಟ್ ನೀಡಿದರೆ ಮಾತ್ರ ಗೆಲವು ಖಂಡಿತ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ನೀಲಕಂಠ ಮುತ್ತೂರ ತಿಳಿಸಿದರು.

Advertisement

ಸೋಮವಾರ ಇಲ್ಲಿನ ಭದ್ರನವರ ಬಿಲ್ಡಿಂಗ್ ಹತ್ತಿರ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯ ಮೇಲೆ ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಕ್ಷೇತ್ರದ ಕುರಿತು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿತ್ತು. ಆದರೂ ಕೇವಲ ಆರು ತಿಂಗಳ ಹಿಂದೆ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ, ಇದರಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲು ಅನುಭವಿಸಲಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ವರಿಷ್ಠರು ತಾವು ನೀಡಿದ ಬಿ ಫಾರ್ಮ್ ನ್ನು ಮರಳಿ ಪಡೆದುಕೊಂಡು ಉಮಾಶ್ರೀಯವರಿಗೆ ಟಿಕೆಟ್ ನೀಡಿದ್ದೆ ಆದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಮುತ್ತೂರ ತಿಳಿಸಿದರು.

ಲಕ್ಷ್ಮಣ ದೇಸಾರಟ್ಟಿ, ಮಲ್ಲಪ್ಪ ಸಿಂಗಾಡಿ, ರಾಜು ಭದ್ರನವರ, ಮಲ್ಲಪ್ಪ ಭಾವಿಕಟ್ಟಿ, ಕಿರಣ ಕರಲಟ್ಟಿ, ರಾಹುಲ ಕಲಾಲ, ಬಸವರಾಜ ಗುಡೋಡಗಿ, ಉಸ್ಮಾನಸಾಬ್ ಲೆಂಗ್ರೆ, ಸತ್ಯಪ್ಪ ಮಗದುಮ್, ಶ್ರೀಶೈಲ ಮೇಣಿ, ಚಿದಾನಂದ ಗಾಳಿ, ಗುರುಲಿಂಗ ಚಿಂಚಲಿ, ಈಶ್ವರ ಚಮಕೇರಿ, ಮಾರುತಿ ಸೋರಗಾವಿ, ವಿಠ್ಠಲ ಹೊಸಮನಿ, ದಾನಪ್ಪ ಹುಲಜತ್ತಿ, ಗಂಗಪ್ಪ ಶಿರಗಾರ, ಸಂಜಯ ಜೋತಾವರ, ರಮೇಶ ಸವದಿ, ರಿಯಾಜ ಫಣಿಬಂದ, ವರ್ಧಮಾನ ಖೇಬೋಜಿ, ಪ್ರಕಾಶ ಮಮದಾಪುರ, ಶಂಕರ ಹೂಗಾರ, ವಿನೋಧ ಶಿಂಪಿ ಸೇರಿದಂತೆ ರಬಕವಿ ಬನಹಟ್ಟಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.

ಇದನ್ನೂ ಓದಿ: BJP ಮೂರನೇ ಪಟ್ಟಿ ಬಿಡುಗಡೆ: ಶೆಟ್ಟರ್ ಕ್ಷೇತ್ರಕ್ಕೆ ಟೆಂಗಿನಕಾಯಿ; ರಾಮದಾಸ್ ಗೆ ಕೊಕ್

Advertisement
Advertisement

Udayavani is now on Telegram. Click here to join our channel and stay updated with the latest news.

Next