Advertisement

ರಬಕವಿ-ಬನಹಟ್ಟಿ : ನೇಕಾರರಿಗೆ ವರವಾದ `ತಾಯಿ-ಮಗಳು’

07:46 PM Dec 04, 2022 | Team Udayavani |

ರಬಕವಿ-ಬನಹಟ್ಟಿ : ಇದೇನಪ್ಪ ತಲೆಬರಹವೆಂದು ಹುಬ್ಬೇರಿಸುವಿರಾ? ನೇಕಾರರಿಗೆ ಅದೇಗೆ ತಾಯಿ-ಮಗಳು ವರವಾಗುತ್ತಾರೆಂದು ಆಶ್ಚರ್ಯವಾಗುವದು ನಿಶ್ಚಿತ. ಆದರೆ ಇದು ಅಕ್ಷರಸಹ: ಸತ್ಯ.

Advertisement

ಕಳೆದೆರಡು ದಶಕಗಳ ಹಿಂದೆ ಕೋಳಿ ನಕ್ಷೆಯಿರುವ ಬನಹಟ್ಟಿಯ ಮಸರಾಯಿಜ್ಡ ಸೀರೆಗಳಿಗೆ ಶುಕ್ರದೆಸೆ ಬಂದಿತ್ತು. ತದನಂತರದ ಕಾಲದಲ್ಲಿ ಇಲ್ಲಿನ ಸಾವಿರಾರು ನೇಕಾರರು ಸಮರ್ಪಕವಾದ ಮಾರುಕಟ್ಟೆಯಿಲ್ಲದೆ ಅಧೋಗತಿಯತ್ತ ಸಾಗುವಲ್ಲಿಯೂ ಕಾರಣವಾಗಿತ್ತು. ಇದೀಗ ಆಂಧ್ರ ಹಾಗು ತೆಲಂಗಾಣದಲ್ಲಿ ಒಂದು ವರ್ಷದಿಂದ `ಬಿಗ್ ಬಾರ್ಡರ್’ ಮಸರಾಯಿಜ್ಡ್ ಸೀರೆಗಳಿಗೆ `ಮದರ್ & ಡಾಟರ್’ ಎಂಬ ಹೆಸರಿನಲ್ಲಿ ಎಲ್ಲಿಲ್ಲದ ಬೇಡಿಕೆಯೊಂದಿಗೆ ಮಾರುಕಟ್ಟೆ ದಾಪುಗಾಲು ಹಾಕಿರುವದು ಈ ಭಾಗದ ನೇಕಾರರ ಮೊಗದಲ್ಲಿ ಮಂದಹಾಸ ಮೂಡುವಲ್ಲಿ ಕಾರಣವಾಗಿದೆ.

ಅತ್ಯಾಧುನಿಕ ನಕ್ಷೆಯೊಂದಿಗೆ ಅನುಭವಿ ನೇಕಾರರಿಂದ ಉತ್ಪಾದನೆಗೊಳ್ಳುತ್ತಿರುವ ಈ ಸೀರೆಗಳು ರಬಕವಿ-ಬನಹಟ್ಟಿ ಭಾಗದಿಂದ ದಿನಕ್ಕೆ 2 ಸಾವಿರ ಸೀರೆಗಳಷ್ಟು ಉತ್ಪಾದನೆಗಳಾಗುತ್ತಿದ್ದು, ಬೇಡಿಕೆಗನುಗುಣವಾಗಿ ಉತ್ಪಾದನೆಯಾಗುತ್ತಿಲ್ಲ. ಸೀರೆಯೊಂದಕ್ಕೆ ಸುಮಾರು 1 ಸಾವಿರಕ್ಕೂ ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next