Advertisement

ರಬಕವಿ-ಬನಹಟ್ಟಿ: ಬ್ಯಾಂಕ್ ಆಫ್ ಬರೋಡಾಗೆ ಮುತ್ತಿಗೆ ಹಾಕಿದ ರೈತರು

06:17 PM May 17, 2022 | Team Udayavani |

ರಬಕವಿ-ಬನಹಟ್ಟಿ: ಮೇ 18 ರಂದು ನಡೆಸಲು ಮುಂದಾಗಿರುವ ಕುಳಲಿ ಗ್ರಾಮದ ನಾಗಪ್ಪ ಗಣಿಯವರ ಜಮೀನು ಹರಾಜನ್ನು ನಿಲ್ಲಿಸಬೇಕು ಮತ್ತು ರೈತರಿಂದ ಅಸಲು ಹಣವನ್ನು ತುಂಬಿಸಿಕೊಂಡು ಪ್ರಕರಣವನ್ನು ಮುಕ್ತಾಯಗೊಳಿಸಬೇಕು. ಇಲ್ಲದಿದ್ದರೆ ಬ್ಯಾಂಕ್ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಅನಿರ್ಧಾಷ್ಟವಧಿ ಮುಷ್ಕರ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮತ್ತು ರೈತ ಮುಖಂಡ ಮುತ್ತಪ್ಪ ಕೋಮಾರ ತಿಳಿಸಿದರು.

Advertisement

ಮಂಗಳವಾರ ಸ್ಥಳೀಯ ಬ್ಯಾಂಕ್ ಆಫ್ ಬರೋಡಾ ಮುಂಭಾಗದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿ, ರೈತರ ಸಾಲಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ಸ್ಥಳೀಯ ನ್ಯಾಯಾಲಯಗಳಲ್ಲಿ ದಾಖಲಿಸದೆ ಬೆಂಗಳೂರಿನ ಸಾಲ ವಸೂಲಾತಿ ನ್ಯಾಯ ಮಂಡಳಿಯ ಮುಂದೆ ಮಾಡಿರುವುದು ಸೂಕ್ತವಲ್ಲ. ಈ ನ್ಯಾಯ ಮಂಡಳಿಗಳಲ್ಲಿ ನೀಡುವ ತೀರ್ಪುಗಳು ರೈತರ ಮರಣ ಶಾಸನದಂತಿವೆ. ಆದ್ದರಿಂದ ಸ್ಥಳೀಯ ಬ್ಯಾಂಕ್ ಅಧಿಕಾರಿಗಳು ಒಂದೇ ಕಂತಿನಲ್ಲಿ ಹಣ ತುಂಬಿಕೊಳ್ಳವುದಕ್ಕೆ ಕ್ರಮ ತೆಗೆದುಕೊಳ್ಳಬೇಕು.ರೈತರು ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಇಲ್ಲಿಯವರೆಗೆ ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳು ಬಂದ ರೈತರ ಸಮಸ್ಯೆಯನ್ನು ಕೇಳದೆ ಇರುವುದು ಖೇದಕರ ಸಂಗತಿಯಾಗಿದೆ ಎಂದರು.

ಬ್ಯಾಂಕ್ ಅಧಿಕಾರಿಗಳ ನಡೆಯಲ್ಲಿ ಯಾವುದೆ ಸ್ಪಷ್ಠತೆ ಇಲ್ಲದಂತಾಗಿದೆ. ಇಲ್ಲಿಯ ಅಧಿಕಾರಿಗಳು ಒಂದೊಂದು ರೀತಿಯಲ್ಲಿ ಹಣವನ್ನು ತುಂಬುವಂತೆ ಹೇಳುತ್ತಿದ್ದಾರೆ. ಈ ಕುರಿತು ವಿಭಾಗೀಯ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೆ ಪ್ರಯೋಜನವಾಗಿಲ್ಲ. ಅವರು ಯಾವುದೆ ರೀತಿಯ ಒಪ್ಪಂದಕ್ಕೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಕುಳಲಿ ಗ್ರಾಮದ ರೈತರ ರಕ್ಷಣೆಗೆ ಕರ್ನಾಟಕ ರಾಜ್ಯ ರೈತ ಸಂಘ ಸಜ್ಜಾಗಿದೆ ಎಂದು ಮುತ್ತಪ್ಪ ಕೋಮಾರ ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ಗಂಗಾಧರ ಮೇಟಿ ಸೇರಿದಂತೆ ರಬಕವಿ ಬನಹಟ್ಟಿ, ಜಮಖಂಡಿ ಮುದೋಳ ತಾಲ್ಲೂಕಿನ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಇದ್ದರು.

ಈಗಾಗಲೇ ಈ ಪ್ರಕರಣಕ್ಕೆ ಕುರಿತಂತೆ ಡೆಟ್ ರಿಕವರಿ ಟ್ರಿಬ್ಯೂನಲ್ ನಿಂದ ತಡೆಯಾಜ್ಞೆ ದೊರೆತಿದೆ. ಇದೇ 18 ರಂದು ಬೆಳಗ್ಗೆ 11.30 ಕ್ಕೆ ನಾಗಪ್ಪ ಗಣಿಯವರ ಜಮೀನಗೆ ಸಂಬಂಧಪಟ್ಪಂತೆ ಯಾವುದೆ ಆನ್ಲೈನ್ ಹರಾಜು ಪ್ರಕ್ರಿಯ ನಡೆಯುವುದಿಲ್ಲ.
– ಸಂದೀಪ ಶೆಟ್ಟಿ, ಶಾಖಾ ಪ್ರಬಂಧಕರು

Advertisement

ಪ್ರಕರಣ ಬೆಂಗಳೂರಿನ ಸಾಲ ವಸೂಲಾತಿ ನ್ಯಾಯ ಮಂಡಳಿಯಲ್ಲಿ ಇರುವುದರಿಂದ ನಮಗೆ ಈ ಕುರಿತು ನಮಗೆ ಮಾತನಾಡಲು ಯಾವುದೆ ಅಧಿಕಾರ ಇಲ್ಲ. ಇದಕ್ಕೆ ಮೇಲಾಧಿಕಾರಿಗಳು ಉತ್ತರ ನೀಡಬೇಕು.
– ವಿಜಯ ಭಟ್ಟ, ವಿಭಾಗೀಯ ಪ್ರಬಂಧಕರು, ಕಲಬುರಗಿ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next