Advertisement
ಇದಕ್ಕೆಲ್ಲಾ ಕಾರಣ ಶಿಕ್ಷಕ ದಂಪತಿ ಎ. ಎಫ್. ಹೂಲಿ ಮತ್ತು ಡಿ.ಎಸ್.ಮಳಲಿ. ಶಾಲೆ ಹೊಗಳಿಕೆಯಲ್ಲಿ ಮುಕ್ಕಾಪಾಲು ಇವರೇ ವಾರಸದಾರರು. ಕಳೆದ 6 ವರ್ಷಗಳ ಸತತ ಪರಿಶ್ರಮದಿಂದ ಇವತ್ತು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿದೆ. Related Articles
Advertisement
ದೇವನೊಬ್ಬ ನಾಮ ಹಲವು ತತ್ವದ ಅಡಿಯಲ್ಲಿ ಈ ಶಿಕ್ಷಕ ದಂಪತಿ ಶಾಲೆಯಲ್ಲೇ ಸರ್ವ ಧರ್ಮ ಸಮನ್ವಯ ಕೊಠಡಿಯನ್ನು ನಿರ್ಮಿಸಿರುವುದು ವಿಶೇಷ. ಪ್ರತಿ ಕೋಣೆಗಳಲ್ಲೂ ಡಿಜಿಟಲ್ ಪೀಠೊಪಕರಣಗಳನ್ನು ಅಳವಡಿಸಲಾಗಿದ್ದು, ಪರಿಸರ ಸ್ನೇಹಿ ಗ್ಲಾಸ್ ಬೋರ್ಡ್‌ಗಳನ್ನು ಬಳಸಲಾಗಿದೆ.
ಈ ಎಲ್ಲ ಕಾರ್ಯಗಳಲ್ಲಿ ಮಹಾಲಿಂಗಪುರದ ಜೆಸಿಐ ಸಂಸ್ಥೆ, ಚಿಮ್ಮಡ ಗ್ರಾಪಂ ಸದಸ್ಯರು, ಪಾಲಕರು, ದಾನಿಗಳು, ಚಿಮ್ಮಡ ಕ್ಲಸ್ಟರ್ ಮಟ್ಟದ ಶಾಲೆಗಳ ಮುಖ್ಯ ಗುರುಗಳು ಸಹಕಾರ ಜೊತೆಗೆ ನೆರವಿನ ಸಹಾಯ ಹಸ್ತ ನೀಡಿದ್ದಾರೆ.
ಯಾವುದೇ ಶಾಲೆ ಅಭಿವೃದ್ಧಿ ಹೊಂದಲು ಪಾಲಕರು ಮತ್ತು ಗ್ರಾಮದ ಜನತೆಯ ಸಹಕಾರವೂ ಅಗತ್ಯ. ಇಲ್ಲಿ ಆ ಕೊರತೆ ಇಲ್ಲ. ಶಿಕ್ಷಕರ ಅನುಪಸ್ಥಿತಿಯಲ್ಲಿ ಸಸ್ಯಕಾಶಿಗೆ ಧಕ್ಕೆಯಾಗದಂತೆ ಸ್ಥಳೀಯರಾದ ಮುತ್ತಪ್ಪ ಗೋಧಿ,ಉಮೇಶ ಹಳಮನಿ ಗಿಡ-ಮರಗಳ ನಿರ್ವಹಣೆ ಮಾಡುತ್ತಾರೆ. ಕಳೆದ 3 ತಿಂಗಳ ಹಿಂದೆ ಶಿಕ್ಷಕ ದಂಪತಿ ತಮ್ಮ ಸ್ವಂತ ಖರ್ಚಿನಲ್ಲಿ ಬೋರವೆಲ್ ಕೊರೆಯಿಸಿ ನೀರಿನ ಬವಣೆಯನ್ನು ನೀಗಿಸಿದ್ದಾರೆ. ಈ ಶಾಲೆಗೆ ಸೇರುವ ವಿದ್ಯಾರ್ಥಿಗಳಿಗೆ ಬೋಧನೆ ಜೊತೆಗೆ ನಿಸರ್ಗದ ಪಾಠ ಉಚಿತ.
ಕಿರಣ ಶ್ರೀಶೈಲ ಆಳಗಿ