Advertisement

Sandalwood; ತಂದೆ ಮಕ್ಕಳ ಸಂಬಂಧದ ಸುತ್ತ ‘ರಾಖಾ’

04:47 PM Jun 30, 2024 | Team Udayavani |

ಇತ್ತೀಚೆಗಷ್ಟೇ ಮುಹೂರ್ತ ಆಚರಿಸಿಕೊಂಡ “ರಾಖಾ’ ಚಿತ್ರದ ಚಿತ್ರೀಕರಣ ಬಿಜಾಪುರದಲ್ಲಿ ನಡೆಯುತ್ತಿದೆ. ಡಾ.ಕೆ.ಬಿ.ನಾಗೂರ್‌ ಅವರ ನಿರ್ಮಾಣದ ಚಿತ್ರ ಇದಾಗಿದ್ದು, ಸಾಹಿತಿ, ಸಂಭಾಷಣೆಗಾರ ಮಳವಳ್ಳಿ ಸಾಯಿಕೃಷ್ಣ ಅವರು ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ನಟ ಕ್ರಾಂತಿ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಅಲ್ಲದೇ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

Advertisement

ಇತ್ತೀಚೆಗೆ ಮಾಧ್ಯಮಗಳು ಬಿಜಾಪುರದ ಶೂಟಿಂಗ್‌ ಲೊಕೇಶನ್‌ ಗೆ ಹೋದಾಗ ಎಂ.ಬಿ. ಪಾಟೀಲ್‌ ರಸ್ತೆಯ ಬಂಗಲೆಯೊಂದರಲ್ಲಿ ರಾಖಾ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರದಲ್ಲಿ ಅದು ಶಾಸಕನ ಮನೆ, ನಾಯಕನ ತಂದೆ ಶಾಸಕನ ಬಳಿ ಅಂಗಲಾಚಿ ಬೇಡಿಕೊಳ್ಳುವ ದೃಶ್ಯವದು. ಇಲ್ಲಿ ಶಾಸಕನಾಗಿ ಗಿರೀಶ್‌ ಜತ್ತಿ ಹಾಗೂ ತಂದೆಯಾಗಿ ಮಂಜುನಾಥ್‌ ಭಟ್‌ ಭಾಗವಹಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಡಾ.ನಾಗೂರ್‌, ಕಳೆದ 14ರಿಂದ ಬಿಜಾಪುರದಲ್ಲಿ ಚಿತ್ರೀಕರಣ ಶುರುವಾಗಿದ್ದು, 13 ದಿನಗಳಿಂದಲೂ ನಡೆಯುತ್ತಿರೋ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಕಲಾವಿದರೆಲ್ಲ ಖುಷಿಯಾಗಿ ಪಾಲ್ಗೊಂಡಿದ್ದಾರೆಂದು ಹೇಳಿದರು.

ನನ್ನ ತಂದೆ ಸ್ವಾತಂತ್ರ ಹೋರಾಟಗಾರರು ಅಲ್ಲದೆ ಶಾಸಕರೂ ಆಗಿದ್ದರು. ಜೊತೆಗೆ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು ನಾಟಕ ಅಲ್ಲದೆ 2-3 ಸಿನಿಮಾಗಳಲ್ಲೂ ಅಭಿನಯಿಸಿದ್ದರು. ಅಲ್ಲದೆ ಕ್ರಾಂತಿ ರೈತರ ಕಥೆ ಇರುವ ಶ್ರೀಮಂತ ಚಿತ್ರ ಮಾಡಿದ್ದರು. ಇದೆಲ್ಲವೂ ನಾನೊಂದು ಸಿನಿಮಾ ಮಾಡಲು ಪ್ರೇರೇಪಿಸಿತು. ಜೊತೆಗೆ ಬಿಜಾಪುರದ ಸ್ನೇಹಿತರೆಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ತಂದೆ- ಮಕ್ಕಳ ಸಂಬಂಧ ಹೇಗಿತ್ತು, ಈಗ ಹೇಗಿದೆ ಅಂತ ಹೇಳ್ಳೋ ಚಿತ್ರವಿದು.ಜತೆಗೆ ಒಳ್ಳೆಯ ನಿರ್ದೇಶಕರೂ ಸಿಕ್ಕಿದ್ದಾರೆ. ಒಟ್ಟಿನಲ್ಲಿ ನಮ್ಮ ಬಿಜಾಪುರಕ್ಕೆ ಒಳ್ಳೆ ಹೆಸರು ಬರಬೇಕು’ ಎಂದು ಹೇಳಿದರು.

ನಂತರ ನಿರ್ದೇಶಕ ಮಳವಳ್ಳಿ ಸಾಯಿಕೃಷ್ಣ ಮಾತನಾಡಿ ಡೈಲಾಗ್‌ ಬರೆಸಲೆಂದು ಬಂದವರು ಡೈರೆಕ್ಷನ್‌ ಜಬಾಭಾªರಿ ಒಪ್ಪಿಸಿದರು. ತಂದೆ ತನ್ನ ಮಕ್ಕಳನ್ನು ಹೇಗೆÇÉಾ ಪೋಷಣೆ ಮಾಡ್ತಾರೆ, ಆದರೆ, ಅದೇ ಮಕ್ಕಳು ತಮ್ಮ ಪೋಷಕರನ್ನು ಹೇಗೆ ನೋಡಿಕೊಳ್ತಾರೆ ಅನ್ನೋದು ಚಿತ್ರದಲ್ಲಿದೆ. ಇಲ್ಲಿ ಕಳೆದ ಹದಿಮೂರು ದಿನಗಳಿಂದ ನಾಯಕನ ಇಂಟ್ರೊಡಕ್ಷನ್‌, ಹೀರೋ ಅಡ್ಡ ಶಾಸಕರ ಮನೆ ಸೇರಿದಂತೆ ಚಿತ್ರದ ಹಲವಾರು ಪ್ರಮುಖ ದೃಶ್ಯಗಳ. ಶೂಟಿಂಗ್‌ ನಡೆಸಿದ್ದೇವೆ. ನಾಯಕನ ತಾಯಿಯಾಗಿ ಹಿರಿಯನಟಿ ಹರಿಣಿ, ತಂದೆಯಾಗಿ ಮಂಜುನಾಥ ಭಟ…, ಶಾಸಕನಾಗಿ ಗಿರೀಶ್‌ ಜತ್ತಿ ಭಾಗವಹಿಸಿದ್ದರು. ಎರಡನೇ ಹಂತದಲ್ಲಿ ಬೆಂಗಳೂರಿನಲ್ಲಿ ಚಿತ್ರೀಕರಣ ಮುಂದುವರೆಸುತ್ತೇವೆ. ಫ್ಯಾಮಿಲಿ ಸೆಂಟಿಮೆಂಟ್‌ ಜೊತೆಗೆ ಮಾಸ್‌ ಗೂ ಚಿತ್ರದಲ್ಲಿ ಹೆಚ್ಚಿನ ಅವಕಾಶವಿದೆ’ ಎಂದರು.

Advertisement

ನಾಯಕ ಕ್ರಾಂತಿ ಮಾತನಾಡಿ ಇದು ಎರಡನೇ ಚಿತ್ರ. ಮಾಸ್‌ ಶೇಡ್‌ ಇರೋ ಪಾತ್ರ ಇದಾಗಿದ್ದು, ತನ್ನ ತಂದೆಗೆ ಶಾಸಕನಿಂದ ಆದ ಅವಮಾನಕ್ಕೆ ಮಗ ಹೇಗೆ ತನ್ನ ಬುದ್ದಿವಂತಿಕೆಯಿಂದ ರಿವೆಂಜ್‌ ತೆಗೆದುಕೊಳ್ಳುತ್ತಾನೆ ಎನ್ನುವುದೇ ಕಥೆ. ಚಿತ್ರದಲ್ಲಿ ಆ್ಯಕ್ಷನ್‌ ಗೆ ಹೆಚ್ಚು ಅವಕಾಶವಿದೆ. ಅನ್ನದಾತ ನಿರ್ಮಾಪಕ ನಾಗೂರ್‌ ಅವರ ಸಿನಿಮಾ ಪ್ರೀತಿ ನಮ್ಮನ್ನು ಮೂಕರನ್ನಾಗಿಸಿದೆ. ಕಥೆ ಕೇಳಿದ ಅವರು ಬಜೆಟ್‌ ಬಗ್ಗೆ ಯೋಚಿಸದೆ, ಫ್ಯಾಮಿಲಿ ಸಂದೇಶವನ್ನು ಜನರಿಗೆ ತಲುಪಿಸಬೇಕೆಂದು ಈ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ ಎಂದು ಹೇಳಿದರು. ನಟಿ ಅಮೃತಾ ಚಿತ್ರದ ನಾಯಕಿಯ ಪಾತ್ರ ನಿರ್ವಹಿಸುತ್ತಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next