ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸದಸ್ಯತ್ವ ನೊಂದಣಿ ಇನ್ನೂ ಪ್ರಗತಿ ಆಗಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ಹೇಳಿದರು.
ಮಂಗಳವಾರ ಅವರು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸದಸ್ಯತ್ವ ನೊಂದಣಿ ಪ್ರಗತಿ ಪರಿಶೀಲನೆ ಮಾಡಿ ಅಗತ್ಯ ಸೂಚನೆ ನೀಡಿ ಮಾತನಾಡಿದರು.
ಒಂದೆರಡು ವಿಧಾನಸಭಾ ಕ್ಷೇತ್ರದಲ್ಲಿ ನೊಂದಣಿ ಪ್ರಕ್ರಿಯೆ ಉತ್ತಮವಾಗಿಲ್ಲ ಆ ಭಾಗದ ಪಕ್ಷದ ಪ್ರಮುಖರು ಆಸಕ್ತಿವಹಿಸಿ ಕೆಲಸ ಮಾಡಬೇಕು ಎಂದೂ ಸೂಚಿಸಿದರು.
ಜಿಲ್ಲಾ ಉಸ್ತುವಾರಿಗಳು ಮತ್ತು ಮುಖ್ಯನೊಂದಣಿಕಾರರೊಂದಿಗೆ ಸಮಾಲೋಚನೆ ನಡೆಸಿದ ಅವರು, ಈ ವರೆಗಿನ ಸದಸ್ಯತ್ವ ನೊಂದಣಿಗಿಂತ ಇನ್ನೂ ಹೆಚ್ಚು ಮಾಡಬೇಕು. ಜಿಲ್ಲೆಯ ಎಲ್ಲ ಬೂತು ಗಳಲ್ಲಿ ಕನಿಷ್ಠ ಸದಸ್ಯತ್ವ ಆಗಲೇಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಅಧ್ಯಕ್ಸತೆ ವಹಿಸಿದರು. ಎಸ್. ಕೆ ಭಾಗವತ್, ದೀಪಕ್ ದೊಡ್ಡೂರು, ಅಬ್ಬಾಸ ತೋನ್ಸೆ, ಸಂತೋಷ ಶೆಟ್ಟಿ ಇತರರು ಇದ್ದರು.
ಇದೆ ಸಂದರ್ಭದಲ್ಲಿ ಸೇವಾದಳದ ನೂತನ ಜಿಲ್ಲಾಧ್ಯಕ್ಷ ಗೋಲಯ್ಯ್ ಹಿರೇಮಠ್ ಅವರಿಗೆ ನೇಮಕಾತಿ ಪತ್ರ ನೀಡಿ ಅಭಿನಂದಿಸಿದರು.
ಅಲ್ಪಸಂಖ್ಯಾತ ವಿಭಾಗದ ಅಬ್ದುಲ್ ಮಜೀದ್ ರವರ ಕಾರ್ಯಕ್ಷಮತೆ ಶ್ಲಾಘಿಸಿ ರಾಜ್ಯ ಅಧ್ಯಕ್ಷರು ಸನ್ಮಾನಿಸಿದಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿ ಪರವಾಗಿ ಅಭಿನಂದಿಸಿದರು.