ಬೆಂಗಳೂರು: ಯಾವುದೇ ವ್ಯಕ್ತಿಯಿಂದ ರಥ ಯಾತ್ರೆ ನಡೆಯಲ್ಲ. ಪಕ್ಷದಿಂದ ರಥ ಯಾತ್ರೆ ನಡೆಯುತ್ತದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರು ಪಕ್ಷದ ಹಿರಿಯ ನಾಯಕರ ವಿರುದ್ಧ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಥಯಾತ್ರೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಅಧ್ಯಕ್ಷ, ಸಿಎಲ್ಪಿ ನಾಯಕ ಎಲ್ಲರೂ ಇರುತ್ತಾರೆ ಎಂದು ಹೇಳಿದರು.
ನಾವೆಲ್ಲ ಸಂಘಟಿತರಾಗಿ ಒಟ್ಟಾಗಿ ಚುನಾವಣೆಗೆ ಹೋಗುತ್ತೇವೆ. ಕೆಲವೊಂದು ಸಲಹೆಗಳು ಭಿನ್ನವಾಗಿ ಇರುತ್ತವೆ. ಹಾಗಂತ ಅದನ್ನು ಗೊಂದಲ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ಎಲ್ಲಾ ಮದರಸಾಗಳನ್ನು ಸುಟ್ಟು ಹಾಕಿ ಎಂದ ಯತಿ ನರಸಿಂಹಾನಂದ ಸರಸ್ವತಿ; ಕೇಸು ದಾಖಲು
ಅನವಶ್ಯಕ ಗೊಂದಲ ನಿರ್ಮಾಣ ಸರಿಯಲ್ಲ. ನನಗೆ ಜವಾಬ್ದಾರಿ ಕೊಟ್ಟಿಲ್ಲವೆಂದು ಯಾರು ಹೇಳಿದ್ದು? ಭಾರತ್ ಜೋಡೋದಲ್ಲಿ ಕೊಟ್ಟಿಲ್ಲವೆಂದು ಹೇಳಿದ್ದು ಯಾರು? ನನಗೆ ಚಿತ್ರದುರ್ಗದ ಜವಾಬ್ದಾರಿ ಕೊಟ್ಟಿದ್ದಾರೆ. ಅಲ್ಲಿ ರಾಹುಲ್ ಗಾಂಧಿ ಜೊತೆಯಲ್ಲಿ ಇರುತ್ತೇನೆ ಎಂದು ಹೇಳಿದರು.