ಹೊಸದಿಲ್ಲಿ: ಭಾರತದ ಅತೀ ಕಿರಿಯ ಹಾಗೂ ವಿಶ್ವದ 2ನೇ ಕಿರಿಯ ಚೆಸ್ ಗ್ರ್ಯಾನ್‌ಮಾಸ್ಟರ್ ಎಂಬ ದಾಖಲೆಗೆ ಪಾತ್ರರಾದ ಆರ್. ಪ್ರಜ್ಞಾನಂದ. ಇವರು 4 ತಿಂಗಳ ಹಿಂದೆ ಚೆಸ್ ಬೋರ್ಡ್ ಮುಂದೆ ಕುಳಿತ ಚಿತ್ರವೊಂದನ್ನು ಚೆನ್ನೈನ ವೇಲಮ್ಮಾಳ್ ಸ್ಕೂಲ್ ಸೋಮವಾರ ಬಿಡುಗಡೆ ಮಾಡಿದೆ. ಪ್ರಜ್ಞಾನಂದ ಇಟಲಿಯಲ್ಲಿ ನಡೆದ ಕೂಟದಲ್ಲಿ ಆತಿಥೇಯ ರಾಷ್ಟ್ರದ ಜಿಎಂ ಲುಕಾ ಮೊರೊನಿ ಅವರನ್ನು 8ನೇ ಸುತ್ತಿನಲ್ಲಿ ಮಣಿಸಿ 12 ವರ್ಷ, 10 ತಿಂಗಳು, 13 ದಿನದಲ್ಲಿ ಈ ಸಾಧನೆ ಮಾಡಿದ್ದಾರೆ.
1990ರಲ್ಲಿ ಉಕ್ರೇನಿನ ಸರ್ಗೆಯ್ ಕರ್ಜಾಕಿನ್ ಅವರು 12 ವರ್ಷ, 7 ತಿಂಗಳಲ್ಲಿ ಗ್ರ್ಯಾನ್ ಮಾಸ್ಟರ್ ಆದದ್ದು ದಾಖಲೆ.