ಸೋಮವಾರ ಘೋಷಿಸಿದೆ.
Advertisement
ವಿಲೀನ ಮತ್ತು ವಿಭಜನೆಗಾಗಿ ಫ್ಲಿಪ್‌ಕಾರ್ಟ್ 11,232 ಕೋಟಿ ರೂ. ಮೊತ್ತದ ಭರ್ಜರಿ ಆಫರ್ ನೀಡಿತ್ತು. ಇದು ದೇಶದ ಇ-ಕಾಮರ್ಸ್ ಕ್ಷೇತ್ರದ ಅತಿ ದೊಡ್ಡ ಆಫರ್ ಆಗಿತ್ತು. ಇನ್ನೊಂದೆಡೆ, ವಿಲೀನ ಪ್ರಕ್ರಿಯೆ ರದ್ದಾದ ಬೆನ್ನಲ್ಲೇ ಸ್ನ್ಯಾಪ್‌ಡೀಲ್ ತನ್ನ ಶೇ.80ರಷ್ಟು ಉದ್ಯೋಗಿಗಳನ್ನು ಕೆಲಸದಿಂದಕಿತ್ತುಹಾಕುವ ನಿರ್ಧಾರ ಕೈಗೊಂಡಿದೆ. ಕಂಪನಿಯ ಆಡಳಿತ ಮಂಡಳಿ ಈ ಬಗ್ಗೆ ಮೌಖೀಕವಾಗಿ ಆದೇಶ ನೀಡಿದೆ. ಒಟ್ಟು 1,200 ಮಂದಿ ಉದ್ಯೋಗಿಗಳಿದ್ದು, ಆ ಪೈಕಿ 1 ಸಾವಿರ ಮಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ವರ್ಷದ ಜುಲೈನಲ್ಲಿ ಕಂಪನಿಯಲ್ಲಿ 9 ಸಾವಿರ ಉದ್ಯೋಗಿಗಳಿದ್ದರು. ಅವರ ಸಂಖ್ಯೆಯನ್ನು 1,200ಕ್ಕೆ ಇಳಿಸಲಾಗಿತ್ತು.