ಬಾಗಲಕೋಟೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ವಿನೂತನ ಕಾರ್ಯಕ್ರಮದಡಿ ತಾಲೂಕಿನ ಕಲಾದಗಿಯಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಮಾಡಲಿರುವ ಕಂದಾಯ ಸಚಿವ ಆರ್.ಅಶೋಕ, ಮಧ್ಯಾಹ್ನ ಗ್ರಾಮಕ್ಕೆ ಆಗಮಿಸಿದರು.
ಕಲಾದಗಿಗೆ ಆಗಿಸುವ ಮೊದಲು ಮಾರ್ಗಮಧ್ಯೆ ಇರುವ ಉತ್ತರ ಕರ್ನಾಟದ ಪ್ರಸಿದ್ದ ತುಳಸಿಗೇರಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೆಷ ಪೂಜೆ ಸಲ್ಲಿಸಿದರು.
ತುಳಸಿಗೇರಿಯ ಆಂಜನೇಯ ದೇವಸ್ಥಾನ, ಈ ಭಾಗದ ಪ್ರಸಿದ್ಧ ಕಾಗೃತ ದೇವಾಲಯವಾಗಿದ್ದು, ಸಚಿವರಾದಿಯಾಗಿ ಬಿಜೆಪಿ ಮುಖಂಡರು ದರ್ಶನ ಪಡೆದರು. ಇದೇ ವೇಳೆ ನಾಡಿನ ಜನರ ಒಳಿತಿಗಾಗಿ ಪ್ರಾರ್ಥಿಸಿದರು. ನಂತರ ಕಲಾದಗಿಯ ಸಾಯಿ ಮಂದಿರ ಕ್ರಾಸ್ ಗೆ ಆಗಮಿಸಿದ ಆರ್. ಅಶೋಕ, ವಿಶೇಷ ಅಲಂಕಾರ ಮಾಡಿದ್ದ ಟ್ರ್ಯಾಕ್ಟರ್ ನಲ್ಲಿ ಸಚಿವರು ಮೆರವಣಿಯಲ್ಲಿ ಭಾಗವಹಿಸಿದರು.
ಇದನ್ನೂ ಓದಿ:ರಂಗಭೂಮಿಯ ಹೊಸ ಸಾಧ್ಯತೆಗಳ ಬಗ್ಗೆ ಅಧ್ಯಯನ ಅಗತ್ಯ: ಡಾ. ಅರುಣ ಜೋಳದ ಕೂಡ್ಲಗಿ
ಜಾಂಜ್ ಮೇಳ, ಡೊಳ್ಳು, ಕರಡಿ ಮಜಲು ಕಲಾವಿದರು ತಮ್ಮ ಕಲೆಯ ಮೂಲಕ ಮೆರವಣಿಗೆ ಮೆರಗು ನೀಡಿದರು. ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಮುರುಗೇಶ ನಿರಾಣಿ, ಸಂಸದ ಪಿ.ಸಿ ಗದ್ದಿಗೌಡರ, ವಿಧಾನಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿ.ಪಂ.ಸಿಇಒ ಟಿ. ಭೂಬಾಲನ್ ಮುಂತಾದವರು ಅಲಂಕೃತ ಟ್ಯಾಕ್ಟರ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಅಲ್ಲದೇ ನೂರಾರು ಎತ್ತಿನ ಬಂಡಿಗಳು, ಕುಂಭಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.