Advertisement

ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಆಗಿಲ್ಲ.. ಈಗಲೇ ಟವಲ್ ಹಾಕೋದು ಬೇಡ : ಆರ್. ಅಶೋಕ್

04:22 PM Jul 23, 2021 | Team Udayavani |

ಬೆಂಗಳೂರು : ಸಿಎಂ ಬದಲಾವಣೆ ವಿಚಾರವಾಗಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ನಾಯಕರು ಹೇಳಿದಂತೆ ಯಡಿಯೂರಪ್ಪ ಕೇಳುತ್ತಾರೆ. ಜುಲೈ 25ಕ್ಕೆ ಸಂದೇಶ ಬರಲಿದೆ ಎಂದು ಸಿಎಂ ಈಗಾಗಲೇ ಹೇಳಿದ್ದಾರೆ. ಮುಂದಿನ ಸಿಎಂ ಯಾರಾಗ್ತಾರೆ ಅನ್ನೋದು ಗೊತ್ತಿಲ್ಲ. ಯಾವ ಸಚಿವರು, ಶಾಸಕರು ಕೆಲಸ ಮಾಡುತ್ತಿದ್ದಾರೆ ಎಂಬುದು ಹೈಕಮಾಂಡ್ ಗೊತ್ತಿದೆ ಎಂದು ಆರ್ ಅಶೋಕ್ ವಿಧಾನಸೌಧದಲ್ಲಿ ಹೇಳಿಕೆ ನೀಡಿದ್ದಾರೆ.

Advertisement

ಹಿಂದುಳಿದ ವರ್ಗಕ್ಕೆ ಸಿಎಂ ಸ್ಥಾನ ಕೇಳಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಆಗಿಲ್ಲ. ಈಗಲೇ ಟವಲ್ ಹಾಕೋದು ಬೇಡ ಎಂದರು.

ವಲಸಿಗರು ಸಭೆ ನಡೆಸಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶೋಕ್, ವಲಸಿಗ ಸಚಿವರು ಯಾರು ಸಹ ಸಭೆ ನಡೆಸಿಲ್ಲ. ವಲಸಿಗರಿಗೆ ಆತಂಕವಿಲ್ಲ ನಿನ್ನೆ ಸಿಎಂ ಚೇಂಬರ್ ನಲ್ಲಿ ಸೇರಿದ್ದು ನಿಜಾ. ರಾಜಕೀಯ ಸ್ಥಿತಿ ಗತಿಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಮ್ಮ ಪಕ್ಷಕ್ಕೆ ಬಂದರನ್ನು ಚನ್ನಾಗಿ ನೋಡಿಕೊಳ್ಳತ್ತೇವೆ ಎಂದರು.

ಮುಂದಿನ ಸಿಎಂ ಯಾರು ಎಂಬುದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ನನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸುಮ್ಮನೇ ಸುಮ್ಮನೆ ನಾನು ನಾನು ಅಂದ್ರೆ ಆಗಲ್ಲ. ಅದರಿಂದ ಉಪಯೋಗವಿಲ್ಲ ನಮ‌್ಮ ಪಾರ್ಟಿಯಲ್ಲಿ ಆ ಸಿಸ್ಟಮ್ ಇಲ್ಲ. ನಾನು ಎಂದವರು ಆಗುವುದಿಲ್ಲ. ಹೈಕಮಾಂಡ್ ಕೂಡ ಮಾಹಿತಿ ಪಡೆಯುತ್ತಿದೆ. ಮಂತ್ರಿ ಮಂಡಲದಲ್ಲಿ ಯಾರು ಆಕ್ಟಿವ್ ಆಗಿದ್ದಾರೆ. ಯಾವ ಶಾಸಕರು ಆಕ್ಟಿವ್ ಆಗಿ ಕೆಲಸಕ್ಕೆ ಮಾಡಿದ್ದಾರೆ. ಅವರುಗಳ ಹೆಸರುಗಳು ಸಿಎಂ ರೇಸ್ ನಲ್ಲಿವೆ ಎಂದು ಅಶೋಕ್ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next