ಬೆಂಗಳೂರು: ರಾಜ್ಯದಿಂದ ಉತ್ತರಖಾಂಡ್‌ಗೆ ತುಂಬಾ ಪ್ರವಾಸಿಗರು ಹೋಗಿದ್ದರು. ಅವರ ರಕ್ಷಣೆಗೆ ತಂಡ ರಚಿಸಿ ಹೆಲ್ಪ್ ಲೈನ್ ಮಾಡಲಾಗಿದೆ. ಹತ್ತು ಕುಟುಂಬದ ಕರೆ ಬಂದಿದ್ದು, ಉತ್ತರಖಂಡ್ ರಾಜ್ಯದ ಜೊತೆ ಸಂಪರ್ಕ ಮಾಡಲಾಗಿದೆ. ಅವರ ಕುಟುಂಬದ ಜೊತೆ ಚರ್ಚೆ ಮಾಡಿದ್ದೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಾಖಂಡ್ ನಲ್ಲಿ ಒಟ್ಟಾರೆ 96 ಜನ ಸಿಲುಕಿದ್ದರು. ನಮ್ಮ ತಂಡ 24×7 ನಿರಂತರ ಕೆಲಸ ಮಾಡ್ತಿದ್ದಾರೆ. ಯಾರೂ ತಪ್ಪಿಸಿಕೊಂಡಿಲ್ಲ, ಎಲ್ಲರನ್ನೂ ಕರೆತರುವ ಕೆಲಸ ಮಾಡಲಾಗುತ್ತಿದೆ. ನಮ್ಮನ್ನ ಸಂಪರ್ಕಿಸಿದರೆ ಉಳಿದವರ ರಕ್ಷಣೆ ಮಾಡಲಾಗುವುದು ಎಂದರು.
ಕಲಬುರಗಿ ಭೂಕಂಪನದ ಬಗ್ಗೆ ಮಾತನಾಡಿದ ಅವರು, ಕಲಬುರಗಿ ಭೂಕಂಪದ ಸ್ಥಳಕ್ಕೆ ಹೋಗಿದ್ದೆ. ಕುಟುಂಬದ ಜೊತೆ ಮಾತನಾಡಿದ್ದೇನೆ. ಕೆಳ ಪದರದಲ್ಲಿ ಸುಣ್ಣದ ಅಂಶ ಜಾಸ್ತಿ ಇರುವುದರಿಂದ ಈ ರೀತಿಯಾಗುತ್ತಿದೆಯೆಂದು ವರದಿ ಬಂದಿದೆ. ಆತಂಕದಲ್ಲಿರುವ ನಿವಾಸಿಗಳಿಗೆ ತಾತ್ಕಾಲಿಕ ಶೆಡ್ ಹಾಕುವ ಕೆಲಸ ಮಾಡಲಾಗುತ್ತಿದೆ. ಅದಕ್ಕೆ ಕಂದಾಯ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗುವುದು ಎಂದರು.
ಇದನ್ನೂ ಓದಿ:ಹೋಮ್ ವರ್ಕ್ ಮಾಡಿಲ್ಲ ಎಂದು 7ನೇ ತರಗತಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ!
ವಿಜಯಪುರದಲ್ಲೂ ಇಂತದ್ದೇ ಘಟನೆ ಆಗಿದೆ. ವಿಜ್ಞಾನಿಗಳು ನೀಡಿರುವ ವರದಿ ಪ್ರಕಾರ ಏನೂ ಆಗುವುದಿಲ್ಲ. ಒಂದು ವಾರದಲ್ಲಿ ವರದಿ ಬರಲಿದ್ದು, ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅಶೋಕ್ ಹೇಳಿದರು.