Advertisement

ಪ್ರವಾಹ ಹಾನಿಗೆ ಎಷ್ಟೇ ಖರ್ಚಾದರು ರಾಜ್ಯ ಸರಕಾರ ಹಣ ಬಿಡುಗಡೆ ಮಾಡಲಿದೆ: ಆರ್. ಅಶೋಕ್

05:13 PM Aug 26, 2020 | sudhir |

ಯಾದಗಿರಿ: ರಾಜ್ಯದಲ್ಲಾಗಿರುವ ಪ್ರವಾಹ ಪರಿಹಾರವಾಗಿ 4 ಸಾವಿರ ಕೋಟಿ ರೂಪಾಯಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ರಾಜ್ಯದಲ್ಲಿ ಪ್ರವಾಹದಿಂದಾಗಿರುವ ಹಾನಿಗೆ ಎಷ್ಟೇ ಖರ್ಚಾದರು ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

Advertisement

ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಯಾದಗಿರಿ ಜಿಲ್ಲೆ ಆಗಮಿಸಿರುವ ಸಚಿವರು, ಸುರಪುರ ತಾಲೂಕಿನ ದೇವಾಪುರ ಬ್ರಿಡ್ಜ್ ವೀಕ್ಷಿಸಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು. ಈಗಾಗಲೇ ಎನ್‌ಡಿಆರ್‌ಎಫ್ 2ನೇ ಕಂತು 319 ಕೋಟಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. 3ನೇ ಕಂತು ಕೇಳಿದ್ದೇವೆ, ಕೇಂದ್ರ ಸರ್ಕಾರ ನಮ್ಮ ಜತೆಯಲ್ಲಿದೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಪ್ರವಾಹದ ಬಗ್ಗೆ ಏನೇನು ಕ್ರಮಕೈಗೊಳ್ಳಬೇಕೊ ಅದನ್ನು ಮಾಡುತ್ತೆ ಎಂದರು.

ಮನೆ ಬಿದ್ದಿರುವವರಿಗೆ ಕಳೆದ ಬಾರಿಯಂತೆ ಪರಿಹಾರ ನೀಡಲಾಗುವುದು, ಬೆಳೆ ಪರಿಹಾರವನ್ನು ಎನ್‌ಡಿಆರ್‌ಎಫ್ ನಿಯಮದಂತೆ ನೀಡಲಾಗುವುದು ಎಂದರು. ಕಳೆದ ಬಾರಿ ಪ್ರವಾಹದಿಂದ ಬೆಳೆ ಹಾನಿಯಾಗಿರುವ ಹಣ ರೈತರಿಗೆ ಬಾರದಿರುವುದು, ಅನ್ಯ ಜಿಲ್ಲೆಯ ರೈತರಿಗೆ ಸುರುಪುರ ಭಾಗದ ರೈತರ ಹಣ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ವ್ಯತ್ಯಾಸಗಳಾದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು. ಕೆಲವರು ದಾಖಲೆ ಸರಿಯಾಗಿ ನೀಡಲ್ಲ. ಹಾಗಾಗಿ ತಡವಾಗಿದೆ ಸರಿಪಡಿಸಲಾಗುವುದು ಎಂದರು.

ಟಿಪ್ಪು ಬಗ್ಗೆ ಬಿಜೆಪಿ ನಿಲುವು ಬದಲಾಗಿಲ್ಲ: ಟಿಪ್ಪು ಮತಾಂತರ, ಕೊಡಗಿನಲ್ಲಿ ನಡೆಸಿದ ಕಗ್ಗೊಲೆ ಎಲ್ಲವೂ ಕಣ್ಣ ಮುಂದೆಯೇ ಇದೆ. ಬಿಜೆಪಿ ನಿಲುವು ಟಿಪ್ಪು ಬಗ್ಗೆ ಸ್ಪಷ್ಟವಾಗಿದೆ ಎಂದು ಹೆಚ್. ವಿಶ್ವನಾಥ ಟಿಪ್ಪು ಸುಲ್ತಾನ್‌ನ್ನು ಹೊಳಗಿರುವ ವಿಷಯಕ್ಕೆ ಪ್ರತಿಕ್ರಿಯಿಸಿದರು. ವಿಶ್ವನಾಥ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೊ ಗೊತ್ತಿಲ್ಲ ಎಂದರು. ವಿಜಯೇಂದ್ರ ೫ ಸಾವಿರ ಕೋಟಿ ಭ್ರಷ್ಟಾಚಾರ ಆರೋಪ ಸುಮ್ಮನೆ ಮನಸ್ಸಿಗೆ ಬಂದಂತೆ ಹೇಳುವುದು ಸರಿಯಲ್ಲ. ಆ ರೀತಿ ಯಾವುದೇ ಘಟನೆ ನಡೆದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next