Advertisement

ಮಂಗಳೂರು ಕಾಲೇಜಿಲ್ಲಿ ರಸಪ್ರಶ್ನೆ ಸ್ಪರ್ಧೆ

12:21 PM Dec 07, 2017 | Team Udayavani |

ಕೆಂಗೇರಿ: ಸೋಲು, ಗೆಲುವಿನ ಲೆಕ್ಕಾಚಾರ ಬದಿಗಿರಿಸಿ ಮೊದಲು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಅನುಭ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಪದವಿ ಪೂರ್ವ ಶಿಕ್ಷಣವಿಭಾಗದ ನಿವೃತ್ತ ದೈಹಿಕ ಶಿಕ್ಷಣ ಅಧೀಕ್ಷಕ ಲಿಂಗರಾಜು ಕರೆ ನೀಡಿದರು.

Advertisement

ಉಲ್ಲಾಳು ಮುಖ್ಯರಸ್ತೆಯ ಮಂಗಳೂರು ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ “ಎನ್‌ಲೈಟ್‌ 2017′ ಅಂತರ ಶಾಲಾ ರಸಪ್ರಶ್ನೆ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹೆಚ್ಚು ಹೆಚ್ಚು ಸ್ಪರ್ಧೆಗಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳ ಜ್ಞಾನ ವಿಕಾಸವಾಗುತ್ತದೆ ಎಂದರು.

ಶ್ರೀದೇವಿ ಎಜುಕೇಷನಲ್‌ ಟ್ರಸ್ಟ್‌ ಅಧ್ಯಕ್ಷ, ಕಾಲೇಜಿನ ಪ್ರಿನ್ಸಿಪಾಲ್‌ ಡಾ. ಜಯರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಳೆದ ಶೈಕ್ಷಣಿಕ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ರ್‍ಯಾಂಕ್‌ ಪಡೆದಿದ್ದ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ನಿಖೀಲ್‌ ಕೆ.ಜೆ, ಮತ್ತು ವಾಣಿಜ್ಯ ವಿಭಾಗ ವಿದ್ಯಾರ್ಥಿ ಉಷಾಕಿರಣ್‌ ಹಾಗೂ ಶ್ರೀನಿವಾಸ ಪ್ರಭು ಅನುಭವ ಹಂಚಿಕೊಂಡರು.

ಕ್ವಿಜ್‌ ಮಾಸ್ಟರ್‌ ಪ್ರಜ್ವಲ್‌ ಪ್ರಸಾದ್‌ ನೇತೃತ್ವದ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಎಂಇಎಸ್‌ ಕಾನ್ವೆಂಟ್‌ (ಪ್ರಥಮ), ಎಸ್‌ಜೆಆರ್‌ ಪಬ್ಲಿಕ್‌ ಸ್ಕೂಲ್‌ (ದ್ವಿತೀಯ), ಪ್ರಿಯದರ್ಶಿನಿ ವಿದ್ಯಾ ಕೇಂದ್ರ (ತೃತಿಯ)ದ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡರು. ಕೆ.ಅರ್‌ ಪ್ರಸಾದ್‌, ಟಿ.ಎಸ್‌.ತುಳಸಿ ಕುಮಾರ್‌, ವಿಜಯಲಕ್ಷ್ಮೀ, ಶಾಜಿಯಾ ಸುಲ್ತಾನ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next