Advertisement

ಕ್ವಿಟ್‌ ಇಂಡಿಯಾ ನೆನಪು ಕಾರ್ಯಕ್ರಮ

09:52 AM Aug 10, 2020 | Suhan S |

ಹಾಸನ: ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕ್ವಿಟ್‌ ಇಂಡಿಯಾ ಚಳವಳಿಯ ಒಂದು ನೆನಪು ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಲಾಯಿತು.

Advertisement

ಹಾಸನ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಘು ಮಾತನಾಡಿ, 1942, ಆ.8ರಂದು ಮುಂಬೈನ ಗೊವಾಳಿಯ ಮೈದಾನದಲ್ಲಿ ಗಾಂಧೀಜಿಯವರು “ಮಾಡು ಇಲ್ಲವೆ ಮಡಿ’ ಘೋಷಣೆಯೊಂದಿಗೆ ಕ್ವಿಟ್‌ ಇಂಡಿಯಾ ಚಳವಳಿಯನ್ನು ಘೋಷಿಸಿದರು. ಆ.9 ರಿಂದ ಚಳವಳಿ ಆರಂಭವಾಯಿತು. ಕೊನೆಗೆ ಬ್ರಿಟಿಷರು ಗಾಂಧೀಜಿ ಯವರನ್ನು ಬಂಧಿಸಿ ಅಗಾಖಾನ್‌ ಅರಮನೆಯಲ್ಲಿ ಗೃಹ ಬಂಧನ ದಲ್ಲಿಟ್ಟದ್ದರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ ಯು ಸ್ವಾತಂತ್ರ್ಯ ಹೋರಾಟದ ನಿರ್ಣಾಯಕ ಹಂತವಾಗಿತ್ತು ಎಂದರು.

ಗಾಂಧೀಜಿ ಬಂಧನಕ್ಕೊಳಗಾದ ನಂತರ ಜಯಪ್ರಕಾಶ್‌ ನಾರಾಯಣ್‌, ಲೋಹಿಯಾ, ಅರುಣಾ ಆಸಿಫ್ ಅಲಿ ಮತ್ತಿತರರು ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಿದರು. ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮದ್‌ ಆರೀಫ್, ಎನ್‌ಎಸ್‌ಯುಐ ಅಧ್ಯಕ್ಷ ರಂಜಿತ್‌, ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ್‌, ಉಜ್ವಲ್‌, ಪ್ರಕಾಶ್‌, ಪ್ರವೀಣ್‌, ರಘು, ಶಿವಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next