Advertisement
ಹೀಗೆಂದು ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ. ಜುಲೈ ತಿಂಗಳ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ರವಿವಾರ ಮಾತನಾಡಿದ ಅವರು, “1941, ಆಗಸ್ಟ್ 9ರಂದು ಮಹಾತ್ಮಾ ಗಾಂಧಿ ಅವರಿಂದ ಚಾಲನೆ ಕಂಡ “ಭಾರತ ಬಿಟ್ಟು ತೊಲಗಿ’ (ಕ್ವಿಟ್ ಇಂಡಿಯಾ)ಚಳವಳಿ ಬಗ್ಗೆ ಪ್ರಸ್ತಾವಿಸಿ, ಅದೇ ಕೆಚ್ಚೆದೆಯಿಂದ ನವ ಭಾರತ ಕಟ್ಟಲು ಹೋರಾಟ ನಡೆಯಬೇಕಿದೆ. ಕ್ವಿಟ್ ಇಂಡಿಯಾ ಚಳವಳಿಯ ಪರಿಣಾಮ ಬ್ರಿಟಿಷರು ದೇಶಬಿಟ್ಟು ಹೋಗುವಂತಾಯಿತು. 1947, ಆ.15ರಂದು ದೇಶಕ್ಕೂ ಸ್ವಾತಂತ್ರ್ಯ ಸಿಕ್ಕಿತು’ ಎಂದು ಹೇಳಿದರು.
Related Articles
ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ಉತ್ತರ ಭಾರತದ ರಾಜ್ಯಗಳಲ್ಲಿ ಪ್ರವಾಹದಿಂದ ಸಾಕಷ್ಟು ನಷ್ಟವಾಗಿರುವು ದನ್ನು ಗಮನಿಸಿದ್ದೇನೆ. ಸೂಕ್ತ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ವಿಮಾ ಕಂಪನಿಗಳ ಅಧಿಕಾರಿಗಳು ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬುವ ರೀತಿಯಲ್ಲಿ ಪ್ರಾಮಾಣಿಕ ಸ್ಪಂದನೆಗೆ ಮುಂದಾಗಬೇಕಿದೆ. ಹಾಗೆಯೇ, ಹವಾಮಾನ ಇಲಾಖೆ ನೀಡುವ ನಿಖರ ವರದಿಗಳನ್ನು ಆಧರಿಸಿಯೇ ರೈತರು ಮುಂದಿನ ಹೆಜ್ಜೆ ಇಡಬೇಕು ಎಂದಿದ್ದಾರೆ.
Advertisement
ಜಿಎಸ್‌ಟಿ ಜಾರಿ ಅಧ್ಯಯನ ವಿಷಯಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಚಾರದ ಬಗ್ಗೆಯೂ ಮಾತನಾಡಿದ ಮೋದಿ ಅವರು, “ಜಿಎಸ್‌ಟಿ ಅನುಷ್ಠಾನವೇ ಒಂದು ಅಧ್ಯಯನ ವಿಷಯ. ವಿಶ್ವದ ಕೆಲವು ಪಂಡಿತರು ಹಾಗೂ ಆರ್ಥಿಕ ತಜ್ಞರು ಇಂದು ಜಿಎಸ್‌ಟಿ ಅನುಷ್ಠಾನ ಹಾಗೂ ಬದಲಾವಣೆಯ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಲಕ್ಷಾಂತರ ಮಂದಿ ಇದನ್ನು ಅಳವಡಿಸಿಕೊಳ್ಳುವಲ್ಲಿ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ದೇಶದ ಸಹಕಾರ ತತ್ವಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ ಕೂಡ. ಈ ನಿರ್ಧಾರ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಕಾರದಿಂದಲೇ ಸಾಧ್ಯವಾಗಿರುವುದು. ತೆರಿಗೆ ಸುಧಾರ ಣೆಯೇ ಜಿಎಸ್‌ಟಿ, ಬಳಕೆಯಿಂದ ಹೊಸ ಸಂಸ್ಕೃತಿ ಸಾಧ್ಯ ಎಂದು ಹೇಳಿದ್ದಾರೆ.