ಹಳೆಯಂಗಡಿ: ತೌಖ್ತೇ ಚಂಡಮಾ ರುತದ ಪರಿಣಾಮವಾಗಿ ಶನಿವಾರ ಅಬ್ಬರಿಸಿದ್ದ ಇಲ್ಲಿನ ಸಸಿಹಿತ್ಲುವಿನ ಕಡಲ ತೀರವು ರವಿವಾರ ಬೆಳಿಗ್ಗೆ ತಕ್ಕಮಟ್ಟಿಗೆ ಶಾಂತವಾಗಿದ್ದು, ಅದಾಗ್ಯೂ ಯಾವುದೇ ಕ್ಷಣದಲ್ಲಿಯೂ ರೌದ್ರಾವತಾರ ತಾಳುವ ಆತಂಕವನ್ನು ಸ್ಥಳೀಯರು ಹೊಂದಿದ್ದಾರೆ.
ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು ಅದು ವಿಸ್ತಾರಗೊಂಡಲ್ಲಿ ಮತ್ತೆ ಅಪಾಯವಿದೆ, ಶನಿವಾರ ಸುಮಾರು 11ರಿಂದ ಮುಂಜಾನೆ 2ರವರೆಗೆ ಬಲವಾದ ಗಾಳಿಯಿತ್ತು, ಅಲೆಗಳು ದಡಕ್ಕೆ ಭೀಕರವಾಗಿ ಅಪ್ಪಳಿಸಿತ್ತು ಹತ್ತಾರು ಮನೆಗಳ ಅಂಗಳದವರೆಗೆ ನೀರು ಹರಿದಿದೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು “ಉದಯವಾಣಿ”ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ದೇಶದಲ್ಲಿಂದು 3,11,170 ಕೋವಿಡ್ ಪಾಸಿಟಿವ್, 3,62,437 ಮಂದಿ ಡಿಸ್ಚಾರ್ಜ್
ಶನಿವಾರ ಶಾಸಕ ಉಮಾನಾಥ ಕೋಟ್ಯಾನ್ ಅವರು ಸ್ಥಳಕ್ಕೆ ಭೇಟಿ ನೀಡಿ, ಕಡಲ ತೀರದಲ್ಲಿರುವ ಎಲ್ಲಾ 72 ಮನೆಗಳ ನಿವಾಸಿಗಳನ್ನು ಎನ್ ಐಟಿಕೆಗೆ ರವಾನಿಸಲು ಸೂಚನೆ ನೀಡಿದ್ದರು, ಆದರೆ ತಮ್ಮ ಮನೆಯನ್ನು ಬಿಡಲು ಒಪ್ಪದೆ ಕೊನೆಗೆ ಮನವೊಲಿಸಿ ಅತಿ ಹೆಚ್ಚು ಅಪಾಯವಿರುವ ಸುಮಾರು 7 ಮನೆಗಳ ಸದಸ್ಯರನ್ನು ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಸಭಾಂಗಣದಲ್ಲಿ ಆಶ್ರಯ ನೀಡಿ ರಾತ್ರಿಯ ಊಟ ಹಾಗೂ ಬೆಳಿಗ್ಗೆ ಫಲಾಹಾರವನ್ನು ನೀಡಿ ಸತ್ಕರಿಸಲಾಗಿದೆ. ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸದಸ್ಯರು, ಗ್ರಾಮಸ್ಥರು ವಿಶೇಷ ಸಹಕಾರ ನೀಡಿದ್ದಾರೆ.
ಇದನ್ನೂ ಓದಿ: ‘ತೌಕ್ತೆ’ ಅಬ್ಬರ : ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸಿಎಂ ಬಿ.ಎಸ್. ವೈ ಸೂಚನೆ