Advertisement
ಮಂಗಳವಾರ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆಯಲ್ಲಿ ನಡೆದ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಶಾಸಕರ ಪ್ರಶ್ನೆಗೆ ಅಭಿವೃದ್ಧಿಯ ಮಾಹಿತಿ ನೀಡಿದರು.
ಸೈಕಲ್ ಹಾಗೂ ಸಮವಸ್ರ 100 ಶೇ. ಬಂದಿದ್ದು ಸೈಕಲ್‌ಗಳ ಜೋಡಣೆ ನಡೆಯುತ್ತಿದೆ. ಎಸೆಸೆಲ್ಸಿ ಫಲಿತಾಂಶದಲ್ಲಿ ಬೆಳ್ತಂಗಡಿಯು ದ.ಕ. ಜಿಲ್ಲೆಗೆ ಎರಡನೆ ಸ್ಥಾನ ಪಡೆದಿದೆ. 70 ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. 20 ಶಾಲೆಗಳಿಗೆ ಆವರಣ ಗೋಡೆ ರಚನೆಗೆ ನರೇಗಾ ಯೋಜನೆಯಲ್ಲಿ ಅನುದಾನ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ್ ಹೇಳಿದರು. ಕೆಎಸ್‌ಆರ್‌ಟಿಸಿ ಡಿಪೋ
ಕೆಎಸ್‌ಆರ್‌ಟಿಸಿ ಡಿಪೋ ಮಾಡಲು ಉಜಿರೆ ಬಳಿಯ ಜಾಗದ ಕುರಿತು ತಾಲೂಕು ಕಚೇರಿ ಮೂಲಕ ಅರಣ್ಯ ಇಲಾಖೆಯಿಂದ ನಕ್ಷೆ ಕೇಳಲಾಗಿದೆ. ದೊರೆತ ಅನಂತರ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಧರ್ಮಸ್ಥಳ ಡಿಪೋದವರು ಉತ್ತರಿಸಿದರು. ಮಂಗಳೂರಿಗೆ ಧರ್ಮಸ್ಥಳದಿಂದ ಹಾಗೂ ಮಂಗಳೂರಿನಿಂದ ರಾತ್ರಿ 8ರ ಅನಂತರ ಬಸ್ ಸೌಲಭ್ಯ ಬೇಕು. ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ ಹಾಗೂ ಮಮತಾ ಎಂ. ಶೆಟ್ಟಿ ಹೇಳಿದರು.
Related Articles
Advertisement
ಟ್ರಾಫಿಕ್ ಜಾಮ್ ಕಿರಿಕಿರಿಗುರುವಾಯನಕೆರೆಯಿಂದ ಬೆಳ್ತಂಗಡಿವರೆಗೆ ಟ್ರಾಫಿಕ್ ಜಾಮ್ ಕಿರಿಕಿರಿ ನಿತ್ಯ ನಿರಂತರವಿದೆ. ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆಯಲ್ಲಿ ಪೊಲೀಸ್ ಸಿಬಂದಿ ನಿಯೋಜಿಸಿ ರಸ್ತೆಯಲ್ಲೇ ವಾಹನ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುವ ವಾಹನಗಳಿಗೆ ದಂಡ ವಿಧಿಸಬೇಕು ಎಂದು ಶಾಸಕರು ಪೊಲೀಸ್ ಇಲಾಖೆಗೆ ಸೂಚಿಸಿದರು. ಕಲ್ಲಡ್ಕ ಗಲಭೆ ಪ್ರಯುಕ್ತ ಪೊಲೀಸರು ಹೆಚ್ಚುವರಿ ಕರ್ತವ್ಯದಲ್ಲಿರುವ ಕಾರಣ ಇಲ್ಲಿ ಸಿಬಂದಿಗಳ ಕೊರತೆ ಇದೆ ಎಂದು ಪೊಲೀಸ್ ಸಹಾಯಕ ಉಪನಿರೀಕ್ಷಕರು ಉತ್ತರಿಸಿದರು. ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್. ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ತಹಶೀಲ್ದಾರ್ ತಿಪ್ಪೆಸ್ವಾಮಿ,. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ್ ಉಪಸ್ಥಿತರಿದ್ದರು.