Advertisement
ಈ ಕುರಿತಂತೆ ರಾಜ್ಯ ಸರ್ಕಾರದ ಬಳಿಯೂ ಚರ್ಚಿಸಲಾಗಿದ್ದು, ಶೀಘ್ರದಲ್ಲಿ ಈ ಕುರಿತು ಅನುಮತಿ ದೊರೆಯುವ ಸಾಧ್ಯತೆಗಳಿವೆ. ನಗರದ ಸೌಂದರ್ಯ ಮತ್ತು ಪರಿಸರ ಹಾಳು ಮಾಡುತ್ತಿರುವ ಜಾಹೀರಾತು ಪ್ರದರ್ಶನವನ್ನು ನಿಷೇಧಿಸಲಾಗಿದೆ.
Related Articles
Advertisement
ಸದ್ಯ ಪಿಪಿಪಿಗೆ ಮಾತ್ರ ಅನುಮತಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ ವಾರ್ತಾ ಇಲಾಖೆ ಅಳವಡಿಸಿರುವ ಬೃಹತ್ ಹೋರ್ಡಿಂಗ್ಸ್‌ಗಳಲ್ಲಿ ಸರ್ಕಾರದ ಕಾರ್ಯಕ್ರಮಗಳ ಜಾಹೀರಾತನ್ನು ಮಾತ್ರ ಪ್ರದರ್ಶಿಸಲಾಗುತ್ತಿದೆ. ಅದನ್ನು ಹೊರತು ಪಡಿಸಿದರೆ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವ ಶೌಚಾಲಯ, ಪಾದಚಾರಿ ಮೇಲ್ಸೇತುವೆ, ಬಸ್ ನಿಲುಗಡೆ ಸ್ಥಳ ಸೇರಿ ಇನ್ನಿತರ ನಿರ್ಮಾಣದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅನುಮತಿಸಲಾಗುತ್ತಿದೆ. ಅದನ್ನು ಹೊರತುಪಡಿಸಿ ದರೆ ಖಾಸಗಿಯವರು ಹೋರ್ಡಿಂಗ್ಸ್‌ಗಳನ್ನು ಅಳವಡಿಸುವುದು, ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ಪ್ರದರ್ಶನಕ್ಕೆ ಅನುಮತಿಯಿಲ್ಲ.
ನೂತನ ಕ್ರಮದಿಂದ ಆದಾಯ: ಸಾರ್ವಜನಿಕ ಸ್ಥಳದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಖಾಸಗಿಯವರಿಗೆ ಅನುಮತಿಸುವುದರಿಂದ ಬಿಬಿಎಂಪಿಯ ಆದಾಯ ವೃದ್ಧಿಯಾಗಲಿದೆ. ಈ ಹಿಂದೆ ಜಾಹೀರಾತು ಪ್ರದರ್ಶನ ನಿಷೇಧಿಸುವವರೆಗೆ ಬಿಬಿಎಂಪಿಗೆ ವಾರ್ಷಿಕ 40ರಿಂದ 50 ಕೋಟಿ ರೂ. ಮಾತ್ರ ಆದಾಯ ಬರುತ್ತಿತ್ತು. ಅದಕ್ಕೆ ಪ್ರಮುಖ ಕಾರಣ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ 8 ಸಾವಿರಕ್ಕೂ ಹೆಚ್ಚಿನ ಜಾಹೀರಾತು ಹೋರ್ಡಿಂಗ್ಸ್‌ಗಳಲ್ಲಿ ಶೇ. 50 ಅಕ್ರಮ ಹಾಗೂ ಬಿಬಿಎಂಪಿಯಲ್ಲಿ ನೋಂದಣಿ ಮಾಡಿಕೊಳ್ಳದೇ ಇರುವಂತಹದ್ದಾಗಿದ್ದವು. ಆದರೆ, ಬಿಬಿಎಂಪಿ ಜಾಹೀರಾತು ನಿಯಮ 2019 ಜಾರಿಯ ನಂತರ ಬಿಬಿಎಂಪಿಗೆ 200ರಿಂದ 300 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಹೊಂದಲಾಗಿದೆ.
ಹೋರ್ಡಿಂಗ್ಸ್‌ಗಳಿಗೆ ಪ್ರತ್ಯೇಕ ಸಂಖ್ಯೆ ನಿಗದಿ : ಈ ಹಿಂದೆಯೇ ರೂಪಿಸಲಾಗಿರುವ ಬಿಬಿಎಂಪಿ ಜಾಹೀರಾತು ನಿಯಮ 2019ಕ್ಕೆ ಅನುಮತಿ ದೊರೆತ ನಂತರ ಬಿಬಿಎಂಪಿ ಕಂದಾಯ ವಿಭಾಗ ಜಾಹೀರಾತು ಪ್ರದರ್ಶನದ ಸ್ಥಳಗಳನ್ನು ನಿಗದಿ ಮಾಡಲಿದೆ. ಅಲ್ಲದೆ, ಪ್ರತಿ ಜಾಹೀರಾತು ಹೋರ್ಡಿಂಗ್‌ಗೂ ಪ್ರತ್ಯೇಕ ಆರ್‌ಎಫ್ಐಡಿ ಸಂಖ್ಯೆಯನ್ನು ನೀಡಲಿದೆ. ಹಾಗೆಯೇ, ಪ್ರತಿ ಹೋರ್ಡಿಂಗ್‌ನ್ನು ಜಿಪಿಎಸ್ ಮ್ಯಾಪಿಂಗ್ ಮಾಡಲಾಗುತ್ತದೆ. ಅದರಿಂದ ಜಾಹೀರಾತು ಹೋರ್ಡಿಂಗ್‌ನ ಲೆಕ್ಕ ಸಮರ್ಪಕವಾಗಿಟ್ಟುಕೊಳ್ಳಲು, ಅದನ್ನು ಹರಾಜಿನ ಮೂಲಕ ಜಾಹೀರಾತು ಪ್ರದರ್ಶಕರಿಗೆ ನೀಡಲು ಅನುಕೂಲವಾಗಲಿದೆ. ಈ ಎಲ್ಲದರ ಬಗ್ಗೆಯೂ ನಿಯಮದಲ್ಲಿ ಉಲ್ಲೇಖೀಸಲಾಗಿದೆ.
ಮಾಸಿಕ 10 ಪ್ರಕರಣ : ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಸುವವರ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಅದರಂತೆ ಪ್ರತಿ ವಲಯದಲ್ಲಿ ಅನಧಿಕೃತ ಜಾಹೀರಾತು ಪ್ರದರ್ಶಕರ ವಿರುದ್ಧ ಮಾಸಿಕ ಕನಿಷ್ಠ 10 ಪ್ರಕರಣ ದಾಖಲಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಜಾಹೀರಾತು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಸಿದ್ಧಪಡಿಸಲಾಗಿರುವ ಬಿಬಿಎಂಪಿ ಜಾಹೀರಾತು ನಿಯಮ 2019ರಲ್ಲಿ ಎಲ್ಲ ಅಂಶಗಳಿದ್ದು, ಮುಖ್ಯಮಂತ್ರಿಗಳ ಒಪ್ಪಿಗೆ ನಂತರ ಅದನ್ನು ಜಾರಿ ಮಾಡಲಾಗುವುದು. ಅದರಿಂದ ಬಿಬಿಎಂಪಿಗೆ ಆದಾಯವೂ ಬರಲಿದೆ. -ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ
-ಗಿರೀಶ್ ಗರಗ