Advertisement

ಬೀಚ್‌ ಅಭಿವೃದ್ಧಿ  ಕಾಮಗಾರಿ ಶೀಘ್ರ ಕಾರ್ಯರೂಪಕ್ಕೆ ತನ್ನಿ: ಪ್ರಮೋದ್‌

11:06 AM Jan 29, 2018 | Team Udayavani |

ಉಡುಪಿ: ಮಲ್ಪೆ ಬೀಚ್‌ ಅಭಿವೃದ್ಧಿ ಕುರಿತು ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಹಾಗೂ ಕಾಮಗಾರಿಗಳನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರುವಂತೆ ಸಚಿವ ಪ್ರಮೋದ್‌ ಮಧ್ವರಾಜ್‌ ಸೂಚಿಸಿದ್ದಾರೆ.

Advertisement

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಲ್ಪೆ ಬೀಚ್‌ನ ಪಾರ್ಕಿಂಗ್‌ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸುವಂತೆ ಕೆಆರ್‌ಐಡಿಎಲ್‌ ಅಧಿಕಾರಿಗಳಿಗೆ ಸೂಚಿಸಿದರು. ಫೆಬ್ರವರಿ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ, ಮಲ್ಪೆಯ ಬಲರಾಮ ಸರ್ಕಲ್‌ ಬಳಿ ಬಸ್‌ ನಿಲ್ದಾಣ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಿ ಬೀಚ್‌ ಅಭಿವೃದ್ಧಿ ಕುರಿತಂತೆ ನಗರಸಭಾ ಸದಸ್ಯ ಪ್ರಶಾಂತ್‌ ಅಮೀನ್‌ ನೀಡಿರುವ ಪಟ್ಟಿಯಲ್ಲಿನ ಕಾಮಗಾರಿಗಳನ್ನು ಶೀಘ್ರ ಕಾರ್ಯರೂಪಕ್ಕೆ ತರುವಂತೆ ಪೌರಾಯುಕ್ತ ಮಂಜುನಾಥಯ್ಯ ಅವರಿಗೆ ಸೂಚಿಸಿದರು.

ಬೀಚ್‌ನಲ್ಲಿರುವ ವೇದಿಕೆ ಬಳಿ 2 ಗ್ರೀನ್‌ ರೂಂ ನಿರ್ಮಿಸುವಂತೆ ಹಾಗೂ ಅಲ್ಲಿರುವ ಶೌಚಾಲಯದ ಬಳಿ ಬಯೋ ಡೈಜೆಸ್ಟ್‌ ನಿರ್ಮಿಸುವಂತೆ, ಸೈಂಟ್‌ ಮೇರಿಸ್‌ ದ್ವೀಪದಲ್ಲಿರುವ ಆಹಾರ ಮಳಿಗೆಗಳಲ್ಲಿ ದರಪಟ್ಟಿ ಪ್ರದರ್ಶಿಸುವಂತೆ, ಪ್ರವಾಸಿಗರಿಗೆ ಆಹಾರದ ಕೊರತೆಯಾಗದಂತೆ ಹಾಗೂ ಬೀಚ್‌ ಮತ್ತು ದ್ವೀಪದ ನೈಸರ್ಗಿಕ ಸೌಂದರ್ಯ ಹಾಳಾಗದಂತೆ ಎಚ್ಚರ ವಹಿಸುವಂತೆ ಮತ್ತು ಪ್ರವಾಸಿಗರಿಗೆ ಪೂರಕ ವಾತಾವರಣ ನಿರ್ಮಿಸುವಂತೆ ತಿಳಿಸಿದರು.

ಬೀಚ್‌ನಲ್ಲಿರುವ ಎಲ್ಲ ಅಂಗಡಿಗಳಿಗೆ ಪ್ರತ್ಯೇಕ ನಂಬರ್‌ ನೀಡುವಂತೆ ಸೂಚಿಸಿದ ಸಚಿವರು, ಬೀಚ್‌ ಅಭಿವೃದ್ಧಿ ಸಮಿತಿ ಕಚೇರಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ತಿಳಿಸಿದರು. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next