Advertisement

ಶೀಘ್ರ ಹೋಂ ಐಸೋಲೇಷನ್‌ ವ್ಯವಸ್ಥೆ

05:55 AM Jul 07, 2020 | Lakshmi GovindaRaj |

ಮೈಸೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್‌ 19 ಸೋಂಕಿತರಲ್ಲಿ ಟ್ರಾವೆಲ್‌ ಹಿಸ್ಟರಿಯುಳ್ಳವರೇ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಲಕ್ಷಣಗಳಿಲ್ಲದೆ, ಸೋಂಕುಳ್ಳವರಿಗೆ ಒಂದೆರಡು ದಿನದಲ್ಲಿ ಮೈಸೂರಲ್ಲಿ ಹೋಂ  ಐಸೋಲೇಷನ್‌ ವ್ಯವಸ್ಥೆ ಜಾರಿಗೊಳಿಸುವುದಾಗಿ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್‌ ಸಡಿಲಿಕೆ ನಂತರ ನಿರೀಕ್ಷೆಯಂತೆ ಮೈಸೂರು ಸೇರಿದಂತೆ ಎಲ್ಲಾ  ಜಿಲ್ಲೆಗಳಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ, ಸಾವಿನ ಸಂಖ್ಯೆ ಯೂ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಸೋಂಕಿತರ ಸಂಖ್ಯೆಗೆ ಅನು ಗುಣವಾಗಿ ಜಿಲ್ಲಾಡಳಿತ ಅಗತ್ಯ ಮುನ್ನೆ ಚ್ಚರಿಕಾ ಕ್ರಮ ಕೈಗೊಂಡಿದೆ ಎಂದರು.

ತಪಾಸಣೆ ಸಾಧ್ಯವಿಲ್ಲ: ಮೈಸೂರಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಬೇರೆ ಜಿಲ್ಲೆಗಳಿಂದ ಬರುವವರನ್ನು ತಡೆಗಟ್ಟಲು ಗಡಿ ಬಂದ್‌ ಮಾಡುವಂತೆ ಸಾರ್ವಜನಿಕರ ಒತ್ತಾಯ ಕೇಳಿ ಬಂದಿದೆ. ಅದರಲ್ಲೂ ಬೆಂಗಳೂರಿಂದ ಬರುವವರನ್ನು  ತಪಾಸಣೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಹಿಂದೆ ಕಳಸ್ತವಾಡಿ ಬಳಿ ತಪಾಸಣೆ ಮಾಡಲಾಗುತ್ತಿತ್ತು. ಅನ್‌ಲಾಕ್‌ ಆದ ಬಳಿಕ ನಿಮಿಷಕ್ಕೆ ನೂರಾರು ವಾಹನ ಚಲಿಸುತ್ತಿರುತ್ತವೆ. ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲು  ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರಿ ಕಚೇರಿ ಬಂದ್‌ ಮಾಡಲ್ಲ: ಕೋವಿಡ್‌ 19 ಹೆಚ್ಚುತ್ತಿದೆ ಅಂತ ಸರ್ಕಾರಿ ಕಚೇರಿಗಳನ್ನು ಬಂದ್‌ ಮಾಡಲು ಸಾಧ್ಯವಿಲ್ಲ. ರೈತರು ಕೈಷಿ ಕೆಲಸಗಳಿಗೆ ಸರ್ಕಾರಿ ಕಚೇರಿಗಳನ್ನೇ ಅವಲಂಬಿಸಿದ್ದಾರೆ. ನಾವು ಅವರನ್ನು ಬರಬೇಡಿ ಎಂದು  ಹೇಳಲು ಆಗುವುದಿಲ್ಲ. ಆದರೆ ಅನವಶ್ಯಕ ವಾಗಿ ಎಲ್ಲಿಯೂ ಓಡಾಡಬಾರದು. ಸುಮ್ಮನೆ ಕಚೇರಿಗಳಿಗೆ ಅಲೆದಾಡಬೇಡಿ. ಇದರಿಂದ ಎಲ್ಲರಿಗೂ ತೊಂದರೆ ಆಗುತ್ತದೆ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next