ಬೆಳ್ತಂಗಡಿ: ವಸತಿ ಯೋಜನೆ ಯಡಿ ಹಲವಾರು ಕಡೆ ಅಕ್ರಮಗಳು ಕಂಡುಬಂದ ಹಿನ್ನೆಲೆಯಲ್ಲಿ ಅನುದಾನ ತಡೆಹಿಡಿಯಲಾಗಿತ್ತು. ಪ್ರಸಕ್ತ ಗ್ರಾ.ಪಂ.ಗಳ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಕರೆದು ಸೂಕ್ತ ಫಲಾನುಭವಿಗಳ ಪಟ್ಟಿ ತಯಾರಿಸಿ ಗೃಹ ಸಚಿವರೊಂದಿಗೆ ಚರ್ಚಿಸ ಲಾಗಿದೆ. ಶೀಘ್ರವೇ ವಸತಿ ಯೋಜನೆ ಫಲಾನುಭವಿಗಳಿಗೆ ಬಾಕಿ ಅನುದಾನ ಬಿಡುಗಡೆ ಮಾಡುವುದಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.
ಮಡಂತ್ಯಾರು ಗ್ರಾ.ಪಂ. ಸಭಾಭವನ ದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು, ದ.ಕ. ಜಿ.ಪಂ. ಮಂಗಳೂರು, ತಾ.ಪಂ. ಬೆಳ್ತಂಗಡಿ, ಗ್ರಾ.ಪಂ. ಮಡಂತ್ಯಾರು ಇದರ ವತಿ ಯಿಂದ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಪಂಚಾಯತ್‌ರಾಜ್ ವ್ಯವಸ್ಥೆ ಜಾರಿ ಬಳಿಕ ಕಟ್ಟಕಡೆಯ ವ್ಯಕ್ತಿಗೂ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮಹತ್ತರ ಬದಲಾವಣೆ ಕಂಡಿದೆ. ರಾಜ್ಯದಲ್ಲಿ 99 ಸಾವಿರ ಗ್ರಾ.ಪಂ. ಸದಸ್ಯರಲ್ಲಿ 52 ಸಾವಿರ ಮಹಿಳೆಯರೇ ಇದ್ದಾರೆ. ಗ್ರಾ.ಪಂ.ಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ಶೇ. 75ಕ್ಕೂ ಹೆಚ್ಚು ತೆರಿಗೆ ಸಂಗ್ರಹಿಸುವ ಗ್ರಾ.ಪಂ.ಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಸರಕಾರ ತೀರ್ಮಾನಿಸಿದೆ ಎಂದರು.
ಶಾಸಕ ಹರೀಶ್ ಪೂಂಜ ಅವರು ನೂತನ ಸಭಾಭವನ, ನಗದು ರಹಿತ ವ್ಯವಸ್ಥೆಗೆ ಚಾಲನೆ ನೀಡಿ, ಮಹಾತ್ಮಾ ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯ ಕನಸನ್ನು ಪ್ರಧಾನಿ ಮೋದಿ ಮುಂದುವರಿ ಸಿದ್ದು, ಅದನ್ನು ಮಡಂತ್ಯಾರು ಗ್ರಾ.ಪಂ. ಸಾಕಾರಗೊಳಿಸಿದೆ. ಮಡಂತ್ಯಾರು ಗ್ರಾ.ಪಂ. ಅಭಿವೃದ್ಧಿ ದೃಷ್ಟಿಯಿಂದ ನನ್ನ ಅವಧಿಯಲ್ಲಿ ವಿವಿಧ ಕಾಮಗಾರಿಗಳಿಗೆ 4 ಕೋ. ರೂ. ಮಂಜೂರಾಗಿ ಅನುಷ್ಟಾನಗೊಳಿಸಲಾ ಗಿದೆ. ನೀರಿಂಗಿಸುವಿಕೆ, ಪ್ಲಾಸ್ಟಿಕ್ ಮುಕ್ತ ಗ್ರಾ.ಪಂ., ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡುವ ಮೂಲಕ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಬೇಕು. ಸರಕಾರ ದಿಂದ ಇನ್ನಷ್ಟು ಅನುದಾನ ಮಂಜೂರಿಗೆ ಪ್ರಯತ್ನಿಸುವು ದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ. ಹರೀಶ್‌ಕುಮಾರ್ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಗ್ರಾ.ಪಂ. ಸದಸ್ಯರು ಜನರಿಗೆ ಮೂಲ ಸೌಕರ್ಯ ಒದಗಿಸಲು ಉತ್ತಮ ಸೇವೆ ನೀಡಬೇಕು. ಅಂತರ್ಜಲಕ್ಕೆ ಗ್ರಾ.ಪಂ. ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ. ಸರಕಾರದ ಅನುದಾನ ವನ್ನು ಸಮರ್ಪಕವಾಗಿ ಬಳಸಿದರೆ ಗ್ರಾಮದ ಉತ್ಕೃಷ್ಟ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಮಡಂತ್ಯಾರು ಗ್ರಾ.ಪಂ. ಸಾಕ್ಷಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷ ಗೋಪಾಕೃಷ್ಣ ಕೆ. ಪ್ರಸ್ತಾವಿಸಿದರು. ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪಂ. ಸದಸ್ಯೆ ವಸಂತಿ ಲಕ್ಷ್ಮಣ ಕುಲಾಲ್, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಇ. ಜಯರಾಮ್, ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ರಾಜಶೇಖರ ಶೆಟ್ಟಿ ಬಿ., ಮಡಂತ್ಯಾರು ವಾಣಿಜ್ಯ, ಕೈಗಾರಿಕಾ ಮತ್ತು ಸೇವಾ ಉದ್ದಿಮೆದಾರರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಬಿ., ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತ ಚಂದ್ರಕಾಂತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಡಂತ್ಯಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ. ಸ್ವಾಗತಿಸಿ, ಗ್ರಾ.ಪಂ. ಸದಸ್ಯ ಕಾಂತಪ್ಪ ಗೌಡ ವಂದಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ನಿರೂಪಿಸಿದರು.
ಸಾಧಕರಿಗೆ ಸಮ್ಮಾನ
ಪೂಂಜಾಲಕಟ್ಟೆ ಕರ್ನಾಟಕ ಶಾಲೆ ಮುಖ್ಯೋಪಾಧ್ಯಾಯ ಮೋನಪ್ಪ ಕೆ., ಶಿಕ್ಷಕ ಜೆರಾಲ್ಡ್ ಫೆರ್ನಾಂಡಿಸ್, ರಿತ್ವಿಕ್ ಅಲೆವೂರಾಯ, ದೀಪಾ ಕೆ.ಎಸ್. ಕುಂಜತ್ತೋಡಿ, ರಾಜಶೇಖರ ಶೆಟ್ಟಿ ಭಂಡಾರಿಗುಡ್ಡೆ ಅವರನ್ನು ಸಮ್ಮಾನಿಸಲಾಯಿತು. ನೂತನ ಸಭಾಭವನ, ಬಸವನಗುಡಿ ಸಾರ್ವಜನಿಕ ಶೌಚಾಲಯ, ನಗದು ರಹಿತ ವ್ಯವಸ್ಥೆ, ಅಕ್ಷರ ಕರಾವಳಿ ಅಂಗನವಾಡಿ ಕಟ್ಟಡ ಶಿಲಾನ್ಯಾಸ, ನೂತನ ಬಸ್ ತಂಗುದಾಣ ಉದ್ಘಾಟನೆ, ಪ್ಲಾಸ್ಟಿಕ್ ಸಂಗ್ರಹಣ ಕೊಠಡಿ ಉದ್ಘಾಟನೆ, ರಸ್ತೆ ಉದ್ಘಾಟನೆ ಸಹಿತ ವಿವಿಧ ಕಾಮಗಾರಿಗಳನ್ನು ಲೋಕಾರ್ಪಣೆ ಗೊಳಿಸಲಾಯಿತು.
ಮಾದರಿ ಪಂಚಾಯತ್.
ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿದರೆ ಊರಿನ ಅಭಿವೃದ್ಧಿ ಅಸಾಧ್ಯ. ಮಡಂತ್ಯಾರು ಗ್ರಾ.ಪಂ. ಗಾಂಧಿ ಪುರಸ್ಕಾರ ಪಡೆದು ಸಾಧನೆಯ ಪಥದಲ್ಲಿದ್ದು, ರಾಷ್ಟ್ರಕ್ಕೆ ಮಾದರಿಯಾದ ಪಂಚಾಯತ್ ಆಗಲು ಪ್ರಯತ್ನಿಸಿದೆ. ಶಾಸಕರ ಮೂಲಕ ಸರಕಾರದಿಂದ ಇನ್ನಷ್ಟು ಅನುದಾನ ಮಂಜೂರುಗೊಳಿಸಲು ಶ್ರಮಿಸುತ್ತೇನೆ.
– ಕೋಟ ಶ್ರೀನಿವಾಸ್ ಪೂಜಾರಿ, ಉಸ್ತುವಾರಿ ಸಚಿವರು