Advertisement
1. ವೆಜ್ ಕಟ್ಲೆಟ್ಮಧ್ಯಾಹ್ನ ಮಾಡಿದ ಪಲ್ಯ ಮಿಕ್ಕಿದ್ದರೆ, ಅದನ್ನು ಹಾಗೆಯೇ ಪಾತ್ರೆಯಲ್ಲಿ ಮುಚ್ಚಿಡಿ. ಅದರ ಜೊತೆಗೆ ಒಂದೆರಡು ತರಕಾರಿಗಳನ್ನು ಸೇರಿಸಿ, ಸಂಜೆಗೆ ಸ್ನ್ಯಾಕ್ಸ್ ತಯಾರಿಸಬಹುದು.
Related Articles
ಬೇಕಾಗುವ ಸಾಮಗ್ರಿ: ಬೆಳಗ್ಗೆ ಮಾಡಿದ ಅನ್ನ-1 ಕಪ್, ಹೆಚ್ಚಿದ ಈರುಳ್ಳಿ-1 ಕಪ್, ಬೇಯಿಸಿದ ಬಟಾಣಿ- 1/2 ಕಪ್, ಜೀರಿಗೆ- 1 ಚಮಚ, ಆಮ್‌ಚೂರ್ ಪುಡಿ- 1 ಚಮಚ, ಎಣ್ಣೆ ಹಾಗೂ ಉಪ್ಪು.
Advertisement
ಮಾಡುವ ವಿಧಾನ: ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಇಟ್ಟು ಅದರಲ್ಲಿ ಈರುಳ್ಳಿ ಹುರಿದು, ಜೀರಿಗೆ ಹಾಕಿ. ಅದಕ್ಕೆ ಬೇಯಿಸಿದ ಬಟಾಣಿ ಹಾಗೂ ಅನ್ನ ಹಾಕಿ ಚೆನ್ನಾಗಿ ಮಗುಚಿ. ನಂತರ ಆಮ್‌ಚೂರ್ ಪುಡಿ, ಉಪ್ಪು ಉದುರಿಸಿದರೆ ಜೀರಾ ರೈಸ್ ಸಿದ್ಧ.
3. ಪಲ್ಯ-ಆಲೂ ಬೋಂಡ ಬೇಕಾಗುವ ಸಾಮಗ್ರಿ: ಮಿಕ್ಕಿದ ಪಲ್ಯ- 1 ಕಪ್, ಬೇಯಿಸಿದ ಆಲೂಗಡ್ಡೆ- 2, ಅರಶಿನ ಪುಡಿ-1/4 ಚಮಚ, ಅಚ್ಚಖಾರದ ಪುಡಿ-1 ಚಮಚ, ಗರಂ ಮಸಾಲ ಪುಡಿ- 2 ಚಮಚ, ಚಿರೋಟಿ ರವೆ -1 ಕಪ್, ಉಪ್ಪು ಹಾಗೂ ಸಕ್ಕರೆ- ರುಚಿಗೆ ತಕ್ಕಂತೆ, ಎಣ್ಣೆ- ಕರಿಯಲು ಮಾಡುವ ವಿಧಾನ: ಪಲ್ಯದ ಜೊತೆ ಆಲೂಗಡ್ಡೆ ಸೇರಿಸಿ ಮಗುಚಿ. ಅದಕ್ಕೆ ಅಚ್ಚಖಾರದ ಪುಡಿ, ಗರಂ ಮಸಾಲ ಪುಡಿ, ಉಪ್ಪು ಹಾಗೂ ಸಕ್ಕರೆ ಸೇರಿಸಿ, ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ 10 ನಿಮಿಷ ಹಾಗೇ ಬಿಡಿ. ನಂತರ ಚಿರೋಟಿ ರವೆಯಲ್ಲಿ ಆಲೂಗಡ್ಡೆ ಉಂಡೆಗಳನ್ನು ಹೊರಳಾಡಿಸಿ, ವೃತ್ತಾಕಾರವಾಗಿ ತಟ್ಟಿ ಎಣ್ಣೆಯಲ್ಲಿ ಕರಿಯಿರಿ. ಬೋಂಡವನ್ನು ಟೊಮೇಟೊ ಸಾಸ್ ಜೊತೆಗೆ ಸವಿದರೆ ಬಲು ರುಚಿ. 4. ಪೋಹ ಡಿಲೈಟ್
ಬೇಕಾಗುವ ಪದಾರ್ಥ: ಪುಡಿ ಮಾಡಿದ ತೆಳು ಅವಲಕ್ಕಿ -1 ಕಪ್, ಹುಣಸೆಹಣ್ಣಿನ ರಸ-1/4 ಕಪ್, ಸಾರಿನ ಪುಡಿ -2 ಚಮಚ, ಬೆಲ್ಲ -1 ತುಂಡು, ಉಪ್ಪು- ರುಚಿಗೆ, ಕರಿಬೇವು – 3 ಎಸಳು, ಹುರಿದ ಕಡಲೆ ಬೀಜ -1 ಕಪ್, ಗರಂ ಮಸಾಲ ಪುಡಿ -1 ಚಮಚ, ಸಾಸಿವೆ. ಮಾಡುವ ವಿಧಾನ: ತೆಳು ಅವಲಕ್ಕಿಯನ್ನು ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿ ಮಾಡಿ, ಹುಣಸೆ ಹಣ್ಣಿನ ನೀರಿನಲ್ಲಿ 2 ಗಂಟೆ ನೆನೆಸಿಡಿ. ಅವಲಕ್ಕಿ ನೆನೆದ ನಂತರ ಬೇರೆ ಪಾತ್ರೆಗೆ ವರ್ಗಾಯಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಕಡಲೆಕಾಯಿ ಬೀಜ ಹಾಗೂ ಕರಿಬೇವಿನ ಎಸಳು ಹಾಕಿ ಒಗ್ಗರಣೆ ಹಾಕಿ. ಸಾಸಿವೆ ಸಿಡಿದ ನಂತರ ಅವಲಕ್ಕಿ ಹಾಕಿ ಬೆರೆಸಿ, ಉಪ್ಪು ಹಾಗೂ ಗರಂ ಮಸಾಲ ಪುಡಿ ಹಾಕಿ ಬೆರೆಸಿ. (ಒಗ್ಗರಣೆ ಹಾಕಿದ ತೆಳು ಅವಲಕ್ಕಿ ಉಳಿದಿದ್ದರೆ ಅದನ್ನು ಬಳಸಿಯೂ ಪೋಹ ತಯಾರಿಸಬಹುದು) ಹೀರಾ ರಮಾನಂದ್