ಬೆಂಗಳೂರು: ಸಂಚಾರ ಪೊಲೀಸರಿಗೆ ಶೀಘ್ರದಲ್ಲೇ ಬಾಡಿ ಕ್ಯಾಮೆರಾ ಕೊಡಲಾಗುವುದು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್
ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿದರು.
ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಅವರು, ಪೊಲೀಸರ ಭ್ರಷ್ಟಾಚಾರ ತಡೆಗೆ ತಪಾಸಣೆ ನಡೆಸುವವರಿಗೆ ಬಾಡಿ ಕ್ಯಾಮೆರಾ ನೀಡಬೇಕು ಎಂದು ಹಿಂದಿನಿಂದಲೂ ಸಾರ್ವಜನಿಕರು ಒತ್ತಾಯಿಸುತ್ತ ಬಂದಿದ್ದರು. ಈ ಹಿನ್ನೆಲೆಯಲ್ಲಿ ಕೆಲವರಿಗೆ ಬಾಡಿ ಕ್ಯಾಮೆರಾ ನೀಡಲಾಗಿತ್ತು. ಆದರೆ, ಪೂರ್ಣ ಪ್ರಮಾಣದಲ್ಲಿ ನೀಡಲಾಗಿರಲಿಲ್ಲ. ಪಸ್ತುತ ಶೇ.50ರಷ್ಟು ಸಂಚಾರ ಪೊಲೀಸರಿಗೆ ಕ್ಯಾಮೆರಾ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ
ಇದೇ ವೇಳೆ ಮಾತನಾಡಿದ ಸಾರ್ವಜನಿಕರು, ಪೊಲೀಸರು ಸುಖಾಸುಮ್ಮನೆ ತಡೆದು ಪರಿಶೀಲಿಸುತ್ತಾರೆ ಎಂದು ರವಿಕಾಂತೇಗೌಡ ಅವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಸಾಮಾನ್ಯವಾಗಿ ಪೊಲೀಸರು ಎರಡು ರೀತಿಯ ತಪಾಸಣೆ ಮಾಡುತ್ತಾರೆ. ಕಣ್ಣಿಗೆ ಕಾಣಿಸುವಂಥ ಸಂಚಾರ ನಿಯಮ ಉಲ್ಲಂಘನೆ ಇರದಿದ್ದರೆ ತಡೆಯಬಾರದು. ಆದರೆ, ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಹಾಗೂ ಹಳೆಯ ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ತಡೆದು ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಂಚಾರ ಪೊಲೀಸರು, ವಾಹನ ತಪಾಸಣೆ ವೇಳೆ ಸಾರ್ವಜನಿಕರ ಜತೆಗೆ ಕಟುವಾಗಿ ವರ್ತಿಸಬಾರದು. ಕಾನೂನು ಉಲ್ಲಂ ಸಿದವರೊಂದಿಗೆ ಸೌಜನ್ಯದಿಂದಲೇ ವರ್ತಿಸಿ ದಂಡ ವಿಧಿಸಬೇಕು.ಒಂದು ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಹೊಸದಾಗಿ
ನೇಮಕಗೊಂಡವರಿಗೆ ಸೌಜನ್ಯದಿಂದ ವರ್ತಿಸುವ ಕುರಿತು ಸಾಫ್ಟ್ ಸ್ಕಿಲ್ಸ್ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.