ಕಲಾದಗಿ: ಪುನರ್‌ವಸತಿ ಕೇಂದ್ರದಲ್ಲಿನ ಹಕ್ಕು ಪತ್ರಗಳನ್ನು ಸಂತ್ರಸ್ತರಿಗೆ ಕೊಡಲು ಅಗತ್ಯ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಬಾಗಲಕೋಟೆ ಪುನರ್ ವಸತಿ ಮತ್ತು ಪುನರ್ ನಿರ್ಮಾಣ, ಕೃ.ಮೇ. ಯೋ ವಿಶೇಷ ಜಿಲ್ಲಾ ಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ಕಲಾದಗಿ ಪುನರ್‌ವಸತಿ ಕೇಂದ್ರಕ್ಕೆ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಅ ಧಿಕಾರಿಗಳೊಂದಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಕಲಾದಗಿ ಗ್ರಾಮ ಮುಳುಗಡೆ ಸರ್ವೇ ಸಂದರ್ಭದಲ್ಲಿ 189 ಮನೆಗಳು ಮುಳುಗಡೆ ಸರ್ವೇ ಕಾರ್ಯದಲ್ಲಿ ಬಿಟ್ಟು ಹೋಗಿವೆ ಎಂದು ಮನವಿ ಅರ್ಜಿಗಳು ಬಂದಿದ್ದದ್ದವು, ಅವುಗಳ ಪರಿಶೀಲನೆಗೆ ನಮ್ಮ ಅಧಿ ಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, 189 ಅರ್ಜಿಗಳಲ್ಲಿ 57 ಮನೆಗಳು ಅರ್ಹ ಮನೆಗಳು ಎಂದು ವರದಿ ಮಾಡಿದ್ದು ಅಂತಹ 57 ಮನೆಯವರಿಗೆ ಸರಕಾರದಿಂದ ಸಿಗುವ ಸೌಲಭ್ಯ ಮತ್ತು ಪರಿಹಾರ ಒದಗಿಸಲು ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.
ಪುನರ್ವಸತಿ ಕೇಂದ್ರದಲ್ಲಿ ಬೆಳೆದ ಮುಳ್ಳುಕಂಟಿ ತೆರವು ಮಾಡಲು ಒಂದು ತಿಂಗಳಲ್ಲಿ ಶೀಘ್ರ ಟೆಂಡರ್ ಕರೆದು ಕ್ರಮ ಜರುಗಿಸಲಾಗುವುದು, ಮುಳುಗಡೆ ಸಂತ್ರಸ್ತರು ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದಲ್ಲಿ ತ್ವರಿತವಾಗಿ ಹಕ್ಕು ನೀಡಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಒಬ್ಬರೂ ಹಕ್ಕು ಪತ್ರಕ್ಕಾಗಿ ಮನವಿ ಅರ್ಜಿ ಸಲ್ಲಿಸಿದಲ್ಲಿ ಅವರಿಗೂ ಹಕ್ಕು ಪತ್ರ ನೀಡಲಾಗುವುದು, 500, 1000, 1500 ಜನರು ಹಕ್ಕು ಪತ್ರಕ್ಕೆ ಮನವಿ ನೀಡಿದಲ್ಲಿ ಎಲ್ಲರಿಗೂ ಒಮ್ಮೆಲೇ ಒಂದು ಕಾರ್ಯಕ್ರಮದಡಿ ನೀಡಲಾಗುವುದು ಎಂದರು.
ಪುನರ್ ವಸತಿ ಮತ್ತು ಪುನರ್ ನಿರ್ಮಾಣ ವಿಶೇಷ ಭೂಸ್ವಾ ಧೀನ ಅಧಿ ಕಾರಿ ಶ್ವೇತಾ ಬೀಡಕರ್, ಹೆಚ್ಚುವರಿ ವಿಶೇಷ ಭೂಸ್ವಾ ಧೀನ ಅ ಧಿಕಾರಿ ಅಭೀದ್ ಗದ್ಯಾಳ, ಅಧಿಧೀಕ್ಷಕ ಅಭಿಯಂತರ ಹನಮಂತಪ್ಪ ದಾಸರ, ಅಧಿ ಕಾರಿ ರಮೇಶ ಕೋಲಾರ, ಕಾರ್ಯನಿರ್ವಾಹಕ ಅ ಧಿಕಾರಿ ಎಸ್.ಸಿ.ಚೆನ್ನವರ್, ಬಿ.ಎಚ್. ಪೂಜಾರ ಸಹಾಯಕ ಕಾರ್ಯನಿರ್ವಾಹಕ ಅ ಧಿಕಾರಿ, ಗ್ರಾಪಂ ಅಧ್ಯಕ್ಷ ಜಮೀರ್ ಜಮಾದಾರ್, ಸದಸ್ಯ ಎಂ.ಎ.ತೇಲಿ, ಫಕೀರಪ್ಪ ಮಾದರ, ಶ್ಯಾಮ ಕಾಳೆ, ಮುನ್ನಾ ಕಲಾಸಿ ಇನ್ನಿತರರು ಇದ್ದರು.’