Advertisement
ಜಿಲ್ಲೆಯಲ್ಲೇ ಅತೀ ಹೆಚ್ಚಿನ ಪ್ರಯಾಣಿಕರು ಕಾಸರಗೋಡು ರೈಲು ನಿಲ್ದಾಣವನ್ನು ಅವಲಂಬಿಸಿದ್ದಾರೆ. ಪ್ರಯಾಣಿಕರು ಅನುಕೂಲ ಕ್ಕಾಗಿ ಐದು ಟಿಕೆಟ್ ಕೌಂಟರ್‌ಗಳಿವೆ. ಆದರೆ ಈ ಐದು ಟಿಕೆಟ್ ಕೌಂಟರ್‌ಗಳ ಪೈಕಿ ಒಂದು ಟಿಕೆಟ್ ಕೌಂಟರ್ ಮಾತ್ರವೇ ಕಾರ್ಯಾಚರಿಸುತ್ತಿದೆ. ಕೆಲವೊಮ್ಮೆ ಎರಡು ಟಿಕೆಟ್ ಕೌಂಟರ್ ಕಾರ್ಯಚರಿಸುವುದಿದೆ. ಒಂದೇ ಟಿಕೆಟ್ ಕೌಂಟರ್ ಕಾರ್ಯಚರಿಸುವುದರಿಂದಾಗಿ ರೈಲು ಪ್ರಯಾ ಣಿಕರು ಸರಿದಿಯಲ್ಲಿ ನಿಂತು ಟಿಕೆಟ್ ಸಿಗದೆ ರೈಲು ಪ್ರಯಾಣವನ್ನು ಮೊಟಕುಗೊಳಿ ಸಬೇಕಾದ ಘಟನೆಗಳು ನಡೆಯುತ್ತಿವೆ.
Related Articles
ಸರದಿಯ ಕೊನೆಯಲ್ಲಿ ಅಥವಾ ಮಧ್ಯದಲ್ಲಿ ನಿಂತಿರುವ ಪ್ರಯಾಣಿಕರು ಸರದಿಯ ಮುಂಭಾಗದಲ್ಲಿ ಪರಿಚಯಸ್ಥರು ಇದ್ದಲ್ಲಿ ಅವರಲ್ಲಿ ಟಿಕೆಟ್‌ಗಾಗಿ ಹಣ ನೀಡುವ ಪ್ರಸಂಗಗಳು ನಡೆಯುತ್ತಿರುವುದರಿಂದ ಸರದಿಯಲ್ಲಿ ನಿಂತ ಇತರ ಪ್ರಯಾಣಿಕರು ವಿರೋಧ ವ್ಯಕ್ತಪಡಿಸುತ್ತಾರೆ. ಇದರಿಂದಾಗಿ ಪ್ರಯಾಣಿಕರ ಮಧ್ಯೆ ವಾಗ್ವಾದ, ಹೊಡೆದಾಟ ನಡೆಯುವ ಪ್ರಸಂಗಗಳು ಎದುರಾಗುತ್ತಿವೆ.
Advertisement
ಸಂಸದರಿಂದ ಮನವಿಕಾಸರಗೋಡು ಜಿಲ್ಲೆಯ ರೈಲು ಪ್ರಯಾಣಿಕರ ವಿವಿಧ ಸಮಸ್ಯೆಗಳಿಗೆ ಪರಿಹಾರ ಹಾಗು ಇನ್ನಷ್ಟು ಸೌಲಭ್ಯ ಒದಗಿಸಬೇಕೆಂದು ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಅವರು ದಕ್ಷಿಣ ರೈಲ್ವೇ ಜನರಲ್ ಮೆನೇಜರ್ ರಾಹುಲ್ ಜೈನ್ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಅದರಲ್ಲೊಂದು ಕಾಸರಗೋಡು ರೈಲು ನಿಲ್ದಾಣದಲ್ಲಿ ಹೆಚ್ಚಿನ ಟಿಕೆಟ್ ಕೌಂಟರ್ ತೆರೆಯಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಗಮನ ಹರಿಸಿ
ಉದ್ದನೆಯ ಕ್ಯೂ ಇರುವುದರಿಂದ ಸರದಿಯಲ್ಲಿ ನಿಂತ ಎಲ್ಲಾ ಪ್ರಯಾಣಿಕರಿಗೆ ಟಿಕೆಟ್ ಸಿಗದೆ ರೈಲು ಗಾಡಿ ಸಿಗದೆ ಪ್ರಯಾಣ ಮೊಟಕುಗೊಳ್ಳುವುದು ಸಾಮಾನ್ಯವಾಗಿದೆ. ಇಂತಹ ಸಮಸ್ಯೆಯನ್ನು ಪರಿಹರಿಸಲು ಹೆಚ್ಚಿನ ಟಿಕೆಟ್ ಕೌಂಟರ್ ಆರಂಭಿಸಬೇಕು. ಈ ಮೂಲಕ ಪ್ರಯಾಣಿಕರಿಗೆ ಸುಲಭದಲ್ಲಿ ಟಿಕೆಟ್ ಪಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರೈಲು ಅಧಿಕಾರಿಗಳು ಇತ್ತ ಗಮನ ಹರಿಸಬೇಕು.
– ದಾಮೋದರನ್, ರೈಲ್ವೇ ಪ್ರಯಾಣಿಕ