ಬೆಂಗಳೂರು: ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮಂಗಳವಾರದಿಂದ 14 ದಿನಗಳವರೆಗೆ ಅನ್ವಯವಾಗುವಂತೆ ಕಠಿಣ ನಿಯಮಗಳನ್ನು ರೂಪಿಸಿದೆ. ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟಕ್ಕೆ ನಿಗದಿತ ಸಮಯ ಹೊರತುಪಡಿಸಿ ಉಳೆದಲ್ಲ ಕಾರ್ಯಗಳಿಗೆ ನಿರ್ಬಂಧ ಹೇರಲಾಗಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿ ಆರಂಭಿಸುತ್ತಿದ್ದಂತೆ ಮದ್ಯ ಪ್ರಿಯರು ಮದ್ಯದಂಗಡಿಗಳತ್ತ ದೌಡಾಯಿಸಿದ್ದರು. ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ರಾಜ್ಯದ ಹಲವೆಡೆ ಮದ್ಯದಂಗಡಿ ಮುಂದೆ ಸರತಿ ಸಾಲು ಕಂಡುಬಂತು.
ಇದನ್ನೂ ಓದಿ:ಹೆಚ್ಚುತ್ತಿರುವ ಕೋವಿಡ್: ‘ರಾಜ್ಯದಲ್ಲಿ 14 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್’
ಲಾಕ್ ಡೌನ್ ಆದರೆ ಮದ್ಯದಂಗಡಿ ಮುಚ್ಚುತ್ತದೆ ಎಂದು ಗ್ರಾಹಕರು ಬಾಕ್ಸ್ ಗಳಲ್ಲಿ ಮದ್ಯ ಖರೀದಿಸುತ್ತಿರುವ ದೃಶ್ಯಗಳು ಹಲವೆಡೆ ಕಂಡುಬಂತು. ಹೆಚ್ಚಿನ ಗ್ರಾಹಕರು ಮುಂದಿನ ಎರಡು ವಾರಗಳಿಗೆ ಸಾಕಾಗುವಷ್ಟು ಮದ್ಯ ಖರೀದಿಯಲ್ಲಿ ತೊಡಗಿದ್ದಾರೆ.
ಬೆಳಗ್ಗೆ ಆರು ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರ ಅವಕಾಶ ನೀಡಿದೆ. ಮದ್ಯ ಖರೀದಿಗೂ ಈ ಸಮಯದಲ್ಲಿ ಅವಕಾಶ ನೀಡಿದೆ. ಆದರೆ ಮದ್ಯದಂಗಡಿಗಳಲ್ಲಿ ಕೇವಲ ಪಾರ್ಸೆಲ್ ಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: 14 ದಿನದ ಬಂದ್: ಅಂತಾರಾಜ್ಯ ಸಂಚಾರಕ್ಕೂ ನಿರ್ಬಂಧ, ಮದ್ಯ ಖರೀದಿಗೆ ಅವಕಾಶ; ಏನಿದೆ? ಏನಿರಲ್ಲ?