Advertisement
ಈ ಹಿಂದೆ ನಿಶಾ ಅವರು ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಆರಂಭಿಸಿದ್ದ “ಓಬವ್ವ ಪಡೆ’, ಸಾಗರದಲ್ಲಿ ಆರಂಭಿಸಿದ್ದ “ರಾಣಿ ಚೆನ್ನಮ್ಮ ಪಡೆ’ಯ ಮಾದರಿಯಲ್ಲಿಯೇ ಉಡುಪಿಯಲ್ಲಿ “ಅಬ್ಬಕ್ಕ ಪಡೆ’ ರಚಿಸಿದ್ದಾರೆ. ಈ ಪಡೆಯಲ್ಲಿ ಮಹಿಳಾ ಎಸ್‌ಐ ಅಥವಾ ಎಎಸ್‌ಐ, ಇಬ್ಬರು ಮಹಿಳಾಪೊಲೀಸ್ ಕಾನ್‌ಸ್ಟೆಬಲ್‌ಗಳು ಹಾಗೂ ಓರ್ವ ಚಾಲಕ ಇರುತ್ತಾರೆ. ಸದ್ಯ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಎಸ್‌ಐ ರೇಖಾ ಅವರು ಈ ಪಡೆಯ ನೇತೃತ್ವ ವಹಿಸಿದ್ದಾರೆ.
ಮಹಿಳೆಯ ಸುರಕ್ಷೆಗಾಗಿ ಗಸ್ತುವಾಹನ ಸಹಿತ ಪ್ರತ್ಯೇಕ ಪಡೆ ಬೇಕೆಂಬ ಬೇಡಿಕೆ ಇತ್ತು. ಅಬ್ಬಕ್ಕ ಪಡೆ ಮುಖ್ಯವಾಗಿ ಮಹಿಳೆಯರ ಸುರಕ್ಷತೆಗಾಗಿ ಗಸ್ತು ನಡೆಸಿ ಸ್ಥಳದಲ್ಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಿದೆ. ಆರಂಭದಲ್ಲಿ ಹಗಲು ವೇಳೆ ನಗರದಲ್ಲಿ ಕಾರ್ಯಾಚರಿಸಲಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಮತ್ತು ಸೌಲಭ್ಯ (ವಾಹನ, ಸಿಬಂದಿ) ಲಭ್ಯತೆ ಆಧಾರದಲ್ಲಿ ಇತರ ಪ್ರದೇಶಗಳಿಗೂ ವಿಸ್ತರಿಸುವ ಯೋಜನೆ ಇದೆ. ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ತೊಂದರೆಯಾಗುತ್ತಿದ್ದರೆ ಸದ್ಯ ಕಂಟ್ರೋಲ್ ರೂಂ ಅಥವಾ ಮಹಿಳಾ ಠಾಣೆಗೆ ದೂರು ನೀಡಬಹುದು. ಮುಂದೆ ಅಬ್ಬಕ್ಕ ಪಡೆಗೆ ಪ್ರತ್ಯೇಕ ಸಂಪರ್ಕ ಸಂಖ್ಯೆ ನೀಡುತ್ತೇವೆ.
-ನಿಶಾ ಜೇಮ್ಸ್ , ಎಸ್‌ಪಿ ಉಡುಪಿ ಎಲ್ಲಿ ಕಾರ್ಯಾಚರಣೆ?
ಬಸ್ ನಿಲ್ದಾಣ, ಪಾರ್ಕ್ ಪರಿಸರ, ಕಾಲೇಜು, ಶಾಲೆ ಪರಿಸರ ಮೊದಲಾದೆಡೆ ಹೆಚ್ಚಿನ ನಿಗಾ ವಹಿಸಲಿದೆ. ಸದ್ಯ ಉಡುಪಿ ಮತ್ತು ಮಣಿಪಾಲ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಿಸಲಿದೆ. ಅಬ್ಬಕ್ಕ ಪಡೆಗೆ ಒದಗಿಸಲಾಗಿರುವ ವಾಹನ ಕೂಡ ಪಿಂಕ್ ಬಣ್ಣವನ್ನು ಹೊಂದಿದೆ.