Advertisement

ತ್ತೈಮಾಸಿಕ ಸಭೆ: ಅ.2ರ ವೇಳೆಗೆ 4 ತಾಲೂಕು ಬಯಲು ಶೌಚಮುಕ್ತ

09:36 AM Jul 29, 2017 | Team Udayavani |

ದಾವಣಗೆರೆ: ಅಕ್ಟೋಬರ್‌ 2ರ ಗಾಂಧಿ ಜಯಂತಿ ವೇಳೆಗೆ ಜಿಲ್ಲೆಯ 4 ತಾಲೂಕುಗಳು ಬಯಲು ಶೌಚಮುಕ್ತ ಆಗಲಿವೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಎಸ್‌. ಅಶ್ವತಿ ತಿಳಿಸಿದ್ದಾರೆ.

Advertisement

ಶುಕ್ರವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಸ್ವಚ್ಛ ಭಾರತ್‌ ಮಿಷನ್‌ನ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ರಚಿಸಲಾಗಿರುವ ನೀರು ಮತ್ತು ನೈರ್ಮಲ್ಯ ಸಮಿತಿಯ ಮೊದಲನೇ ತ್ತೈಮಾಸಿಕ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಅವರು, ಅಕ್ಟೋಬರ್‌ 2ರ ಗಾಂಧಿ  ಜಯಂತಿಯಂದು ಜಿಲ್ಲೆಯ ಹೊನ್ನಾಳಿ, ದಾವಣಗೆರೆ, ಹರಿಹರ ಮತ್ತು ಚನ್ನಗಿರಿಯನ್ನು ಬಯಲು ಬಹಿರ್ದೆಸೆಮುಕ್ತ ತಾಲೂಕುಗಳೆಂದು ಘೋಷಿಸಲಾಗುವುದು. ಹರಪನಳ್ಳಿ ಮತ್ತು ಜಗಳೂರು ತಾಲೂಕುಗಳನ್ನು ಡಿಸೆಂಬರ್‌ ಮಾಹೆಯಲ್ಲಿ ಬಯಲು ಬಹಿರ್ದೆಸೆ ಮುಕ್ತ ತಾಲೂಕುಗಳೆಂದು ಘೋಷಿಸಲಾಗುವುದು ಎಂದರು. 

ಗರ್ಬಿಣಿಯರ ಮನೆಯಲ್ಲಿ ಗುಂಡಿ ತೋಡಬಾರದೆಂಬ ಸಂಪ್ರದಾಯವಿದ್ದರೂ ಮನವೊಲಿಕೆಯ ನಂತರ ಶೌಚಾಲಯ ಕಟ್ಟಿಸಿಕೊಳ್ಳಲು ಒಪ್ಪಿರುವ ಘಟನೆಗಳೂ ಇವೆ. ಗರ್ಬಿಣಿ, ಬಾಣಂತಿಯರಿಗೆ ಶೌಚಾಲಯ ಅತ್ಯಗತ್ಯವಾಗಿದ್ದು ಅವರ ಮನೆಗಳಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಲು ಮನವೊಲಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷೆ ಉಮಾ ಎಂ ಪಿ ರಮೇಶ್‌ ಮಾತನಾಡಿ, ಹೊನ್ನಾಳಿ, ಚನ್ನಗಿರಿ ಸೇರಿದಂತೆ ಜಿಲ್ಲೆಯ ಗ್ರಾಮಗಳಲ್ಲಿ ಮನವೊಲಿಸುವ ಕಾರ್ಯದಲ್ಲಿ ತಾವೂ ಸಹ ತೊಡಗಿದ್ದು, ಅಧಿಕಾರಿಗಳು ಅನುಸರಣೆ ಕಾರ್ಯದಲ್ಲಿ ನಿಯಮಿತವಾಗಿ ತೊಡಗಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ಶ್ರಮಿಸಿದರೆ
ಪರಿಣಾಮಕಾರಿ ಫಲಿತಾಂಶ ಸಾಧ್ಯ ಎಂದರು. ಯೋಜನಾ ಸಹ ನಿರ್ದೇಶಕ ಶಶಿಧರ ಮಾತನಾಡಿ, 2017-18ನೇ ಸಾಲಿನಲ್ಲಿ ಒಟ್ಟು 408.98 ಲಕ್ಷ ಅನುದಾನದಲ್ಲಿ 794 ಸಂಖ್ಯೆಯಲ್ಲಿ ಹಾಡು ಮತ್ತು ನಾಟಕ ಚಟುವಟಿಕೆಗಳು, 233 ಗೋಡೆ ಬರಹಗಳು, 794 ಬೀದಿನಾಟಕಗಳು, 23 ಮೇಳಗಳು, 233 ಹೋರ್ಡಿಂಗ್‌ ಮತ್ತು ಬ್ಯಾನರ್‌ಗಳು, 23 ಗುಂಪು ಸಭೆಗಳು, 6 ವಸ್ತು ಪ್ರದರ್ಶನಗಳು, 794 ಶ್ರವ್ಯ ದಶ್ಯ ಪ್ರಚಾರ, 1800 ಸ್ಕೂಲ್‌ ಜಾಥಾ, 46 ಜಾಗತಿ ಮತ್ತು ಕಾರ್ಯಾಗಾರಗಳು, 794 ಇಂಟರ್‌-ಪರ್ಸನಲ್‌ ಸಂವಹನ, 50000 ಐಇಸಿ ಸಾಮಗ್ರಿಗಳ ವಿತರಣೆ ಸೇರಿದಂತೆ ವಿವಿಧ ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ನಟರಾಜ್‌, ಜಿ ಪಂ ಉಪ ಕಾರ್ಯದರ್ಶಿ ಜಿ.ಎಸ್‌. ಷಡಕ್ಷರಪ್ಪ, ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next