ಕ್ವೀನ್ಸ್‌ಟೌನ್ (ನ್ಯೂಜಿಲೆಂಡ್): ಅಂಡರ್-19 ವಿಶ್ವಕಪ್ ಕ್ರಿಕೆಟ್‌ನ ಜ.26ರಂದು ತಡರಾತ್ರಿ ನಡೆಯಲಿರುವ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಕ್ವೀನ್ಸ್‌ಟೌನ್ ಇವೆಂಟ್ಸ್ ಸೆಂಟರ್‌ನಲ್ಲಿ ಪಂದ್ಯ ನಡೆಯಲಿದ್ದು ಬೆಳಗ್ಗೆ 3 ಗಂಟೆಗೆ ಪಂದ್ಯ ಆರಂಭವಾಗಲಿದೆ. ಗುಂಪು ಬಿ ನಲ್ಲಿರುವ ಭಾರತ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಿತು. ಆಸೀಸ್ ತಂಡಕ್ಕೆ 100 ರನ್‌ಗಳಿಂದ ಸೋಲುಣಿಸಿ ಶುಭಾರಂಭ ಮಾಡಿತ್ತು. ಮತ್ತೂಂದು ಪಂದ್ಯದಲ್ಲಿ ಪೃಥ್ವಿ ಶಾ ಪಡೆ ಪಾಪುಅ ತಂಡವನ್ನು ಸುಲಭವಾಗಿ ಸೋಲಿಸಿತ್ತು. ಮತ್ತೆ ಜಿಂಬಾಬ್ವೆ ತಂಡವನ್ನು ಭಾರತ 10 ವಿಕೆಟ್‌ಗಳಿಂದ ಮಣಿಸಿ ಹ್ಯಾಟ್ರಿಕ್ ಜಯ ಸಾಧಿಸಿತ್ತು. ಇದೀಗ ಮತ್ತೂಂದು ದೊಡ್ಡ ಹೋರಾಟಕ್ಕೆ ಭಾರತ ಅಣಿಯಾಗಿದೆ.
ಭಾರತದ್ದು ಬಲಿಷ್ಠ ಬ್ಯಾಟಿಂಗ್: ನಾಯಕ ಪೃಥ್ವಿ ಶಾ ಸೇರಿದಂತೆ ಭಾರತದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಮನೋಜ್, ಶುಭಂ ಗಿಲ್, ಹಿಮಾಂಶು ರಾಣಾ ಭರವಸೆ ಮೂಡಿಸಿದ್ದಾರೆ. ಅಂಕುರ್ ರಾಯ್, ಕೆ.ಎಲ್.ನಾಗರಕೋಟಿ, ಶಿವಮ್ ಮವಿ ಬೌಲಿಂಗ್‌ನಿಂದ ಎದುರಾಳಿಗಳ ಕಟ್ಟಿಹಾಕಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹಿಂದಿನ ಪಂದ್ಯಗಳಲ್ಲಿ ಇವರು ನೀಡಿದ ಪ್ರದರ್ಶನದಿಂದ ಭಾರತ ಮತ್ತೆ ಮಿಂಚು ಹರಿಸಬಲ್ಲದು. ಗೆಲುವು ಕಂಡುಕೊಳ್ಳಬಹುದು ಎನ್ನುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯಾಗಿದೆ.
ಬಾಂಗ್ಲಾಕ್ಕೆ ಸೋಲಿನ ಭಯ: ಬಾಂಗ್ಲಾ ಲೀಗ್ ಹಂತದಲ್ಲಿ ಒಟ್ಟಾರೆ 3 ಪಂದ್ಯವನ್ನು ಆಡಿದೆ. ನಮೀಬಿಯಾ, ಕೆನಡಾ ವಿರುದ್ಧದ ಪಂದ್ಯದಲ್ಲಿ ಗೆದ್ದಿದೆ. ಆದರೆ ಬಲಿಷ್ಠ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋತಿದೆ. ಹೀಗಾಗಿ ಭಾರತ ವಿರುದ್ಧ ಬಾಂಗ್ಲಾಕ್ಕೆ ಗೆಲುವು ಅಷ್ಟು ಸುಲಭವಾಗಿ ದಕ್ಕಲಾರದು. ಇದು ಬಾಂಗ್ಲಾ ತಂಡಕ್ಕೆ ಸ್ವಲ್ಪ ಮಟ್ಟಿನ ಭಯ ತಂದಿರಿಸಿದೆ.
ಭಾರತ ಸಂಭಾವ್ಯ ತಂಡ: ಹರ್ವಿಕ್ ದೇಸಾಯಿ, ಶುಭಂ ಗಿಲ್, ಅಭಿಷೇಕ್ ಶರ್ಮ, ಆರ್.ಪರಾಗ್, ಪೃಥ್ವಿ ಶಾ (ನಾಯಕ), ಮನ್‌ಜೋತ್, ಎ.ಎಸ್.ರಾಯ್, ಕೆ.ಎಲ್.ನಾಗರಕೋಟಿ, ಶಿವಂ ಮಾವಿ, ಶಿವ ಸಿಂಗ್, ಅರ್ಶ್‌ದೀಪ್ ಸಿಂಗ್
ಸ್ಥಳ: ಕ್ವೀನ್ಸ್‌ಟೌನ್ ಇವೆಂಟ್ಸ್ ಸೆಂಟರ್
ಸಮಯ: ರಾತ್ರಿ 3.00ಕ್ಕೆ