Advertisement

967 ಪೊಲೀಸ್‌ ಸಿಬ್ಬಂದಿಗೆ ಕ್ವಾರಂಟೈನ್‌

04:31 AM May 23, 2020 | Team Udayavani |

ಮಂಡ್ಯ: ಕೆ.ಆರ್‌.ಪೇಟೆ ಪೊಲೀಸ್‌ ಸಿಬ್ಬಂದಿಗೆ ಕೋವಿಡ್‌ 19 ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಕ್ವಾರಂಟೈನ್‌ ನಲ್ಲಿರುವ ಎಲ್ಲಾ ಪೊಲೀಸ್‌ ಸಿಬ್ಬಂದಿಗೆ ಗಂಟಲದ್ರವ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ ಎಂದು ಗೃಹ ಸಚಿವ  ಬಸವರಾಜ  ಬೊಮ್ಮಾಯಿ ಹೇಳಿದರು. ಬೆಂಗಳೂರಿನಿಂದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮೈಸೂರಿಗೆ ತೆರಳುತ್ತಿದ್ದ ವೇಳೆ ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಸಚಿವರು, ಈಗಾಗಲೇ 967 ಪೊಲೀಸ್‌ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಅವರಲ್ಲಿ 490 ಮಂದಿಗೆ ಗಂಟಲದ್ರವ ಪರೀಕ್ಷೆ ಮಾಡಿದ್ದು, ಉಳಿದವರಿಗೂ ಮಾಡಲಾಗುವುದು ಎಂದರು.

Advertisement

ಅಗತ್ಯ ಸೌಲಭ್ಯ ಕಲ್ಪಿಸಿ: ಪೊಲೀಸ್‌ ಸಿಬ್ಬಂದಿಗೆ ಪಿಪಿಇ ಕಿಟ್‌, ಸ್ಯಾನಿಟೈಜರ್‌, ಮಾಸ್ಕ್, ಗ್ಲೌಸ್‌ ನೀಡಲಾಗಿದೆ. ಅವರ ಕುಟುಂಬದ ಆರೋಗ್ಯದ ಬಗ್ಗೆಯೂ ಗಮನ ಹರಿಸುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯೊಳಗೆ ನುಸುಳಿ ಬರುವವರನ್ನು ಹಿಡಿದು ಪರೀಕ್ಷೆ  ಮಾಡಿ, ಕ್ವಾರಂಟೈನ್‌ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾ ಗಿದೆ. ರಾತ್ರಿ ವೇಳೆ ಚೆಕ್‌ಪೋಸ್ಟ್‌ ಬಿಟ್ಟು ವಾಮ ಮಾರ್ಗದಲ್ಲಿ ಬಂದಿರುವವರ ವಿರುದಟಛಿ ಪ್ರಕರಣ ದಾಖಲಿಸಿ  ಕ್ವಾರಂಟೈನ್‌ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಹಲ್ಲೆ ಮಾಡಿದರೆ ಶಿಕ್ಷೆ: ಕೋವಿಡ್‌ 19 ವಾರಿಯರ್ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಹಲ್ಲೆಕೋರರಿಗೆ 3 ವರ್ಷ ಕಠಿಣ ಶಿಕ್ಷೆಗೊಳಪಡಿಸಲು ಸರ್ಕಾರ ತೀರ್ಮಾನ ಕೈಗೊಂಡಿದ್ದು, ಶೀಘ್ರ ಆದೇಶ  ಹೊರಬೀಳಲಿದೆ ಎಂದರು. ಎಸ್ಪಿ ಪರಶುರಾಮ, ಎಎಸ್ಪಿ ಪೃಥ್ವಿ, ಸಿಪಿಐ ಪ್ರಭಾ ಕರ್‌, ಪಿಎಸ್‌ಐಗಳಾದ ಮಂಜೇಗೌಡ, ಮೋಹನ್‌ಪಟೇಲ್‌,  ಪ್ರೊಬೆಷನರಿ ಪಿಎಸ್‌ಐ ರವಿಕುಮಾರ್‌ ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next