Advertisement

21 ಜನ ತಬ್ಲೀಘಿಗಳಿಗೆ ಕ್ವಾರಂಟೈನ್‌

08:14 AM May 09, 2020 | Suhan S |

ಹೊಳಲ್ಕೆರೆ: ಗುಜರಾತ್‌ ರಾಜ್ಯದ ಸೂರತ್‌ನಲ್ಲಿ ನಡೆದ ಮುಸ್ಲಿಂ ಧರ್ಮಸಭೆಯಲ್ಲಿ ಭಾಗವಹಿಸಿದ್ದ 21 ಜನ ತಬ್ಲೀಘಿಗಳನ್ನು ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ ಕ್ವಾರಂಟೈನ್‌ ಮಾಡಲಾಗಿದೆ ಎಂದು ತಹಶೀಲ್ದಾರ್‌ ಕೆ. ನಾಗರಾಜ್‌ ತಿಳಿಸಿದ್ದಾರೆ.

Advertisement

ಚಿತ್ರದುರ್ಗ ಮತ್ತು ದಾವಣಗೆರೆ ತಾಲೂಕಿಗೆ ಸೇರಿದ ತಬ್ಲೀಘಿ ಗಳು ಸೂರತ್‌ನಲ್ಲಿ ಧರ್ಮಸಭೆ ಮುಗಿಸಿಕೊಂಡು ಕ್ವಾರಂಟೈನ್‌ ಆಗಿದ್ದರು. ಅಲ್ಲಿಂದ ಅಥಣಿ ಮಾರ್ಗವಾಗಿ ಹೊಳಲ್ಕೆರೆಗೆ ಜಿಲ್ಲಾಡಳಿತದ ಆದೇಶದಂತೆ ಆಗಮಿಸಿದ್ದಾರೆ. ಅವರ ಆರೋಗ್ಯ ತಪಾಸಣೆ ಬಳಿಕ ಗಂಟಲು ದ್ರವ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದರು.

ವಸತಿ ಶಾಲೆ ಸುತ್ತ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಿದೆ. ಜತೆಗೆ 5 ಕೊಠಡಿಯಲ್ಲಿ ತಲಾ ನಾಲ್ಕು ಜನರಂತೆ ವಾಸಿಸಲು ಆಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ರೋಜಾ ಸಮಯವಾಗಿರುವುದರಿಂದ ವಿಶೇಷ ಭೋಜನ ಹಾಗೂ ಪ್ರಾರ್ಥನಾ  ಸೌಲಭ್ಯ ಒದಗಿಸಲಾಗಿದೆ. ನಿತ್ಯ ವೈದ್ಯಕೀಯ ತಪಾಸಣೆಗೆ ವಿಶೇಷ ಆರೋಗ್ಯ ಸೇವಾ ತಂಡವನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರ ವಿರೋಧ: ತಬ್ಲಿಘಿ ಗಳ ಕ್ವಾರಂಟೈನ್‌ ಮಾಡಿರುವ ಜಿಲ್ಲಾಡಳಿತದ ಕ್ರಮವನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದು, ತಕ್ಷಣ ತಬ್ಲೀಘಿಗಳನ್ನು ಅವರ ಮಾತೃ ತಾಲೂಕುಗಳಿಗೆ ಕಳುಹಿಸಿಕೊಡುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ತಾಲೂಕು ವಕೀಲರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next