Advertisement
ಗುರುವಾರ ಹೈದ್ರಾಬಾದ ಕರ್ನಾಟಕ ಶಿಕ್ಷಣ (ಎಚ್‌ಕೆಇ) ಸಂಸ್ಥೆಯ ಐಟಿಐ ಕಾಲೇಜಿನ ನೂತನ ಕಟ್ಟಡ ನಿರ್ಮಾಣ, ಪಿಡಿಎ ಕಾಲೇಜಿನ ವಿದ್ಯಾರ್ಥಿನಿಯರ ನೂತನ ವಸತಿ ಕಟ್ಟಡ ನಿರ್ಮಾಣ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ನೂತನ ಬ್ಲಾಕ್ ನಿರ್ಮಿಸುವ, ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ನೆಲಮಹಡಿ ಗ್ರಂಥಾಲಯ ಬ್ಲಾಕ್ಕಟ್ಟಡಕ್ಕೆ ಶಿಲಾನ್ಯಾಸ (ಅಡಿಗಲ್ಲು) ನೆರವೇರಿಸಿ ಅವರು ಮಾತನಾಡಿದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ಎಚ್‌ಕೆಇ ಸಂಸ್ಥೆ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ ಮಾತನಾಡಿ, ಪಿಡಿಎ ಇಂಜಿನಿಯರಿಂಗ್ ಕಾಲೇಜು ಎಐಸಿಟಿಇ ಎಸ್‌ಸಿ ಎಸ್ಟಿ ಮಹಿಳಾ ವಸತಿ ನಿಲಯಕ್ಕೆ 3.40 ಕೋಟಿ ರೂ., ಐಟಿಐ ಕಟ್ಟಡಕ್ಕೆ 1.95 ಕೋಟಿ ರೂ., ಗ್ರಂಥಾಲಯ ಬಾಕಿ ಕಾಮಗಾರಿಗೆ 70 ಲಕ್ಷ ರೂ., ಎಂಎಆರ್ ಎಂಸಿ ಗ್ರಂಥಾಲಯ ಕಟ್ಟಡಕ್ಕೆ 1.75 ಕೋಟಿ ರೂ., ಮೆಕ್ಯಾನಿಕಲ್ ಇಂಜಿನಿಯರಿಂಗ್ ಸಿ ಬ್ಲಾಕ್‌ಗೆ 2.50 ಕೋಟಿ ರೂ., ಮೌಲಾನಾ ಆಜಾದ್ ಸ್ಮಾರಕ ವಸತಿ ನಿಲಯ ನವೀಕರಣ ಕಾಮಗಾರಿಗೆ 1.25 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ಮುಖ್ಯವಾಗಿ 25 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಸಕ್ತ ವರ್ಷದಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಹೋಮಿಯೋಪೆಥಿ, ಫಾರ್ಮಸಿ ಸೇರಿದಂತೆ ಏಳು ಯೋಜನೆಗಳನ್ನು 49 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಂಸ್ಥೆಯ ಆಡಳಿತ ಮಂಡಳಿ ಅನುಮತಿ ನೀಡಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಶಾಸಕ ಶರಣಬಸವಪ್ಪ ದರ್ಶನಾಪುರ ಮಾತನಾಡಿ, ಎಚ್ ಕೆಇ ಸಂಸ್ಥೆ ಹೈ.ಕ. ಭಾಗದ ಜೀವ. ಮರದಂತೆ ಬೆಳೆದಿದೆ. ಇನ್ಮುಂದೆ ಆಲದ ಮರದಂತೆ ಬೆಳೆಯಲಿ. ಮುಖ್ಯವಾಗಿ ಬಸವೇಶ್ವರ ಆಸ್ಪತ್ರೆ ಸೇವೆಯಲ್ಲಿ ಉತ್ಕೃಷ್ಟತೆಗೆ ಹೆಚ್ಚು ಗಮನ ಕೊಡಿ ಎಂದು ಸಲಹೆ ನೀಡಿದರು.
ಎಚ್‌ಕೆಇ ಉಪಾಧ್ಯಕ್ಷ ಡಾ| ಶಿವಾನಂದ ದೇವರಮನಿ, ಆಡಳಿತ ಮಂಡಳಿ ಕಾರ್ಯದರ್ಶಿ ಡಾ| ನಾಗೇಂದ್ರ ಮಂಠಾಳೆ, ಜಂಟಿ ಕಾರ್ಯದರ್ಶಿ ಗಂಗಾಧರ ಏಲಿ, ಸದಸ್ಯರಾದ ಡಾ| ಎಸ್.ಬಿ . ಕಾಮರೆಡ್ಡಿ, ಅರುಣಕುಮಾರ ಪಾಟೀಲ, ಉದಯ ಚಿಂಚೋಳಿ, ಡಾ| ಸಂಪತ್ ಲೋಯಾ, ಸತೀಶ್ಚದಂದ್ರ ಹಡಗಿಲ್ ಮಠ, ವಿಜಯಕುಮಾರ ದೇಶಮುಖ, ಅನೀಲಕುಮಾರ ಮರಗೋಳ, ಡಾ| ಬಸವರಾಜ ಪಾಟೀಲ ಅಷ್ಟೂರ, ಉದ್ಯೋಗ ಮತ್ತು ತರಬೇತಿ ಇಲಾಖೆ ಜಂಟಿ ನಿರ್ದೇಶಕ ವೈಜಗೊಂಡ ಮುಂತಾದವರಿದ್ದರು
ಬೆಂಗಳೂರಿನಲ್ಲಿ ಎಚ್‌ಕೆಇ ರಾಷ್ಟ್ರೀಯ ಪಬ್ಲಿಕ್ ಶಾಲೆ ಕಲಬುರಗಿ: ಸ್ವತ್ಛ, ಪಾರದರ್ಶಕ ಆಡಳಿತದ ಧ್ಯೇಯದೊಂದಿಗೆ ಆಡಳಿತಕ್ಕೆ ಬರಲಾಗಿದ್ದು, ಬೆಂಗಳೂರಿನಲ್ಲಿ 2019ರಿಂದ
ಹೈದ್ರಾಬಾದ ಕರ್ನಾಟಕ ಶಿಕ್ಷಣ (ಎಚ್‌ಕೆಇ) ಸಂಸ್ಥೆ ವತಿಯಿಂದ ರಾಷ್ಟ್ರೀಯ ಪಬ್ಲಿಕ್ ಶಾಲೆ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ ಹೇಳಿದರು. ಗುರುವಾರ ಸಂಸ್ಥೆಯ ವಿವಿಧ ಕಟ್ಟಡಗಳ ಶಿಲಾನ್ಯಾಸ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಅವರು, ಬೆಂಗಳೂರಿನ ಶಾಲೆಯಲ್ಲಿ ವಿಶ್ವ ಮಟ್ಟದ ಶೈಕ್ಷಣಿಕ ಗುಣಮಟ್ಟ ನೀಡಲಾಗುವುದು. ಶಾಲೆಯ ಕಟ್ಟಡ ಹಾಗೂ ಇತರ ಕೆಲಸಕ್ಕೆ 22 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಅದೇ ರೀತಿ ಬೀದರ ಹಾಗೂ ರಾಯಚೂರಲ್ಲಿ ಸಹ 10 ಹಾಗೂ 5 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಪಬ್ಲಿಕ್ ಮಾದರಿಯ ಶಾಲೆಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಕಟ್ಟಡ ಪ್ರಾರಂಭಕ್ಕೆ ಅಡಿಗಲ್ಲು ನೆರವೇರಿಸಲಾಗುವುದು ಎಂದು ತಿಳಿಸಿದರು. ಸಂಸ್ಥೆಯ ಅನುದಾನಿತ ಪದವಿ ಕಾಲೇಜುಗಳಲ್ಲಿ 80ಕ್ಕೂ ಹೆಚ್ಚು ಉಪನ್ಯಾಸಕರು ಹಾಗೂ ಅನುದಾನಿತ ಪ್ರೌಢ ಶಾಲೆಗಳಲ್ಲಿ ಎಂಟು ಹುದ್ದೆಗಳ ಭರ್ತಿಗೆ ಸರ್ಕಾರದ ಅನುಮತಿ ಕೇಳಲಾಗಿದೆ ಎಂದು ತಿಳಿಸಿದರು. ಸಂಸ್ಥೆಯ ನಿವೃತ್ತ ನೌಕರರ ಗ್ರ್ಯಾಚುಟಿ ಬಹಳ ವರ್ಷದಿಂದ ಬಾಕಿ ಇತ್ತು. ಸರ್ಕಾರದ ನಿಯಮಾನುಸಾರ 9.50 ಕೋಟಿ
ರೂ. ನೀಡಲಾಗುತ್ತಿದೆ. 141 ನಿವೃತ್ತಿ ಉದ್ಯೋಗಿಗಳಿಗೆ ಇವತ್ತೆ ಚೆಕ್ ನೀಡಿ ದೃಢ ಐತಿಹಾಸಿಕ ಹೆಜ್ಜೆ ಇಡಲಾಗಿದೆ. ಸ್ಪಷ್ಟ,
ಪಾರದರ್ಶಕ ಆಡಳಿತ, ಹಣಕಾಸು ಶಿಸ್ತನ್ನು ಕಾಪಾಡಲು ಆಡಳಿತ ಮಂಡಳಿ ಬದ್ಧವಾಗಿದೆ. ತಾವು ಅಧ್ಯಕ್ಷರಾದ ನಂತರ ವೈದ್ಯಕೀಯ ಹಾಗೂ ತಾಂತ್ರಿಕ ಸಂಸ್ಥೆಗಳನ್ನು ಅತ್ಯಾಧುನಿಕ ಹಾಗೂ ಉನ್ನತ ದರ್ಜೆಯ ಆಧುನಿಕ ಉಕರಣಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. 5 ಕೋಟಿ ರೂ. ಗಳನ್ನು ಇದಕ್ಕಾಗಿ ಖರ್ಚು ಮಾಡಲಾಗಿದೆ. ಕಳೆದ ವರ್ಷ 75 ಲಕ್ಷ ರೂ ಸಿಬ್ಬಂದಿಗಳ ಎಲ್‌ಐಸಿ, ಎಫ್‌ಬಿಎಫ್ ಹಾಗೂ ಇತರ ಬಾಕಿ ತುಂಬಲಾಗಿದೆ. ಸಮಯಕ್ಕೆ ಸರಿಯಾಗಿ ನೌಕರರ ಸಂಬಳ ಹೆಚ್ಚಳ, ಬಡ್ತಿ ಸೌಲಭ್ಯ ಹಾಗೂ ಅವರ ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ಅತಿಥಿ ಉಪನ್ಯಾಸಕರು ಕಲಾ, ವಾಣಿಜ್ಯ ವಿಜ್ಞಾನ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಸಂಬಳ ಹೆಚ್ಚಿಸಲಾಗಿದೆ ಎಂದು ತಿಳಿಸಿದರು. ಸಂಸ್ಥೆಗಳ ಕಾಲೇಜುಗಳಲ್ಲಿ ಯಾವುದೇ ಅಶಿಸ್ತು ನಡೆದರೆ ಆಯಾ ಸಂಸ್ಥೆಯನ್ನೇ ಜವಾಬ್ದಾರಿಯನ್ನಾಗಿ ಮಾಡಲಾಗಿದೆ.
ಸಂಸ್ಥೆಯನ್ನು ಆರ್ಥಿಕವಾಗಿ ಸದೃಢವಾಗಿಸಿ ಅಗತ್ಯ ಖರ್ಚುಗಳನ್ನು ನಿಭಾಯಿಸಲು ಶಕ್ತವನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾರ್ಯರೂಪಕ್ಕೆ ಬರಬಹುದಾದ ಕಾರ್ಯ ಯೋಜನೆ ರೂಪಿಸಲಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅವಶಕ್ಯತೆಗೆ ತಕ್ಕಂತೆ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗೆ ಪುನರ್ ಮನನ ತರಬೇತಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ವಿಶ್ವದ ಬಗ್ಗೆ ಚಿಂತಿಸು, ಸ್ಥಳೀಯರಂತೆ ವರ್ತಿಸು ಎನ್ನುವ ಗುರಿ ಇಟ್ಟುಕೊಂಡು ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.
ಶಹಾಬಾದ ಹಾಗೂ ಆಳಂದದಲ್ಲಿ ಫಾರ್ಮಸಿ ಕಾಲೇಜು ಪ್ರಾರಂಭಿಸಲಾಗುವುದು ಎಂದು ಇದೆ ವೇಳೆ ತಿಳಿಸಿದರು. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಸಂಸ್ಥೆ ಏಳ್ಗೆ ಮಾಡಬೇಕೆಂಬ ಮಹಾದಾಸೆಯಿಂದ ಎಚ್‌ಕೆಇ ಆಡಳಿತ ಮಂಡಳಿ ಚುಕ್ಕಾಣಿ
ಹಿಡಿದಿದ್ದಿರಿ. ಭೀಮನ ಶಕ್ತಿ ಹೊಂದಿರುವ ಡಾ|ಭೀಮಾಶಂಕರ ಬಿಲಗುಂದಿ ಅವರು ಯಾರೇ ತಪ್ಪು ಮಾಡಿದರೆ ಹಾಗೂ ಕರ್ತವ್ಯಲೋಪ ಎಸಗಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ. ಇದುವೇ ಸಂಸ್ಥೆ ಬೆಳವಣಿಗೆಗೆ ಪೂರಕವಾಗುತ್ತದೆ.
ಪೂಜ್ಯ ಡಾ| ಶರಣಬಸಪ್ಪ ಅಪ್ಪ, ಅಧ್ಯಕ್ಷ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ